ಕರ್ನಾಟಕ

karnataka

ETV Bharat / state

ಸಂಭ್ರಮದ ಮಹಾ ಶಿವರಾತ್ರಿ: ಸಹಸ್ರ ಲಿಂಗ ಪುಣ್ಯಕ್ಷೇತ್ರಕ್ಕೆ ಹರಿದುಬಂದ ಭಕ್ತರ ದಂಡು

ಭಕ್ತಿ ಕೇಂದ್ರವಾದ ಉತ್ತರ ಕನ್ನಡದ ಶಿರಸಿ ತಾಲೂಕಿನ ಸಹಸ್ರ ಲಿಂಗ ಪುಣ್ಯಕ್ಷೇತ್ರಕ್ಕೆ ಶಿವರಾತ್ರಿ ನಿಮಿತ್ತ ಭೇಟಿ ನೀಡಿದ ಭಕ್ತರು, ಶಿವ ಲಿಂಗಗಳಿಗೆ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿದರು.

mahashivaratri-festival-celebration-in-shirasi
ಭಕ್ತಿ ಕೇಂದ್ರಕ್ಕೆ ಬಂತು ಭಕ್ತರ ದಂಡು

By

Published : Feb 21, 2020, 10:26 PM IST

ಶಿರಸಿ: ರಾಜ್ಯ ಪ್ರಸಿದ್ಧ ಪ್ರವಾಸಿ ತಾಣ, ಭಕ್ತಿ ಕೇಂದ್ರವಾದ ಉತ್ತರ ಕನ್ನಡದ ಶಿರಸಿ ತಾಲೂಕಿನ ಸಹಸ್ರ ಲಿಂಗ ಪುಣ್ಯಕ್ಷೇತ್ರಕ್ಕೆ ಶಿವರಾತ್ರಿ ನಿಮಿತ್ತ ಭೇಟಿ ನೀಡಿದ ಭಕ್ತರು, ಶಿವ ಲಿಂಗಗಳಿಗೆ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿದರು.

ಪ್ರತಿ ವರ್ಷದಂತೆ ಈ ವರ್ಷವೂ ಸಹ ಹೊಳೆಯ ಮಧ್ಯದಲ್ಲಿರುವ ಸಹಸ್ರ ಲಿಂಗಗಳ ದರ್ಶನಕ್ಕೆ ತಾಲೂಕಿನ ವಿವಿಧೆಡೆಗಳಿಂದ ಭಕ್ತರು ಭೇಟಿ ನೀಡಿದ್ದಾರೆ. ಹಣ್ಣು, ಕಾಯಿ, ಹೂವು, ಎಳನೀರು, ಕರ್ಪೂರ, ಊದುಬತ್ತಿ ಮುಂತಾದವುಗಳನ್ನು ಸಮರ್ಪಿಸಿದರು. ಬಳಿಕ ಆರತಿ ಮಾಡಲಾಯಿತು. ಭಕ್ತರು ನೀರಿನ ಅಭಿಷೇಕ ನೇರವೇರಿಸಿ ಹರಕೆ ತೀರಿಸಿದರು.

ಭಕ್ತಿ ಕೇಂದ್ರಕ್ಕೆ ಬಂತು ಭಕ್ತರ ದಂಡು

ಶಿವರಾತ್ರಿ ನಿಮಿತ್ತ ‌ವಿಶೇಷ ಪೂಜೆ ನಡೆಯಿತು. ರುದ್ರಾಭಿಷೇಕ, ಗಣಪತಿ ಅಭಿಷೇಕ ಮಾಡಲಾಯಿತು. 50ಕ್ಕೂ ಅಧಿಕ ಅರ್ಚಕರು ಪೂಜೆ ನೆರವೇರಿಸಿ ಭಕ್ತರಿಗೆ ಅನುಕೂಲ ಮಾಡಿಕೊಟ್ಟರು. ಶಿವರಾತ್ರಿ ನಿಮಿತ್ತ ವಿಶೇಷ ಬಸ್​ಗಳನ್ನು ಕೆಎಸ್ಆರ್​ಟಿಸಿ ಇಲಾಖೆ ವತಿಯಿಂದ ವ್ಯವಸ್ಥೆ ಮಾಡಲಾಗಿತ್ತು.

ABOUT THE AUTHOR

...view details