ಕರ್ನಾಟಕ

karnataka

ETV Bharat / state

20 ತಿಂಗಳಿಂದ ಇರಾನ್‌ನಲ್ಲಿ ಸಿಲುಕಿದ್ದ ಭಟ್ಕಳದ ಯುವಕ ತಾಯ್ನಾಡಿಗೆ ವಾಪಸ್‌

ಉದ್ಯೋಗದ ನಿಮಿತ್ತ ಇರಾನ್‌ಗೆ ತೆರಳಿ ನೌಕೆಯಲ್ಲಿ ಸಿಲುಕಿದ್ದ ಯಾಸೀನ್‌ ಕಳೆದ 20 ತಿಂಗಳುಗಳಿಂದ ಸಾಕಷ್ಟು ಸಂಕಷ್ಟ ಅನುಭವಿಸಿದ್ದನು. ಇಂದು ಯುವಕ ತಾಯ್ನಾಡಿಗೆ ಮರಳಿದ್ದಾನೆ.

Young Man returned to Bhatkal from Iran after 20 months
ಇರಾನ್‌ದಲ್ಲಿ ಸಿಲುಕಿದ್ದ ಭಟ್ಕಳದ ಯುವಕ ತಾಯ್ನಾಡಿಗೆ ವಾಪಸ್‌

By

Published : Aug 5, 2021, 9:05 PM IST

Updated : Aug 5, 2021, 10:42 PM IST

ಭಟ್ಕಳ:ಕುಟುಂಬವನ್ನು ಬಡತನದಿಂದ ಪಾರು ಮಾಡಲು ಉದ್ಯೋಗ ಅರಸಿ ಇರಾನ್‌ಗೆ ಹೋಗಿದ್ದ ಭಟ್ಕಳದ ಯುವಕ ಯಾಸಿನ್ ಶಾಹ ಮಕಾನ್ದಾರ್(31) ಕಳೆದ 20 ತಿಂಗಳುಗಳ ಕಾಲ ಯಾತನೆ ಅನುಭವಿಸಿ ತಾಯ್ನಾಡಿಗೆ ಮರಳಿದ್ದಾನೆ.

20 ತಿಂಗಳು ನೌಕೆಯಲ್ಲೇ ಬಂಧಿ:

ಭಟ್ಕಳದ ಆಜಾದ್‌ ನಗರದ ನಿವಾಸಿ ಯಾಸಿನ್‌ ಶಾಹ ಮಕಾನ್‌ದಾರ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳುವ ಸಲುವಾಗಿ ವೀಸಾ ಕೊಡಿಸುವ ಏಜೆಂಟ್‌ ಬಳಿ ಹೇಳಿಕೊಂಡಿದ್ದ. ಇರಾನ್‌ ನೌಕೆಯೊಂದರಲ್ಲಿ ಉತ್ತಮ ನೌಕರಿ ದೊರಕಿಸಿಕೊಡುವುದಾಗಿ ಹೇಳಿ ಏಜೆಂಟರು ವೀಸಾ ನೀಡಿದ್ದರು. ಇದನ್ನು ನಂಬಿದ್ದ ಈತ 20 ತಿಂಗಳು ಸಮುದ್ರದಲ್ಲಿ ನಿಂತುಕೊಂಡಿದ್ದ ನೌಕೆಯೊಂದರಲ್ಲಿಯೇ ಬಂಧಿಯಾಗಿದ್ದು ಊಟ, ತಿಂಡಿಗೂ ಪರದಾಡಿದ ಪ್ರಸಂಗ ನಡೆದಿತ್ತು.

ಹೇಗಾದರೂ ಮಾಡಿ ತಾಯ್ನಾಡಿಗೆ ಮರಳಲು ಹಂಬಲಿಸುತ್ತಿದ್ದ ಯಾಸೀನ್‌ಗೆ ಏಮ್ಸ್‌ ಇಂಡಿಯಾ ಫೋರಂನ ಶಿರಾಲಿಯ ಮುಝಪ್ಪರ್‌ ಶೇಖ್‌ ಮತ್ತವರ ತಂಡ ಬೆಂಬಲವಾಗಿ ನಿಂತು ಸಾಕಷ್ಟು ಪ್ರಯತ್ನ ನಡೆಸಿತ್ತು. ಭಾರತ ಮತ್ತು ಇರಾನ್‌ ಸರ್ಕಾರದ ಸಹಕಾರದಿಂದ ತಾಯ್ನಾಡಿಗೆ ಕರೆತರುವಲ್ಲಿ ಯಶಸ್ವಿಯಾಗಿದೆ. ಆತನನ್ನು ಬಿಡುಗಡೆಗೊಳಿಸಿದ್ದಲ್ಲದೆ ಆತನಿಗೆ ಬರಬೇಕಾಗಿದ್ದ 3,800 ಡಾಲರ್‌ ಸಂಬಳದಲ್ಲಿ 2000 ಡಾಲರ್‌ ಕೊಡಿಸುವಲ್ಲಿ ಕೂಡಾ ಫೋರ್ಂ ತಂಡ ಯಶಸ್ವಿಯಾಗಿದೆ.

ಈ ಕುರಿತಂತೆ ಮಾತನಾಡಿದ ಯಾಸೀನ್, ಕೊನೆಗೂ ನನ್ನ 20 ತಿಂಗಳ ವನವಾಸಕ್ಕೆ ತೆರೆಬಿದ್ದು ಅಲ್ಲಿ ಅನುಭವಿಸಿದ ಕಷ್ಟ ಹೇಳತೀರದು. ಒಂದು ಹೊತ್ತಿನ ಊಟಕ್ಕೂ ತೊಂದರೆ ಪಡಬೇಕಾದ ಸ್ಥಿತಿ ಎದುರಾಗಿತ್ತು. ನನ್ನನ್ನು ಕಷ್ಟದಿಂದ ಪಾರು ಮಾಡಿದ ಏಮ್ಸ್‌ ಇಂಡಿಯಾ ಫೋರಂನ ಶಿರಾಲಿ ಮುಝಫ್ಫರ್‌ ಶೇಖ್‌ ಹಾಗೂ ಭಟ್ಕಳ ಸಮುದಾಯದ ಯೂಸೂಫ್ ಬರ್ಮಾವರ್, ಸರಫ್ರಾಝ್ ಶೇಖ ಅಫ್ಝಲ್ ಎಸ್.ಎಂ ಹಾಗೂ ನ್ಯಾಯವಾದಿ ಯಾಸಿರ್ ಆರಾಫತ್ ಮಕಾದ್ದಾರ್​​​ರಿಗೆ ಧನ್ಯವಾದ ತಿಳಿಸಿದ್ದಾರೆ.

ಓದಿ: ಹಿರಿಯ IAS ಅಧಿಕಾರಿಗಳ ವರ್ಗಾವಣೆ..ರಾಜ್ಯ ಸರ್ಕಾರದಿಂದ ಆದೇಶ

ಕಳೆದ 20 ತಿಂಗಳಿಂದ ನಾನು ಇರಾನ್​​ನಲ್ಲಿ ತುಂಬಾ ಕಷ್ಟ ಮತ್ತು ನೋವು ಅನುಭವಿಸಬೇಕಾಗಿ ಬಂತು. ಏಜೆಂಟರುಗಳ ಮೂಲಕ ಯಾರು ಕೂಡ ವಿದೇಶಕ್ಕೆ ಉದ್ಯೋಗಕ್ಕಾಗಿ ಹೋಗಬೇಡಿ. ಇರಾನ್ ದೇಶಕ್ಕಂತೂ ಖಂಡಿತ ಬೇಡ ಎನ್ನುವ ಯಾಸಿನ್, ಅಲ್ಲಿ ಮೋಸಗಾರರೇ ತುಂಬಿಕೊಂಡಿದ್ದಾರೆ. ಭಾರತಕ್ಕೆ ಮರಳುವ ನನ್ನ ಕನಸನ್ನು ನನಸು ಮಾಡಿದ ಭಾರತೀಯ ದೂತಾವಾಸದ ಅಧಿಕಾರಿಗಳು, ಇರಾನ್ ಸರ್ಕಾರಕ್ಕೂ ನಾನು ಋಣಿಯಾಗಿದ್ದೇನೆ ಎಂದರು.

Last Updated : Aug 5, 2021, 10:42 PM IST

ABOUT THE AUTHOR

...view details