ಕರ್ನಾಟಕ

karnataka

ETV Bharat / state

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಆರೋಪಿಗೆ 7 ವರ್ಷ ಜೈಲು, 60 ಸಾವಿರ ದಂಡ

ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಸಿದ ಕಾರವಾರ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಆರೋಪಿಗೆ 7 ವರ್ಷ ಜೈಲು, 60 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

ಅತ್ಯಾಚಾರ ಪ್ರಕರಣ

By

Published : Sep 9, 2019, 9:02 PM IST

Updated : Sep 9, 2019, 10:55 PM IST

ಕಾರವಾರ:ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣವೊಂದರ ವಿಚಾರಣೆ ನಡೆಸಿದ ಕಾರವಾರ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಆರೋಪ ಸಾಬೀತದಾದ ಹಿನ್ನೆಲೆಯಲ್ಲಿ ಆರೋಪಿಗೆ 7 ವರ್ಷ ಜೈಲು, 60 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

ಯಲ್ಲಾಪುರ ತಾಲೂಕಿನ ಸಾಕ್ರು ಟಕ್ಕು ಹುಂಬೆ ಜೈಲು ಶಿಕ್ಷೆಗೊಳಗಾದ ಆರೋಪಿ. ಈತ ತನ್ನ ಗ್ರಾಮದಲ್ಲಿರುವ ತಮ್ಮ ಮನೆಗೆ 17 ವರ್ಷ ಪ್ರಾಯದ ಬಾಲಕಿಯನ್ನು ಕರೆಸಿಕೊಂಡು ಅತ್ಯಾಚಾರವೆಸಗಿದ್ದ. ಬಳಿಕ ಬಾಲಕಿ ಗರ್ಭಿಣಿಯಾದಗ ವಿಷಯ ಬೆಳಕಿಗೆ ಬಂದಿದ್ದು, ಯಲ್ಲಾಪುರ ಠಾಣೆಯಲ್ಲಿ ದೂರು ದಲ್ಲಿಸಿದ್ದರು. ಅದರಂತೆ ಯಲ್ಲಾಪುರ ಪಿ.ಎಸ್.ಐ ವಿಜಯ ಬಿರಾದಾರ ಹಾಗೂ ಶ್ರೀಧರ ಎಸ್.ಆರ್. ತನಿಖೆ ನಡೆಸಿ ಪೋಕ್ಸೋ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರುಪಡಿಸಿದ್ದರು.

ಇನ್ನೂ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಆರೋಪಿಯ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ಐ.ಪಿ.ಸಿ. ಕಲಂ 376 (2) (ಎನ್) ರ ಅಡಿಯಲ್ಲಿ 7 ವರ್ಷ ಜೈಲು ಶಿಕ್ಷೆ ಹಾಗೂ 30 ಸಾವಿರ ದಂಡ ವಿಧಿಸಿದ್ದು, ತಪ್ಪಿದ್ದಲ್ಲಿ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಅದರಂತೆ ಪೋಕ್ಸೋ ಕಾಯಿದೆ ಕಲಂ: ಕಲಂ-5 (ಐ) ಮತ್ತು 6 ಅಡಿಯಲ್ಲಿ 7 ವರ್ಷ ಜೈಲು ಶಿಕ್ಷೆ ಹಾಗೂ ರೂ. 30 ಸಾವಿರ ದಂಡ ವಿಧಿಸಿದ್ದು, ತಪ್ಪಿದಲ್ಲಿ 6 ತಿಂಗಳ ಜೈಲು ಶಿಕ್ಷಿ ವಿಧಿಸಿದೆ.

ಪ್ರಕಟವಾದ ಎರಡು ಶಿಕ್ಷೆಗಳು ಒಟ್ಟಾತ್ರಯದಲ್ಲಿ ಬರುವಂತೆ ಆದೇಶಿಸಿದ್ದು, ನೊಂದ ಬಾಲಕಿಗೆ ದಂಡದ ಮೊತ್ತದಲ್ಲಿ ರೂ. 50 ಸಾವಿರ ರೂಪಾಯಿ ಪರಿಹಾರವನ್ನು ನೀಡಬೇಕೆಂದು ಜಿಲ್ಲಾ ನ್ಯಾಯಾಧೀಶರಾದ ಶಾಂತವೀರ ಶಿವಪ್ಪ ಅವರು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಸುಭಾಶ ಪಿ. ಕೈರನ್ನ ವಾದ ಮಂಡಿಸಿದ್ದರು.

Last Updated : Sep 9, 2019, 10:55 PM IST

ABOUT THE AUTHOR

...view details