ಕಾರವಾರ:ಗೋಹತ್ಯೆಯನ್ನ ತಡೆಯುವ ನಿಟ್ಟಿನಲ್ಲಿ ರಾಜ್ಯದಲ್ಲಿ ಸರ್ಕಾರ ಗೋಹತ್ಯೆ ನಿಷೇಧ ಕಾನೂನನ್ನು (Cow slaughter prevention law) ಜಾರಿಗೆ ತಂದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಆ್ಯಕ್ಟಿವ್ ಆಗಿದ್ದ ಪೊಲೀಸರು ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಹಲವು ಗೋವುಗಳನ್ನ ರಕ್ಷಿಸಿದ್ದರು. ಆದರೆ ಜಿಲ್ಲೆಯಲ್ಲಿ ಸಂರಕ್ಷಿಸಿದ ಗೋವುಗಳನ್ನು ಎಲ್ಲಿ ಇರಿಸಬೇಕು ಎನ್ನುವುದೇ ಪೊಲೀಸ್ ಇಲಾಖೆಗೆ ತಲೆ ನೋವಾಗಿದೆ. ಜಿಲ್ಲೆಯಲ್ಲಿ ಗೋ ಶಾಲೆ ಕೊರತೆ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿಯೇ ಗೋವುಗಳನ್ನ ಕಟ್ಟಿ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯಲ್ಲಿ ಸರ್ಕಾರದಿಂದ ಯಾವುದೇ ಗೋ ಶಾಲೆಗಳೂ ಇಲ್ಲ. ಖಾಸಗಿಯಾಗಿ ಒಂದೆರಡು ಗೋ ಶಾಲೆ ಇದ್ದು, ಹಿಡಿದ ನೂರಾರು ಗೋವುಗಳನ್ನ ಖಾಸಗಿ ಗೋ ಶಾಲೆಗೆ ಸಾಗಿಸಿದ್ದಾರೆ. ಆದರೆ ಇದೀಗ ಆ ಗೋ ಶಾಲೆಗಳು ಸಹ ಭರ್ತಿಯಾಗಿವೆ. ಸದ್ಯ ಗೋ ಸಾಗಣೆ ಪ್ರಕರಣ ದಾಖಲಾಗುತ್ತಿದ್ದರು ಹಿಡಿದ ಹಸುಗಳನ್ನ ಗೋ ಶಾಲೆಗೆ ಸಾಗಿಸಲು ಆಗದೇ ಪೊಲೀಸರೇ ಠಾಣೆ ಬಳಿ ಕಟ್ಟಿ ಹಾಕಿ, ಸಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.