ಕರ್ನಾಟಕ

karnataka

ETV Bharat / state

ರಸ್ತೆ ಕಾಮಗಾರಿಯನ್ನೇ ನಿಲ್ಲಿಸಿದ ಸಾರ್ವಜನಿಕರು: ಸರ್ವೀಸ್​ ರೋಡ್​ ನಿರ್ಮಾಣಕ್ಕೆ ಆಗ್ರಹ - people stop road work

ಹಲವು ಬೇಡಿಕೆಗಳನ್ನು ಮುಂದಿಟ್ಟು ಸ್ಥಳೀಯ ಸಾರ್ವಜನಿಕರು ರಸ್ತೆ ಕಾಮಗಾರಿಯನ್ನೇ ತಡೆದು ಪ್ರತಿಭಟಿಸಿದ ಘಟನೆ ನಡೆದಿದೆ. ಸ್ಥಳಕ್ಕೆ ಬಂದ ಐ.ಆರ್.ಬಿ ಕಂಪನಿಯ ಪ್ರತಿನಿಧಿ ಸಾರ್ವಜಕನಿಕರೊಂದಿಗೆ ಮಾತುಕತೆ ನಡೆಸಿ ಅವರ ಬೇಡಿಕೆಗಳನ್ನು ಈಡೇರಿಸುವಂತೆ ಸೂಚಿಸಿದ್ದಾರೆ.

btkl

By

Published : Nov 5, 2019, 6:45 PM IST

ಭಟ್ಕಳ: ತಾಲೂಕಿನ ಸರ್ಪನಕಟ್ಟೆ ಕ್ರಾಸ್​ನಿಂದ ಬೆಳಕೆ ಕ್ರಾಸ್ ತನಕ ಸರ್ವಿಸ್ ರೋಡ್ ಮಾಡಬೇಕು ಹಾಗೂ ಹಲವು ಬೇಡಿಕೆಗಳನ್ನು ಮುಂದಿಟ್ಟು ಸ್ಥಳೀಯ ಸಾರ್ವಜನಿಕರು ಮಂಗಳವಾರದಂದು ಸೋಡಿಗದ್ದೆ ಕ್ರಾಸ್​ನಲ್ಲಿ ನಡೆಯುತ್ತಿದ್ದ ಕಾಮಗಾರಿಯನ್ನು ತಡೆದು ಸ್ಥಳಕ್ಕೆ ಐ.ಆರ್.ಬಿ ಕಂಪನಿಯ ಅಧಿಕಾರಿಗಳು ಬರುವಂತೆ ಪಟ್ಟು ಹಿಡಿದ ಘಟನೆ ನಡೆಯಿತು.

ಸರ್ಪನಕಟ್ಟೆ ಕ್ರಾಸ್​ನಿಂದ ಬೆಳಕೆ ಕ್ರಾಸಿನ ತನಕ ಹೆದ್ದಾರಿಯಿಂದ ಕೆಲವು ಗ್ರಾಮಗಳಿಗೆ ಹೋಗಲು ರಸ್ತೆಗಳಿದ್ದು, ಆ ರಸ್ತೆ ಸಂಪರ್ಕ ಮಾಡಲು ನಮಗೆ ಸರ್ವಿಸ್ ರಸ್ತೆ ಅಗತ್ಯವಾಗಿದೆ. ಜಿಲ್ಲೆಯ ಪ್ರಸಿದ್ಧ ಸೋಡಿಗದ್ದೆ ದೇವಸ್ಥಾನಕ್ಕೆ ಹೋಗವ ರಸ್ತೆಯಲ್ಲಿ ಯೂಟರ್ನ್ ಸಂಪರ್ಕ ಹಾಗೂ ಸೋಡಿಗದ್ದೆ ಕ್ರಾಸ್​ನಲ್ಲಿ ಹೆದ್ದಾರಿಯ ಇರಡು ಭಾಗದಲ್ಲಿ ಬಸ್ ನಿಲ್ದಾಣ ಬೇಕು. ಈ ಎಲ್ಲಾ ಕೆಲಸ ಮುಗಿಯುವ ತನಕ ಈ ಭಾಗದಲ್ಲಿ ಕಾಮಗಾರಿ ನಡೆಸಬಾರದೆಂದು ಆಗ್ರಹಿಸಿ, ಸ್ಥಳಕ್ಕೆ ಐ.ಆರ್.ಬಿ. ಕಂಪನಿಯ ಮೇಲಾಧಿಕಾರಿ ಕರೆಸುವಂತೆ ಐ.ಆರ್.ಬಿ ಇಂಜಿನಿಯರ್​ ಮಲ್ಲಿಕಾರ್ಜುನ ಪಟ್ಟು ಹಿಡಿದರು.

ರಸ್ತೆ ಕಾಮಗಾರಿಯನ್ನೇ ನಿಲ್ಲಿಸಿದ ಸಾರ್ವಜನಿಕರು

ನಂತರ ಸ್ಥಳಕ್ಕೆ ಬಂದ ಐ.ಆರ್.ಬಿ ಕಂಪನಿಯ ಪ್ರತಿನಿಧಿ ಸಾರ್ವಜಕನಿಕರೊಂದಿಗೆ ಮಾತುಕತೆ ನಡೆಸಿ ಅವರ ಬೇಡಿಕೆಗಳಾದ ರಸ್ತೆಗೆ ಸರಿಯಾದ ಬೀದಿ ದೀಪಗಳನ್ನು ಅಳವಡಿಸಬೇಕು ಮತ್ತು ಒಂದು ರಸ್ತೆಯನ್ನು ಮೇಲ್ಭಾಗವಾಗಿ ಇನ್ನೊಂದು ರಸ್ತೆಯನ್ನು ಕೆಳಭಾಗದಲ್ಲಿ ಮಾಡದೆ ಒಂದೇ ರೀತಿಯಲ್ಲಿ ಸಮತಟ್ಟಾಗಿ ಮಾಡಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಜಗದೀಶ ನಾಯ್ಕ, ರಘು ಶೆಟ್ಟಿ, ನಾಗೇಂದ್ರ ನಾಯ್ಕ,ಗಣಪತಿ ಜೋಗಿ,ಮಣಿಕಂಟ ಜೋಗಿ ಮುಂತಾದವರು ಉಪಸ್ಥಿತರಿದ್ದರು.

ABOUT THE AUTHOR

...view details