ಕರ್ನಾಟಕ

karnataka

ETV Bharat / state

ಕಾರವಾರದಲ್ಲಿ ಪ್ಯಾರಾಮೋಟರ್ ಅವಘಡ... ನೌಕಾ ನೆಲೆಯ ಕಮಾಂಡೆಂಟ್ ಪ್ರಾಣ ತೆಗೆದ ದಾರ!

ಪ್ಯಾರಾಮೋಟರ್ ಪತನ ಅವಘಡದಲ್ಲಿ ನೌಕಾ ನೆಲೆಯ ಕಮಾಂಡೆಂಟ್ ಕಾಲಿಗೆ ದಾರ ಸುತ್ತಿಕೊಂಡಿದ್ದು ಅವರ ಸಾವಿಗೆ ಕಾರಣ ಎಂದು ತಿಳಿದುಬಂದಿದೆ.

paramotor-crash
ಕಾರವಾರದಲ್ಲಿ ಪ್ಯಾರಾಮೋಟರ್ ಅವಘಡ

By

Published : Oct 3, 2020, 3:38 AM IST

ಕಾರವಾರ: ಪ್ಯಾರಾಮೋಟರ್ ಅವಘಡದಲ್ಲಿ ಮೃತಪಟ್ಟ ನೌಕಾನೆಲೆಯ ಕಮಾಂಡೆಟ್ ಈಜು ಬಲ್ಲವರು. ಆದ್ರೆ ಪ್ಯಾರಾಮೋಟರ್ ದಾರ ಕಾಲಿಗೆ ಸುತ್ತಿಕೊಂಡ ಪರಿಣಾಮ ದಡಸೇರಲಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ಕಾರವಾರದಲ್ಲಿ ಪ್ಯಾರಾಮೋಟರ್ ಅವಘಡ.

ಕಳೆದ ವರ್ಷ ಕೂರ್ಮಗಡ ದೋಣಿ ದುರಂತದ ಕಹಿ ನೆನಪು ಮಾಸುವ ಮುನ್ನವೇ ಕಾರವಾರದ ರವೀಂದ್ರನಾಥ ಟ್ಯಾಗೋರ ಕಡಲತೀರದಲ್ಲಿ ಇಂತಹದೊಂದು ಘಟನೆ ನಡೆದಿದೆ. ಆಂಧ್ರಪ್ರದೇಶ ಮೂಲದ ಸದ್ಯ ಕಾರವಾರದ ಕದಂಬ ನೌಕಾನೆಲೆಯಲ್ಲಿ ಕಮಾಂಡೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಧುಸೂದನ್ ರೆಡ್ಡಿ (೫೬) ಸಾವನ್ನಪ್ಪಿದ್ದಾರೆ. ಬೆಂಗಳೂರಿನಿಂದ ಆಗಮಿಸಿದ್ದ ಸ್ನೇಹತರ ಜೊತೆ ಕುಟುಂಬಸ್ಥರ ಸಹಿತ ಕಾರವಾರದ ರವೀಂದ್ರನಾಥ ಟ್ಯಾಗೋರ ಕಡಲತೀರಕ್ಕೆ ಆಗಮಿಸಿದ್ದರು. (ಕಾರವಾರ ಕಡಲತೀರದಲ್ಲಿ ಪ್ಯಾರಾ ಮೋಟರ್ ಅವಘಡ.. ನೌಕಾ ನೆಲೆ ಕಮಾಂಡೆಂಟ್ ದುರ್ಮರಣ)

ಅದರಂತೆ ಕಾರವಾರದ ಕಡಲತೀರದ ಬಾನಂಗಳದಲ್ಲಿ ಹಾರಾಡುವ ಆಸೆಯೊಂದಿಗೆ ಪ್ಯಾರ್ ಮೋಟರಿಂಗ್ ಏರಿದ್ದರು. ಮೊದಲು ಸ್ನೇಹಿತರು ಹಾಗೂ ಅವರ ಪ್ಯಾಮಿಲಿ ಸದಸ್ಯರು ಏರಿ ಇಳಿದ ಬಳಿಕ ಕೊನೆಯದಾಗ ತಾವೂ ಹಾರಾಡೋ ಆಸೆಯೊಂದಿಗೆ ಮಧುಸೂದನ್ ರೆಡ್ಡಿ ಪ್ಯಾರಾ ಮೋಟರ್ ಏರಿದ್ದರು. ದುರದೃಷ್ಟವಶಾತ್ ಗಾಳಿಯ ವೇಗಕ್ಕೆ ಸಿಕ್ಕ ಪ್ಯಾರಾಮೋಟರ್ ಹಾರಿದ ಕೆಲವೇ ನಿಮಿಷದಲ್ಲಿ ಸಮುದ್ರದಲ್ಲಿ ಇನ್​ಸ್ಟ್ರಕ್ಟರ್ ಸಹಿತ ಇಬ್ಬರೂ ಬಿದ್ದಿದ್ದಾರೆ. ತಕ್ಷಣ ಸ್ಥಳಕ್ಕೆ ಮೀನುಗಾರರು, ಲೈಫ್ ಗಾರ್ಡ್ ಸಿಬ್ಬಂದಿ ಆಗಮಿಸಿ ಬೋಟ್ ಮೂಲಕ ಪೈಲಟ್ ರಕ್ಷಣೆ ಮಾಡಿ ದಡಕ್ಕೆ ಸಾಗಿಸಿದ್ದರು.‌ ಆದರೆ ಮಧುಸೂದನ್ ಕಾಲಿಗೆ ಪ್ಯಾರಾ ಮೋಟರ್ ದಾರ ಸುತ್ತಿಕೊಂಡ ಪರಿಣಾಮ ಎಳೆದು ತರಲಾಗದೆ ಅಲ್ಲಿಯೇ ಮುಳುಗಿದ್ದರು. ಬಳಿಕ ಪ್ಯಾರ್ ಮೋಟಾರ್​ಗೆ ದಾರಕಟ್ಟಿ ಎಳೆದು ರಕ್ಷಣೆ ಮಾಡಲು ಯತ್ನಿಸಿದರಾದರೂ ಪ್ರಯೋಜನವಾಗಿಲ್ಲ ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.

ಕಾರವಾರದಲ್ಲಿ ಪ್ಯಾರಾಮೋಟರ್ ಅವಘಡ

ಇನ್ನು ಲಾಕ್​ಡೌನ್​ನಿಂದಾಗಿ ಕಳೆದ ಐದಾರು ತಿಂಗಳಿಂದ ಸಂಪೂರ್ಣ ಜಲಸಾಹಸ ಚಟುವಟಿಕೆ ಸೇರಿದಂತೆ ಪ್ಯಾರಾ ಮೋಟಾರ್ ಹಾರಾಟ ಸ್ಥಗಿತಗೊಂಡಿತ್ತು. ಆದರೆ ಕಳೆದ ಎರಡು ದಿನಗಳ ಹಿಂದಷ್ಟೆ ಆರಂಭವಾಗಿದ್ದ ಪ್ಯಾರಾ ಮೋಟರ್ ಇಂತಹದೊಂದು ಅವಘಡಕ್ಕೆ ಕಾರಣವಾಗಿದ್ದು ದುರಂತವೇ ಸರಿ. ಕಳೆದ ಮೂರ್ನಾಲ್ಕು ವರ್ಷಗಳಿಂದ ಹಾರಾಟ ಮಾಡುತ್ತಿದ್ದ ಪ್ಯಾರಾ ಮೋಟರ್ ಇದೇ ಮೊದಲ ಬಾರಿಗೆ ನೆಲಕ್ಕಪ್ಪಳಿಸಿ ಒಂದು ಜೀವವನ್ನು ಬಲಿ ತೆಗೆದುಕೊಂಡಿದೆ. ಅವಘಡದಲ್ಲಿ ಇನ್​​ಸ್ಟ್ರಕ್ಟರ್ ವಿದ್ಯಾಧರ್ ವೈದ್ಯ ಅವರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details