ಶಿರಸಿ: ಹಿಂದೂಗಳ ಹೊಸ ವರ್ಷ ಯುಗಾದಿ ಉತ್ಸವದ ಅಂಗವಾಗಿ ಶುಕ್ರವಾರ ಸಂಜೆ ಧರ್ಮದ ಜಾಗೃತಿಗಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಬೃಹತ್ ಬೈಕ್ ರ‍್ಯಾಲಿ ಆಯೋಜಿಸಲಾಗಿತ್ತು.
ಹಿಂದೂಗಳ ಹೊಸ ವರ್ಷ: ಶಿರಸಿಯಲ್ಲಿ ಬೃಹತ್ ಬೈಕ್ ರ‍್ಯಾಲಿ - yugadi
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಶಿರಸಿಯಲ್ಲಿ ಬೃಹತ್ ಬೈಕ್ ರ‍್ಯಾಲಿ ಆಯೋಜಿಸಲಾಗಿತ್ತು. ಶಾಸಕ ಕಾಗೇರಿ ಸೇರಿದಂತೆ ವಿವಿಧ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರ ಭಾಗಿ. ಬಿಳಿ ಬಟ್ಟೆಯಲ್ಲಿ ಗಮನ ಸೆಳೆದ ಮಹಿಳೆಯರು.
ಶಿರಸಿಯಲ್ಲಿ ಬೃಹತ್ ಬೈಕ್ ಬೈಕ್ ರ‍್ಯಾಲಿ
ನೂರಾರು ಜನರು ತಮ್ಮ ಬೈಕ್ಗಳಿಗೆ ಭಗವಾ ಧ್ವಜ ಕಟ್ಟಿಕೊಂಡು ನಗರದ ವಿವಿಧೆಡೆಗಳಲ್ಲಿ ಸಾಗಿದರು. ಇಲ್ಲಿನ ಶಿವಾಜಿ ಚೌಕದಿಂದ ಹೊರಟ ರ‍್ಯಾಲಿ ಮಾರಿಗುಡಿ, ರಾಮನಬೈಲ್, ಕಸ್ತೂರಬಾ ನಗರ, ಯಲ್ಲಾಪುರ ನಾಕಾ, ಅಶ್ವಿನಿ ಸರ್ಕಲ್, ಮರಾಠಿಕೊಪ್ಪ, ರಾಘವೇಂದ್ರ ಸರ್ಕಲ್ ಸೇರಿದಂತೆ 13 ಕಿ.ಮೀ. ವರೆಗೆ ಸಾಗಿತು.
ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಸಹಿತ ವಿವಿಧ ಜನಪ್ರತಿನಿಧಿಗಳು ರ‍್ಯಾಲಿಯಲ್ಲಿ ಭಾಗವಹಿಸಿದ್ದರು. ಮಹಿಳೆಯರು ಬಿಳಿ ವಸ್ತ್ರ ಧರಿಸಿ ಭಾಗವಹಿಸಿ ಗಮನ ಸೆಳೆದರು.
Last Updated : Apr 6, 2019, 9:39 AM IST