ಕರ್ನಾಟಕ

karnataka

ETV Bharat / state

ಅರಣ್ಯ ಇಲಾಖೆ ಅಧಿಕಾರಿಗಳ ವಾಹನ ಅಡ್ಡಗಟ್ಟಿ ಗ್ರಾಮಸ್ಥರಿಂದ ತರಾಟೆ!

ಮುಂಡಗೋಡಿನ ನಂದಿಗಟ್ಟಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಂದಲಕೇರಿಯಲ್ಲಿ ದನದ ಕೊಟ್ಟಿಗೆ ಕಟ್ಟಲು ಹುಸೇನ್ ಸಾಬ್ ಹುಲ್ಕೊಪ್ಪ ಎಂಬಾತ ಸಾಗ್ವಾನಿ ಮರಗಳನ್ನು ಕಡಿದು ಮನೆಯಲ್ಲಿ ಸಂಗ್ರಹಿಸಿ ಇಟ್ಟಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ಗ್ರಾಮಸ್ಥರು ಒಟ್ಟಾರೆ ಸೇರಿ ವಾಹನಕ್ಕೆ ದಿಗ್ಭಂಧನ ಹಾಕಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ನಂತರ ಪೊಲೀಸರ ಸಹಕಾರದಿಂದ ಅರಣ್ಯ ವಾಹನವನ್ನು ಗ್ರಾಮಸ್ಥರಿಂದ ಬಿಡಿಸಿಕೊಂಡು ಬಂದಿದ್ದಾರೆ.

ಅರಣ್ಯ ಇಲಾಖೆ

By

Published : Apr 3, 2019, 3:26 AM IST

ಶಿರಸಿ :ಅರಣ್ಯದಿಂದ ಸಾಗ್ವಾನಿ ಮರಗಳನ್ನು ಕಡಿದು ಮನೆಯಲ್ಲಿ ಸಂಗ್ರಹಿಸಿ ಇಟ್ಟಿದ್ದಾರೆ ಎಂಬ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಗ್ರಾಮಸ್ಥರು ಇಲಾಖೆ ವಾಹನ ಅಡ್ಡಗಟ್ಟಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ಮುಂಡಗೋಡ ತಾಲೂಕಿನ ಕೆಂದಲಗೇರಿ ಗ್ರಾಮದಲ್ಲಿ ನಡೆದಿದೆ.

ಮುಂಡಗೋಡಿನ ನಂದಿಗಟ್ಟಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಂದಲಕೇರಿಯಲ್ಲಿ ದನದ ಕೊಟ್ಟಿಗೆ ಕಟ್ಟಲು ಹುಸೇನ್ ಸಾಬ್ ಹುಲ್ಕೊಪ್ಪ ಎಂಬಾತ ಸಾಗ್ವಾನಿ ಮರಗಳನ್ನು ಕಡಿದು ಮನೆಯಲ್ಲಿ ಸಂಗ್ರಹಿಸಿ ಇಟ್ಟಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆಯ ಸಿಬ್ಬಂದಿಗೆ ಗ್ರಾಮಸ್ಥರು ಒಟ್ಟಾರೆ ಸೇರಿ ವಾಹನಕ್ಕೆ ದಿಗ್ಭಂಧನ ಹಾಕಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ಪೊಲೀಸರ ಸಹಕಾರದಿಂದ ಅರಣ್ಯ ವಾಹನವನ್ನು ಗ್ರಾಮಸ್ಥರಿಂದ ಬಿಡಿಸಿಕೊಂಡು ಬರಲಾಗಿದೆ.

ಅರಣ್ಯ ಇಲಾಖೆ ಅಧಿಕಾರಿಗಳ ವಾಹನ ಅಡ್ಡಗಟ್ಟಿ ಗ್ರಾಮಸ್ಥರಿಂದ ತರಾಟೆ

ಶ್ರೀಮಂತರನ್ನು ನೀವು ಏನು ಮಾಡುವುದಿಲ್ಲ. ಬಡವರ ಮನೆಯ ಮೇಲೆ ದಾಳಿ ನಡೆಸುತ್ತೀರಿ. ದಂಡ ಹಾಕುತ್ತೀರಿ. ಅರಣ್ಯದಲ್ಲಿ ಬಿದ್ದ ಕಟ್ಟಿಗೆ ತೆಗೆದುಕೊಂಡು ಬಂದರೂ ಹೆದರಿಸುತ್ತೀರಿ ಎಂದು ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ಪೊಲೀಸರು ಕಾನೂನು ಕೈಗೆ ಎತ್ತಿಕೊಳ್ಳದಂತೆ ಮನವಿ ಮಾಡಿಕೊಂಡ ಮೇಲೆ ವಾಹನವನ್ನು ಗ್ರಾಮಸ್ಥರು ಬಿಟ್ಟುಕೊಟ್ಟಿದ್ದಾರೆ.

ABOUT THE AUTHOR

...view details