ಕರ್ನಾಟಕ

karnataka

ETV Bharat / state

14 ದಿನದ ಬಳಿಕ ಬೌದ್ಧ ಸನ್ಯಾಸಿ ಅಂತ್ಯಕ್ರಿಯೆ

ಮೃತಪಟ್ಟ ಹಿರಿಯ ಬೌದ್ಧ ಬಿಕ್ಕು ಯಶಿ ಫೋನತ್ಸೋ ಅವರ ಅಂತ್ಯಕ್ರಿಯೆಯನ್ನು 14 ದಿನಗಳ ನಂತರ ಗುರುವಾರ ನೆರವೇರಿಸಲಾಗಿದೆ.

the-funeral-of-a-buddhist-monk-yashi-
ಮೃತದೇಹದಿಂದ ವಾಸನೆ: 14 ದಿನದ ಬಳಿಕ ಬೌದ್ಧ ಸನ್ಯಾಸಿ ಅಂತ್ಯಕ್ರಿಯೆ

By

Published : Sep 24, 2021, 2:01 AM IST

Updated : Sep 24, 2021, 7:36 AM IST

ಕಾರವಾರ:ಮೃತಪಟ್ಟು 14 ದಿನ ಕಳೆದರೂ ಆತ್ಮ ಜೀವಂತವಾಗಿದೆ ಎಂದು ನಿತ್ಯವೂ ಪೂಜಿಸುತ್ತಿದ್ದ ಶೇರ್ ಗಾಡೆನ್ ಬೌದ್ಧ ಮಂದಿರದ ಹಿರಿಯ ಬೌದ್ಧ ಬಿಕ್ಕು ಯಶಿ ಫೋನತ್ಸೋ(90) ಅವರ ಅಂತ್ಯಕ್ರಿಯೆಯನ್ನು ಗುರುವಾರ ನಡೆಸಲಾಗಿದೆ

ಸೆಪ್ಟೆಂಬರ್​ 9ರಂದು ಧ್ಯಾನದಲ್ಲಿರುವಾಗಲೇ ಯಶಿ ಫೋನತ್ಸೋ ಮೃತಪಟ್ಟಿದ್ದರು. ಆದರೆ ಅವರ ಮೃತದೇಹದಿಂದ ದುರ್ವಾಸನೆ ಬರದ ಕಾರಣಕ್ಕೆ ಮತ್ತು ಗುರುವಿನ ಆತ್ಮ ಇನ್ನು ದೇಹ ಬಿಟ್ಟು ಹೋಗಿಲ್ಲ ಎಂಬ ನಂಬಿಕೆಯಲ್ಲಿ ಬಿಕ್ಕುಗಳಿದ್ದರು.ಜೊತೆಗೆ ನಿತ್ಯವೂ ಪೂಜೆ, ಪ್ರಾರ್ಥನೆಯಲ್ಲಿ ತೊಡಗಿಕೊಂಡಿದ್ದರು.

14 ದಿನದ ಬಳಿಕ ಬೌದ್ಧ ಸನ್ಯಾಸಿ ಅಂತ್ಯಕ್ರಿಯೆ

ಈಗ ಬೌದ್ಧ ಮುಖಂಡರು ಮೃತದೇಹವನ್ನು ಪರೀಕ್ಷಿಸಿದ್ದು, ಆತ್ಮವು ದೇಹದಿಂದ ಹೋಗಿದೆ ಎಂಬುದನ್ನು ದೃಢಪಡಿಸಿದ್ದಾರೆ. ಇದರಿಂದ ಶೇರ್ ಗಾಡೆನ್ ಬೌದ್ಧ ಮಂದಿರದ ಆವರಣದಲ್ಲಿ ಗುರುವಾರ ಅಂತ್ಯಕ್ರಿಯೆ ನಡೆಸಲಾಗಿದೆ.

ಮೃತಪಟ್ಟಿರುವ ಬೌದ್ಧ ಗುರು ಯಶಿ ಅವರು, ವಾರಾಣಸಿಯಲ್ಲಿ 20ಕ್ಕೂ ಹೆಚ್ಚು ವರ್ಷ ಬೌದ್ಧತತ್ವದ ಬೋಧನೆ ತೊಡಗಿದ್ದರು. ನಂತರ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಟಿಬೇಟಿಯನ್ ಕಾಲೋನಿಯ ಬೌದ್ಧ ಮಂದಿರದಲ್ಲಿ ಮಾರ್ಗದರ್ಶಕರಾಗಿ ಕೆಲಸ ಮಾಡುತಿದ್ದರು.

ಇದನ್ನೂ ಓದಿ:ಶಿರೂರು ಮಠಕ್ಕೆ ಅಪ್ರಾಪ್ತ ಪೀಠಾಧಿಪತಿ ನೇಮಕ ಪ್ರಶ್ನಿಸಿ ಪಿಐಎಲ್ : ತೀರ್ಪು ಕಾಯ್ದಿರಿಸಿದ ಹೈಕೋರ್ಟ್

Last Updated : Sep 24, 2021, 7:36 AM IST

ABOUT THE AUTHOR

...view details