ಉತ್ತರ ಕನ್ನಡ: ಅತಿವೃಷ್ಟಿಯಿಂದ ಅಪಾರ ಹಾನಿಯಾಗಿ ಸಂಕಷ್ಟದಲ್ಲಿದ್ದರೂ ಜಿಲ್ಲೆಯ ಸಿದ್ದಾಪುರ ತಾಲೂಕು ಹಳ್ಳಿಬೈಲ್ ನೆರೆ ಸಂತ್ರಸ್ತರು ಸ್ವಾತಂತ್ರ್ಯ ದಿನಾಚರಣೆ ಮಾಡಿ ದೇಶ ಪ್ರೇಮ ಮೆರೆದಿದ್ದಾರೆ. .
ಉತ್ತರ ಕನ್ನಡ: ಸಂಕಷ್ಟದ ನಡುವೆಯೂ ದೇಶಪ್ರೇಮ ಮೆರೆದ ನೆರೆ ಸಂತ್ರಸ್ತರು - Flood Effected People Celebrated Independence day
ಅತಿವೃಷ್ಟಿಯಿಂದ ಆಸ್ತಿ-ಪಾಸ್ತಿ ನಷ್ಟ ಹೊಂದಿ ಸಂಕಷ್ಟದಲ್ಲಿದ್ದರು ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಜನರು ಸ್ವಾತಂತ್ರ್ಯ ದಿನಾಚರಣೆ ಮಾಡಿ ದೇಶ ಪ್ರೇಮ ಮೆರೆದಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಧ್ವಜಾರೋಹಣ ನೆರೆವೇರಿಸಿ ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಸಂಭ್ರಮಿಸಿದರು.
ಸ್ವಾತಂತ್ರ್ಯ ದಿನಾಚರಣೆ
ಸಂತ್ರಸ್ಥರ ನೆಲೆಯಾದ ಹಳ್ಳಿಬೈಲ್ ಸರಕಾರಿ ಪ್ರೌಢಶಾಲೆಯಲ್ಲಿ ಧ್ವಜಾರೋಹಣ ನೆರವೇರಿಸಿ ವಿದ್ಯಾರ್ಥಿಗಳಿಗೆ ಸಿಹಿ ಹಂಚಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ ಹೆಗಡೆ ನೆರೆ ಸಂತ್ರಸ್ತರಿಗೆ ರಾಕಿ ಕಟ್ಟುವ ಮೂಲಕ ಧೈರ್ಯ ತುಂಬಿದರು. ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಚಂದ್ರು ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.