ಕರ್ನಾಟಕ

karnataka

ETV Bharat / state

ಪದ್ಮಶ್ರೀ ತುಳಸಿ ಗೌಡ ಮನೆಗೆ ಕೊನೆಗೂ ಸಿಕ್ತು ಸಂಕದ ಸಂಪರ್ಕ

ಶಾಸಕಿ ರೂಪಾಲಿ ನಾಯ್ಕ ಅವರು ಪದ್ಮಶ್ರೀ ತುಳಸಿ ಗೌಡರ ಮನೆ ಎದುರಿನ ಹಳ್ಳಕ್ಕೆ ತಾತ್ಕಾಲಿಕ ಸಂಕ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.

By

Published : Aug 15, 2022, 10:36 PM IST

Updated : Aug 15, 2022, 11:01 PM IST

padma-shri-tulsi-gowdaarat
ಪದ್ಮಶ್ರೀ ತುಳಸಿ ಗೌಡಗೆ ಕೊನೆಗೂ ಸಂಕದ ಸಂಪರ್ಕ

ಕಾರವಾರ(ಉತ್ತರ ಕನ್ನಡ): ಮನೆಯೆದುರೇ ಹರಿಯುವ ಹಳ್ಳಕ್ಕೆ ಸಂಕವಿಲ್ಲದೆ ಹಳ್ಳ ದಾಟಲು ಸಮಸ್ಯೆ ಆಗುತ್ತದೆ ಎಂದು ವೃಕ್ಷಮಾತೆ, ಪದ್ಮಶ್ರೀ ತುಳಸಿ ಗೌಡ ಈ ಹಿಂದೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಇದೀಗ ಶಾಸಕಿ ರೂಪಾಲಿ ನಾಯ್ಕ ಅವರು ತಾತ್ಕಾಲಿಕವಾಗಿ ಕಾಲು ಸಂಕ ನಿರ್ಮಿಸಿ ಕೊಟ್ಟಿದ್ದಾರೆ.

ಮಳೆಗಾಲ ಆರಂಭವಾದರೂ ತುಳಸಿಗೌಡರ ಮನೆಗೆ ಸಂಕ ವ್ಯವಸ್ಥೆ ಆಗಿರಲಿಲ್ಲ. ಈ ಬಗ್ಗೆ ಇತ್ತೀಚೆಗಷ್ಟೇ ಮಕ್ಕಳಿಗೆ ಶಾಲೆಗೆ ಹೋಗಲು ಸಮಸ್ಯೆ ಆಗುತ್ತಿದೆ ಎಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರು. ಬಳಿಕ ರೂಪಾಲಿ ನಾಯ್ಕ ಅವರು ಶೀಘ್ರವಾಗಿ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡುವ ಭರವಸೆ ನೀಡಿದ್ದರು.

ಪದ್ಮಶ್ರೀ ತುಳಸಿ ಗೌಡಗೆ ಕೊನೆಗೂ ಸಂಕದ ಸಂಪರ್ಕ

ಕೊಟ್ಟ ಮಾತು ಉಳಿಸಿಕೊಂಡಿರುವ ಶಾಸಕಿ ತಾತ್ಕಾಲಿಕ ಕಾಲುಸಂಕ ನಿರ್ಮಿಸಿಕೊಟ್ಟಿದ್ದಾರೆ. ಇದು ತುಳಸಿ ಗೌಡರ ಮೊಗದಲ್ಲಿ ನಗು ಮೂಡಿಸಿದ್ದು ಶಾಶ್ವತ ಸೇತುವೆ ಕೂಡ ನಿರ್ಮಾಣವಾಗಲಿ ಎಂದಿದ್ದಾರೆ. ಸೇತುವೆ ನಿರ್ಮಾಣಕ್ಕೆ ಖಾಸಗಿ ಜಮೀನು ಮಾಲಕರೊಬ್ಬರ ತಕರಾರಿದ್ದು, ಅದನ್ನು ಬಗೆಹರಿಸುವ ಪ್ರಯತ್ನವೂ ನಡೆದಿದೆ. ಇದು ಬಗೆಹರಿದ ಬಳಿಕ ಶಾಶ್ವತ ಪರಿಹಾರಕ್ಕಾಗಿ ಸೇತುವೆ ನಿರ್ಮಿಸಿಕೊಡುವುದಾಗಿ ಶಾಸಕಿ ರೂಪಾಲಿ ನಾಯ್ಕ ತಿಳಿಸಿದ್ದಾರೆ.

ಇದನ್ನೂ ಓದಿ:ಸೇತುವೆ ಇಲ್ಲದೇ ಪದ್ಮಶ್ರೀ ತುಳಸಿ ಗೌಡ ಪರದಾಟ : ಮುಖ್ಯಮಂತ್ರಿಗೆ ಮನವಿ

Last Updated : Aug 15, 2022, 11:01 PM IST

For All Latest Updates

ABOUT THE AUTHOR

...view details