ಕರ್ನಾಟಕ

karnataka

ETV Bharat / state

ಸುನೀಲ್​ ನಾಯ್ಕಗೆ ಸ್ವ ಪಕ್ಷಿಯರಿಂದಲೇ ವಿರೋಧ: ಟಿಕೆಟ್ ನೀಡಿದಲ್ಲಿ ಬೇರೆ ಪಕ್ಷಕ್ಕೆ ಬೆಂಬಲದ ಎಚ್ಚರಿಕೆ!

ಈ ಬಾರಿ ಚುನಾವಣೆಯಲ್ಲಿ ಭಟ್ಕಳ ಶಾಸಕ ಸುನೀಲ್​ ನಾಯ್ಕ್​ ಅವರಿಗೆ ಟಿಕೆಟ್​ ನೀಡಿದರೆ ಬೇರೆ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವುದಾಗಿ ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

opposition-to-sunil-naikfrom-his-own-party-activist
ಸುನೀಲ್​ ನಾಯ್ಕಗೆ ಸ್ವ ಪಕ್ಷಿಯರಿಂದಲೇ ವಿರೋಧ: ಟಿಕೆಟ್ ನೀಡಿದಲ್ಲಿ ಬೆರೆ ಪಕ್ಷಕ್ಕೆ ಬೆಂಬಲದ ಎಚ್ಚರಿಕೆ!

By

Published : Mar 19, 2023, 3:46 PM IST

Updated : Mar 20, 2023, 12:04 PM IST

ಸುನೀಲ್​ ನಾಯ್ಕಗೆ ಸ್ವ ಪಕ್ಷಿಯರಿಂದಲೇ ವಿರೋಧ: ಟಿಕೆಟ್ ನೀಡಿದಲ್ಲಿ ಬೆರೆ ಪಕ್ಷಕ್ಕೆ ಬೆಂಬಲದ ಎಚ್ಚರಿಕೆ!

ಕಾರವಾರ: ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ಚುರುಕುಗೊಂಡಿದೆ. ಹಾಲಿ ಶಾಸಕರಿ ಸುನೀಲ್ ನಾಯ್ಕ್​ ಅವರಿಗೆ ಈ ಬಾರಿ ಸ್ವ ಪಕ್ಷದ ಕಾರ್ಯಕರ್ತರಿಂದಲೇ ವಿರೋಧ ವ್ಯಕ್ತವಾಗಿದೆ. ಈ ಸಲ ಯಾವುದೇ ಕಾರಣಕ್ಕೂ ಸುನೀಲ್ ನಾಯ್ಕ್​ಗೆ ಟಿಕೆಟ್ ಕೊಡಬೇಡಿ, ಒಂದೊಮ್ಮೆ ಕಾರ್ಯಕರ್ತರ ಮಾತನ್ನು ಕಡೆಗಣಿಸಿ ಕೊಟ್ಟರೆ, ಬೇರೆ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಬಿಜೆಪಿಯ ಕಾರ್ಯಕರ್ತರು ಎಚ್ಚರಿಸಿದ್ದಾರೆ.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ರಾಜಕೀಯದಲ್ಲಿ ದಿನಕ್ಕೊಂದು ಬೆಳವಣಿಗೆಯಾಗುತ್ತಿದೆ, ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ರಾಜಕೀಯ ರಂಗೇರಿದೆ. ಕಳೆದ ಬಾರಿ ಜಿಲ್ಲೆಯ ಕರಾವಳಿಯ ಮೂರು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಆದರೆ, ಈ ಬಾರಿ ಚುನಾವಣೆಯಲ್ಲಿ ಜಿಲ್ಲೆಯ ಸೂಕ್ಷ್ಮ ಕ್ಷೇತ್ರ ಎಂದೇ ಕರೆಸಿಕೊಂಡಿರುವ ಭಟ್ಕಳದಲ್ಲಿ ಶಾಸಕ ಸುನೀಲ್ ನಾಯ್ಕ ಅವರಿಗೆ ಸ್ವ ಪಕ್ಷದವರಿಂದಲೇ ವಿರೋಧ ಕಂಡುಬಂದಿದೆ. 'ಬಿಜೆಪಿಯ ಮೂಲ ಕಾರ್ಯಕರ್ತರನ್ನೇ ಪಕ್ಷದಲ್ಲಿ ಕಡೆಗಣಿಸಲಾಗುತ್ತಿದ್ದು, ಸರ್ವಾಧಿಕಾರಿ ಧೋರಣೆ ವಿರೋಧಿಸುವ ಕಾರ್ಯಕರ್ತರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಫೇಕ್ ಅಕೌಂಟ್‌ಗಳ ಮೂಲಕ ತೇಜೋವಧೆ ಮಾಡಿ ಬೆದರಿಕೆ ಒಡ್ಡಲಾಗುತ್ತಿದೆ' ಎಂದು ಬಿಜೆಪಿ ಕಾರ್ಯಕರ್ತ ಶಂಕರ್​​ ನಾಯ್ಕ್​ ಆರೋಪ ಮಾಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರು ಇತ್ತೀಚೆಗೆ ಭಟ್ಕಳಕ್ಕೆ ಬಂದಿದ್ದ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ಮುಜುಗರ ಆಗುವ ರೀತಿಯಲ್ಲಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ಕಾರ್ಯಕರ್ತ ಶಂಕರ್​ ಗುಂಡಿಬೈಲ್​, ಪಕ್ಷಕ್ಕೆ ತೇಜೋವಧೆ ಮಾಡುವ ಉದ್ದೇಶದಿಂದಲೇ ಈ ರೀತಿ ಮಾಡಿದ್ದಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ಈ ಬಾರಿ ಸುನೀಲ್ ನಾಯ್ಕ ಅವರಿಗೆ ಟಿಕೆಟ್ ಕೊಡಬಾರದು. ಒಂದೊಮ್ಮೆ ಟಿಕೆಟ್​ ಕೊಟ್ಟರೆ, ನಾವು ಬೇರೆ ಪಕ್ಷದ ಅಭ್ಯರ್ಥಿಗೆ ಬೆಂಬಲಿಸುತ್ತೇವೆ ಎಂದು ಶಂಕರ್​ ಗುಂಡಿಬೈಲ್​ ಹೇಳಿದ್ದಾರೆ.

ಸುನೀಲ್ ನಾಯ್ಕ ಕೆಲ ಸಂಸ್ಥೆ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಪಕ್ಷದ ನಾಯಕರು ಭವಿಷ್ಯದಲ್ಲಿ ಪಕ್ಷ ಬಲ ಪಡಿಸುವ ನಿಟ್ಟಿನಲ್ಲಿ ಹೊಸ ಅಭ್ಯರ್ಥಿಗೆ ಆದ್ಯತೆ ನೀಡಬೇಕು ಎಂದು ಪಕ್ಷದ ಕಾರ್ಯಕರ್ತ ಎಂದು ಶಂಕರ್​ ಗುಂಡಿಬೈಲ್ ಆಗ್ರಹಿಸಿದ್ದಾರೆ. ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭರ್ಜರಿ ಗೆಲುವು ಪಡೆದಿದ್ದ ದ್ದ ಸುನೀಲ್ ನಾಯ್ಕ ವಿರುದ್ಧ ಸದ್ಯ ಚುನಾವಣೆ ಸಮೀಪಿಸುತ್ತಿರುವಾಗಲೇ ಬಹಿರಂಗ ಅಸಮಾಧಾನ ವ್ಯಕ್ತವಾಗಿದೆ.

ಇದನ್ನೂ ಓದಿ:ಸಿದ್ದರಾಮಯ್ಯ ಮನೆಯಲ್ಲಿ ಎಷ್ಟು ಹಣ ಸಿಗಬಹುದು?: ಸಚಿವ ಬಿ.ಸಿ ಪಾಟೀಲ್

Last Updated : Mar 20, 2023, 12:04 PM IST

ABOUT THE AUTHOR

...view details