ಶಿರಸಿ :ದಾಖಲೆ ಇಲ್ಲದೆ ಸಾಗಿಸುತ್ತಿದ್ದ 3,50,000 ರೂ. ಹಣವನ್ನು ಚುನಾವಣಾ ಅಧಿಕಾರಿಗಳು ಜಪ್ತಿ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಬಾಚಣಕಿ ಚೆಕ್ ಪೋಸ್ಟ್ನಲ್ಲಿ ನಡೆದಿದೆ.
ಮುಂಡಗೋಡದಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 3.5 ಲಕ್ಷ ರೂ. ಜಪ್ತಿ - ಉತ್ತರ ಕನ್ನಡ
ಮದುವೆಯ ಸಲುವಾಗಿ ಕಾರಿನಲ್ಲಿ ಪುಣೆಯಿಂದ ಸಾಗರಕ್ಕೆ ಹೋಗುತ್ತಿದ್ದ ಮಹ್ಮದ್ ರಿಜ್ವಾನ. ಬಾಚಣಕಿ ಚೆಕ್ ಪೋಸ್ಟ್ನಲ್ಲಿ ತಪಾಸಣೆ ವೇಳೆ 3,50,000 ರೂ. ಪತ್ತೆಯಾಗಿದೆ.
ದಾಖಲೆ ಇಲ್ಲದೆ ಸಾಗಿಸುತ್ತಿದ್ದ 3.5 ಲಕ್ಷ ಹಣ ಜಪ್ತಿ
ಸಾಗರದ ಮಹ್ಮದ್ ರಿಜ್ವಾನ ಎಂಬಾತ ಮಹಾರಾಷ್ಟ್ರದ ಪುಣೆಯಿಂದ ಮದುವೆಯ ಸಲುವಾಗಿ ಕಾರಿನಲ್ಲಿ ಸಾಗರಕ್ಕೆ ಹೋಗುತ್ತಿರುವಾಗ ಬಾಚಣಕಿ ಚೆಕ್ ಪೋಸ್ಟ್ನಲ್ಲಿ ತಪಾಸಣೆ ವೇಳೆ ಈ ಹಣ ಪತ್ತೆಯಾಗಿದೆ.
ಯಾವುದೇ ದಾಖಲೆ ಇಲ್ಲದ ಕಾರಣ 3,50,000 ಹಣವನ್ನು ಅಧಿಕಾರಿಗಳು ತಹಶೀಲ್ದಾರರಿಗೆ ಒಪ್ಪಿಸಿದ್ದು, ತಹಶೀಲ್ದಾರರು ಹಣವನ್ನು ಜಪ್ತಿ ಮಾಡಿ ಸೂಕ್ತ ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚಿಸಿದ್ದಾರೆ.