ಶಿರಸಿ :ತವರು ಮನೆಗೆ ಹೋಗಿದ್ದ ಪತ್ನಿ ಹಿಂತಿರುಗಿ ಬರಲಿಲ್ಲ ಎಂಬ ಕ್ಷುಲ್ಲುಕ ಕಾರಣಕ್ಕೆ ಮನನೊಂದ ಗಂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿರಸಿ ತಾಲೂಕಿನ ಬನವಾಸಿಯ ಕಂತ್ರಾಜಿಯಲ್ಲಿ ನಡೆದಿದೆ.
ತವರಿಗೆ ಹೋದ ಹೆಂಡತಿ ಬರಲಿಲ್ಲವೆಂದು ನೇಣು ಬಿಗಿದುಕೊಂಡು ಗಂಡ ಆತ್ಮಹತ್ಯೆ !
ಭೂಮಿ ಹುಣ್ಣಿಮೆ ದಿನದಂದು ತವರು ಮನೆಗೆ ಹೋಗಿದ್ದ ಪತ್ನಿ ಹಿಂತಿರುಗಿ ಬರಲಿಲ್ಲ ಎಂಬ ಕ್ಷುಲ್ಲುಕ ಕಾರಣಕ್ಕೆ ಮನನೊಂದ ಗಂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತ್ಮಹತ್ಯೆ
ನಮೃತ್ ಚನ್ನಬಸಪ್ಪ ಕಂತ್ರಾಜಿ (33) ಆತ್ಮಹತ್ಯೆ ಮಾಡಿಕೊಂಡ ಗಂಡನಾಗಿದ್ದಾನೆ. ಈತನ ಪತ್ನಿ ಭೂಮಿ ಹುಣ್ಣಿಮೆ ದಿನ ತವರು ಮನೆಗೆ ಹೋದವಳು ವಾಪಸ್ ಗಂಡನ ಮನೆಗೆ ಬಂದಿಲ್ಲ ಎಂಬ ವಿಷಯವನ್ನೇ ಮನಸ್ಸಿಗೆ ಹಚ್ಚಿಕೊಂಡು ಮನೆಯಲ್ಲಿರುವ ಬಿದಿರಿನ ಎಳೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸ್ಐ ಮಹಾಂತೇಶ್ ನಾಯಕ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.