ಕಾರವಾರ: ಮೃತಪಟ್ಟ ತಾಯಿಯ ಚಿತೆಗೆ ಬೆಂಕಿ ಇಟ್ಟ ಬಳಿಕ ಮಗನೂ ಪ್ರಾಣ ಬಿಟ್ಟಿರುವ ಹೃದಯ ವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಸಿದ್ಧರದಲ್ಲಿ ನಡೆದಿದೆ.
ತಾಯಿಯ ಚಿತೆಗೆ ಬೆಂಕಿ ಇಟ್ಟು ಪ್ರಾಣ ಬಿಟ್ಟ ಮಗ... ಕಾರವಾರದಲ್ಲಿ ಹೃದಯ ವಿದ್ರಾವಕ ಘಟನೆ - ಮಗ
ಮೃತಪಟ್ಟ ತಾಯಿಯ ಚಿತೆಗೆ ಬೆಂಕಿ ಇಟ್ಟ ಬಳಿಕ ಏಕಾಏಕಿ ಎದೆನೋವು ಕಾಣಿಸಿಕೊಂಡು ಮಗನೂ ಪ್ರಾಣ ಬಿಟ್ಟಿರುವ ಹೃದಯ ವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಸಿದ್ಧರದಲ್ಲಿ ನಡೆದಿದೆ.
ಈ ಕುರಿತು ಮಂಜುನಾಥ ಸ್ನೇಹಿತ ರಾಜೇಶ ನಾಯ್ಕ ಮಾತನಾಡಿ, ಸ್ನೇಹ ಜೀವಿಯಾಗಿದ್ದ ಮಂಜುನಾಥನ ಸಾವು ತೀವ್ರ ದುಃಖ ತಂದಿದೆ. ತಾಯಿಯ ಚಿತೆಗೆ ಬೆಂಕಿ ಇಟ್ಟ ಬಳಿಕ ಎದೆನೋವು ಎಂದು ಕೆಳಗೆ ಬಿದ್ದ. ದುಃಖ ತಾಳಲಾಗದೆ ಹೀಗಾಗಿರಬಹುದು. ಆದರೆ ತಕ್ಷಣ ಆಸ್ಪತ್ರೆಗೆ ಸೇರಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಜಿಲ್ಲಾಸ್ಪತ್ರೆಗೆ ಸೇರಿಸಲು ಪ್ರಯತ್ನಿಸಿದೆವಾದರು ಪ್ರಯೋಜನವಾಗಿಲ್ಲ. ಇದಕ್ಕೆ ಆಂಬುಲೆನ್ಸ್ ಸಮಯಕ್ಕೆ ಸರಿಯಾಗಿ ಬರದಿರುವುದೂ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೃತ ಮಂಜುನಾಥಗೆ ಪತ್ನಿ, ಇಬ್ಬರು ಮಕ್ಕಳು ಇದ್ದಾರೆ. ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.