ಕರ್ನಾಟಕ

karnataka

ETV Bharat / state

ಕಾರವಾರ: ಸ್ನೇಹಿತರನ್ನೇ ಅಪಹರಿಸಿ 5 ಕೋಟಿಗೆ ಬೇಡಿಕೆ ಆರೋಪ - ಈಟಿವಿ ಭಾರತ​ ಕರ್ನಾಟಕ

ಕಾರಿನಲ್ಲಿ ಹೋಗುತ್ತಿದ್ದ ಸ್ನೇಹಿತರನ್ನು ಗುಂಪು ಕಟ್ಟಿಕೊಂಡು ಬಂದು ಅಪಹರಿಸಿ ಐದು ಕೋಟಿಗೆ ಬೇಡಿಕೆ ಇಟ್ಟ ಪ್ರಕರಣ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

Kidnapped a friend and demanded 5 crores in Uttara Kannada
ಕಾರವಾರ : ಸ್ನೇಹಿತರನ್ನೆ ಅಪಹರಿಸಿ 5 ಕೋಟಿಗೆ ಬೇಡಿಕೆ

By

Published : Oct 31, 2022, 9:45 AM IST

ಕಾರವಾರ:ಸ್ನೇಹಿತನನ್ನೇ ಅಪಹರಣ ಮಾಡಿ ಐದು ಕೋಟಿಗೆ ಬೇಡಿಕೆ ಇಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ರಾಮನಗರದ ಕ್ಯಾಸಲ್ ರಾಕ್​ನಲ್ಲಿ ಬೆಳಕಿಗೆ ಬಂದಿದೆ. ರಾಮನಗರದ ಕ್ಯಾಸಲ್ ರಾಕ್​ಗೆ ಹೋಗುವ ಮಾರ್ಗದಲ್ಲಿ ಕಾರಿನಲ್ಲಿ ತೆರಳುತ್ತಿದ್ದ ಧಾರವಾಡ ಮೂಲದ ಮಲಪ್ರಭಾ ನಿವಾಸಿ ಹನುಮಂತ ಗೌಡರ್, ಮಲೇಷಿಯಾದ ಕೌಲಾಲಂಪುರ್ ನಿವಾಸಿ ಕಾರ್ತಿಕ್ ಉಳಗನಾಥನ್ ಎಂಬ ಸ್ನೇಹಿತರ ಮೇಲೆ ಧಾರವಾಡ ಮೂಲದವರೇ ಆದ ರಾಹುಲ್ ಭೀಮರಾವ್ ಸಿಂಧೆ, ಸಂತೋಷ ಹಿರೇಮಠ ಸೇರಿದಂತೆ ಆರೇಳು ಜನರ ಗುಂಪೊಂದು ಹಲ್ಲೆ ಮಾಡಿ ಅವರ ಬಳಿ ಇದ್ದ ಸುಮಾರು 26 ಲಕ್ಷ ಮೌಲ್ಯದ ವಸ್ತುಗಳನ್ನು ದೋಚಿದ್ದರು ಎನ್ನಲಾಗಿದೆ.

ನಂತರ ಇಬ್ಬರ ಕೈಕಾಲುಗಳನ್ನು ಕಟ್ಟಿ ಕಾರಿನಲ್ಲಿ ಹಾಕೊಕೊಂಡು ಯಲ್ಲಾಪುರದ ಕಾಡಿನಲ್ಲಿ ಪಾಳು ಮನೆಯಲ್ಲಿ ಬಂಧಿಸಿಟ್ಟಿದ್ದರು ಎಂದು ಆರೋಪಿಸಲಾಗಿದೆ. ಅಲ್ಲದೇ ಐದು ಕೋಟಿ ತಂದು ಕೊಡದೇ ಇದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಹೇಳಲಾಗುತ್ತಿದೆ.

ಆದರೆ, ಪಾಳು ಮನೆಯಿಂದ ತಪ್ಪಿಸಿಕೊಂಡು ಬಂದ ಇಬ್ಬರು ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದು ಆರೋಪಿಗಳು ಪರಾರಿಯಾಗಿದ್ದಾರೆ. ಇದೀಗ ಅಪಹರಣಕಾರರಿಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಈ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :ಮನೆಯಲ್ಲಿ ಒಂದೇ ಕುಟುಂಬದ ನಾಲ್ವರು ಕೊಳೆತ ಸ್ಥಿತಿಯಲ್ಲಿ ಪತ್ತೆ.. ಕಾರಣ ನಿಗೂಢ!

ABOUT THE AUTHOR

...view details