ಕರ್ನಾಟಕ

karnataka

ETV Bharat / state

ಕೊರೊನಾ ಸೋಂಕಿತರ ಹೆಚ್ಚಳ: ಕಾರವಾರ ಸೇರಿ 3 ನೌಕಾನೆಲೆ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬೆಡ್ ವ್ಯವ್ಯಸ್ಥೆ - ಕಾರವಾರ ಸೇರಿ 3 ನೌಕಾನೆಲೆ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬೆಡ್

ವೆಸ್ಟರ್ನ್ ನೇವಲ್ ಕಮಾಂಡ್‌ಗೆ ಒಳಪಡುವ ಗೋವಾದ ಭಾರತೀಯ ನೌಕಾ ಆಸ್ಪತ್ರೆ ಸೇವೆ (ಐಎನ್‌ಹೆಚ್‌ಎಸ್) ಜೀವಂತಿ, ಕರ್ನಾಟಕದ ಕಾರವಾರ ಐಎನ್‌ಹೆಚ್‌ಎಸ್ ಪತಂಜಲಿ ಮತ್ತು ಮುಂಬೈನ ಐಎನ್‌ಹೆಚ್‌ಎಸ್ ಸಂಧಾನಿಯಲ್ಲಿ ನಾಗರಿಕ ಆಡಳಿತವು ಬಳಸಿಕೊಳ್ಳಲು ಈಗಾಗಲೇ ಎಲ್ಲಾ ವ್ಯವಸ್ಥೆ ಮಾಡಿರುವುದಾಗಿ ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

Three naval hospitals under the Western Naval
ಕಾರವಾರ ಸೇರಿ 3 ನೌಕಾನೆಲೆ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬೆಡ್ ವ್ಯವ್ಯಸ್ಥೆ

By

Published : Apr 30, 2021, 11:58 AM IST

ಕಾರವಾರ:ದೇಶದಾದ್ಯಂತ ಕೊರೊನಾ ಪ್ರಕರಣಗಳು ದಿನೆ ದಿನೇ ಹೆಚ್ಚುತ್ತಿರುವ ಹಿನ್ನೆಲೆ ತುರ್ತು ಚಿಕಿತ್ಸೆಗಾಗಿ ವೆಸ್ಟರ್ನ್ ನೇವಲ್ ಕಮಾಂಡ್ ಕಾರವಾರ ಸೇರಿದಂತೆ ಮೂರು ನೆವೆಲ್ ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗರ ಆಕ್ಸಿಜನ್ ಸಹಿತ ಬೆಡ್‌ಗಳನ್ನು ಸಿದ್ಧವಾಗಿರಿಸಲಾಗಿದೆ.

ಕಾರವಾರ ಸೇರಿ 3 ನೌಕಾನೆಲೆ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬೆಡ್ ವ್ಯವ್ಯಸ್ಥೆ ..

ವೆಸ್ಟರ್ನ್ ನೇವಲ್ ಕಮಾಂಡ್‌ಗೆ ಒಳಪಡುವ ಗೋವಾದ ಭಾರತೀಯ ನೌಕಾ ಆಸ್ಪತ್ರೆ ಸೇವೆ (ಐಎನ್‌ಹೆಚ್‌ಎಸ್) ಜೀವಂತಿ, ಕರ್ನಾಟಕದ ಕಾರವಾರ ಐಎನ್‌ಹೆಚ್‌ಎಸ್ ಪತಂಜಲಿ ಮತ್ತು ಮುಂಬೈನ ಐಎನ್‌ಹೆಚ್‌ಎಸ್ ಸಂಧಾನಿಯಲ್ಲಿ ನಾಗರಿಕ ಆಡಳಿತವು ಬಳಸಿಕೊಳ್ಳಲು ಈಗಾಗಲೇ ಎಲ್ಲಾ ವ್ಯವಸ್ಥೆ ಮಾಡಿರುವುದಾಗಿ ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಮುಂಬೈನಲ್ಲಿ ವಲಸೆ ಕಾರ್ಮಿಕರು ತಮ್ಮೂರಿಗೆ ತೆರಳುವುದನ್ನು ತಡೆಯಲು ನೌಕಾನೆಲೆಯ ಆವರಣದೊಳಗೆ ಮೂಲಭೂತ ಸೌಕರ್ಯಗಳನ್ನು, ಸಕಲ ಸೌಲಭ್ಯಗಳನ್ನು ಒದಗಿಸಲಾಗಿದೆ. ನೌಕಾ ಅಧಿಕಾರಿಗಳು ಸಹ ನಾಗರಿಕ ಆಡಳಿತದೊಂದಿಗೆ ನಿಯಮಿತವಾಗಿ ಸಂವಹನ ನಡೆಸುತ್ತಿದ್ದು, ಅವರು ವಿನಂತಿಸಿದರೆ ಯಾವುದೇ ಕೋವಿಡ್‌ಗೆ ಸಂಬಂಧಿಸಿ ತುರ್ತು ಸಹಾಯವನ್ನು ನೀಡಲು ಎಲ್ಲಾ ಪೂರ್ವಸಿದ್ಧತಾ ಕ್ರಮಗಳನ್ನು ಹೆಚ್ಚಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಕಾರವಾರದಲ್ಲಿನ ನೌಕಾ ಅಧಿಕಾರಿಗಳು ಕೂಡ ಇದೇ ರೀತಿ ಸುಮಾರು 1500 ವಲಸೆ ಕಾರ್ಮಿಕರಿಗಾಗುವಷ್ಟು ಅಗತ್ಯ ವಸ್ತುಗಳು, ಪಡಿತರ ಮತ್ತು ಮೂಲ ಆರೋಗ್ಯ ಸೇವೆಗಳನ್ನು ಒದಗಿಸಲು ವ್ಯವಸ್ಥೆ ಮಾಡಿದ್ದಾರೆ. ಸಶಸ್ತ್ರ ಪಡೆಗಳ ಆಸ್ಪತ್ರೆಗಳಲ್ಲೇ ಮೊದಲು ಎಂಬಂತೆ ಕಳೆದ ವರ್ಷ ಇಲ್ಲಿನ ಐಎನ್‌ಹೆಚ್‌ಎಸ್ ಪತಂಜಲಿಯಲ್ಲಿ ನಾಗರಿಕ ಕೋವಿಡ್- 19 ಸೋಂಕಿತ ರೋಗಿಗಳಿಗೆ (ಈ ಆಸ್ಪತ್ರೆ ನೌಕಾ ಅಧಿಕಾರಿ, ಸಿಬ್ಬಂದಿಗೆ ಮಾತ್ರ ಸೀಮಿತಿವಾಗಿದೆ) ಚಿಕಿತ್ಸೆ ನೀಡುವ ಮೂಲಕ ಗಮನ ಸೆಳೆದಿತ್ತು. ಈ ಬಾರಿ ಕೂಡ ಅವಶ್ಯಕತೆ ಇದ್ದರೆ ನಾಗರಿಕ ಕೋವಿಡ್ ರೋಗಿಗಳನ್ನು ಸ್ವೀಕರಿಸಲು ಆಸ್ಪತ್ರೆ ಸಿದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.

ಗೋವಾದ ನೌಕಾ ತಂಡಗಳು ಕೋವಿಡ್-19 ಮೊದಲ ಅಲೆಯಲ್ಲಿ ಸಮುದಾಯ ಅಡುಗೆಮನೆಗಳನ್ನು ತೆರೆದು ಸಹಕಾರ ನೀಡಿತ್ತು. ಈ ಬಾರಿ ಕೂಡ ಅಗತ್ಯವಿದ್ದರೆ ಅದೇ ರೀತಿಯ ಸಹಾಯವನ್ನು ನೀಡಲು ಸಿದ್ಧವಾಗಿವೆ. ಐಎನ್‌ಹೆಚ್‌ಎಸ್ ಜೀವಂತಿಯಲ್ಲಿ ನಾಗರಿಕರಿಗಾಗಿ ಕೆಲವು ಆಕ್ಸಿಜನ್ ಸಹಿತ ಬೆಡ್‌ಗಳನ್ನು ಮೀಸಲಿಟ್ಟಿದೆ. ನಾಗರಿಕ ಆಡಳಿತದಿಂದ ನಾಗರಿಕ ಆಸ್ಪತ್ರೆಗಳಿಗೆ ಆಕ್ಸಿಜನ್ ಒದಗಿಸಲು ಕೋರಿದರೆ ಗೋವಾ ನೇವಲ್ ಏರಿಯಾ ಹೆಡ್‌ಕ್ವಾರ್ಟ್ರಸ್ ಅದನ್ನು ಒದಗಿಸಲು ಕೂಡ ಸಜ್ಜಾಗಿದೆ.

ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ ಮಹಾನಿರ್ದೇಶಕರ (ಡಿಜಿಎಎಫ್‌ಎಂಎಸ್) ನಿರ್ದೇಶನದ ಮೇರೆಗೆ ದೇಶದ ವಿವಿಧ ಭಾಗಗಳಲ್ಲಿ ಕೋವಿಡ್ ಆರೈಕೆಗಾಗಿ ಸ್ಥಾಪಿಸಲಾಗುತ್ತಿರುವ ಆಸ್ಪತ್ರೆಗಳಿಗೆ ಯುದ್ಧಭೂಮಿ ನರ್ಸಿಂಗ್ ಸಹಾಯಕರಾಗಿ ತರಬೇತಿ ಪಡೆದ ವೈದ್ಯಕೀಯ ಮತ್ತು ವೈದ್ಯಕೀಯೇತರರನ್ನು ಸೇರಿದಂತೆ ಸಣ್ಣಪುಟ್ಟ ಕರ್ತವ್ಯಕ್ಕೆ ನಿಯೋಜನೆಗಾಗಿ ಸಂಯೋಜಿತ ತಂಡಗಳನ್ನು ಮುಂಬೈನ ಐಎನ್‌ಎಚ್‌ಎಸ್ ಅಶ್ವಿನಿಯಲ್ಲಿ ತಯಾರು ಮಾಡಲಾಗಿದೆ.

ಕೋವಿಡ್ ಪೀಡಿತ ಪ್ರದೇಶಗಳಿಗೆ ಅತ್ಯವಶ್ಯ ವೈದ್ಯಕೀಯ ಮಳಿಗೆಗಳು/ಸಲಕರಣೆಗಳನ್ನು ಸಾಗಿಸಲು, ಬಡವರಿಗೆ ಸಮುದಾಯ ಅಡುಗೆಮನೆಗಳನ್ನು ಸ್ಥಾಪಿಸಲು ಮತ್ತು ಅಗತ್ಯವಿರುವ ಇತರ ತಾಂತ್ರಿಕ ಸಹಾಯಕ್ಕಾಗಿ ಗುಜರಾತ್ ನೌಕಾ ಪ್ರದೇಶವು ನಾಗರಿಕ ಆಡಳಿತಕ್ಕೆ ಬೆಂಬಲವನ್ನು ನೀಡಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.

ಓದಿ:ಕೋವಿಡ್‌ 2ನೇ ಅಲೆ: ಸರ್ಕಾರಿ ಆಸ್ಪತ್ರೆಗಳ ಅವಿರತ ಶ್ರಮ, ಬೇಕಿದೆ ಸಾರ್ವಜನಿಕರ ಸಹಕಾರ

ABOUT THE AUTHOR

...view details