ಕಾರವಾರ (ಉತ್ತರ ಕನ್ನಡ):ಸಮುದ್ರದಲ್ಲಿ ಈಜಲು ತೆರಳಿದ್ದ ಯುವಕರಿಬ್ಬರು ನೀರುಪಾಲಾಗಿರುವ ಘಟನೆ ಕುಮುಟಾ ತಾಲೂಕಿನ ಗೋಕರ್ಣದ ಮುಖ್ಯ ಕಡಲತೀರದಲ್ಲಿ ನಡೆದಿದೆ.
ಮುಖ್ಯ ಕಡಲತೀರದ ಕರಿಯಪ್ಪನ ಕಟ್ಟೆ ಬಳಿ ಸಮುದ್ರಪಾಲಾಗಿದ್ದವರ ಪೈಕಿ 17 ವರ್ಷದ ಯುವಕ ಸುಹಾಸ್ ಮೃತದೇಹ ಪತ್ತೆಯಾಗಿದೆ.
ಪ್ರವಾಸಕ್ಕೆಂದು ಗೋಕರ್ಣಕ್ಕೆ ಬಂದ ಮಂಡ್ಯ ಯುವಕರು: ಸಮುದ್ರದಲ್ಲಿ ಈಜಲು ತೆರಳಿದ್ದಾಗ ಇಬ್ಬರು ನೀರುಪಾಲು - Kumuta Taluk
ಸಮುದ್ರದಲ್ಲಿ ಈಜಲು ತೆರಳಿದ ವೇಳೆ ಅಲೆಗಳ ಸೆಳೆತಕ್ಕೆ ಸಿಲುಕಿ ಇಬ್ಬರು ಯುವಕರು ನೀರು ಪಾಲಾಗಿದ್ದಾರೆ. ಓರ್ವನ ಮೃತದೇಹ ಪತ್ತೆಯಾಗಿದ್ದು, ಇನ್ನೋರ್ವನಿಗಾಗಿ ಶೋಧಕಾರ್ಯ ಮುಂದುವರೆದಿದೆ.
ಸದ್ಯ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಕಣ್ಮರೆಯಾಗಿರುವ ಮಂಡ್ಯ ಮೂಲದ ಇನ್ನೋರ್ವ ಬಾಲಕ 15 ವರ್ಷದ ಉಲ್ಲಾಸ್‌ಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ. ಒಟ್ಟು 8 ಮಂದಿ ಸ್ನೇಹಿತರ ತಂಡ ಮೈಸೂರಿನಿಂದ ಪ್ರವಾಸಕ್ಕೆಂದು ಗೋಕರ್ಣಕ್ಕೆ ಆಗಮಿಸಿದ್ದರು.
ಬೆಳಗ್ಗೆ ಈಜಲೆಂದು ಸಮುದ್ರಕ್ಕಿಳಿದಿದ್ದು, ಈ ವೇಳೆ ಅಲೆಗಳ ಅಬ್ಬರ ಹೆಚ್ಚಿದ್ದ ಹಿನ್ನೆಲೆ ಇಬ್ಬರು ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಸಮುದ್ರದಲ್ಲಿ ಅಲೆಗಳ ಅಬ್ಬರ ತುಸು ಜೋರಾಗಿಯೇ ಇದ್ದು, ಶೋಧ ಕಾರ್ಯಕ್ಕೆ ಅಡ್ಡಿಯಾಗಿದೆ. ಕರಾವಳಿ ಕಾವಲು ಪಡೆಗೂ ಸಹ ಮಾಹಿತಿ ನೀಡಿರುವ ಗೋಕರ್ಣ ಪೊಲೀಸರು, ಕಣ್ಮರೆಯಾಗಿರುವ ಬಾಲಕನ ಪತ್ತೆಗೆ ಮುಂದಾಗಿದ್ದಾರೆ.