ಉತ್ತರಕನ್ನಡ:ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಹೊಸ ಮತದಾರರ ಪಟ್ಟಿ ಸಿದ್ದಪಡಿಸಲಾಗುತ್ತಿದೆ. ಡಿಸೆಂಬರ್ 23ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ್ಕುಮಾರ್ ಹೇಳಿದರು.
ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, 1-11-2016ಕ್ಕಿಂತ ಮೊದಲು ಪದವಿಯನ್ನು ಪೂರೈಸಿದವರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.ಈ ಹಿಂದೆ ಹಳೆಯ ಮತದಾರರ ಪಟ್ಟಿಯೇ ಮುಂದುವರಿಸಲಾಗುತಿತ್ತು. ಆದರೆ, ಉದ್ಯೋಗದಲ್ಲಿದ್ದವರು ಆಗಾಗ ವರ್ಗಾವಣೆಗೊಳ್ಳುವ ಕಾರಣ ಮತದಾನದ ಬಳಿಕ ಶೇಕಡವಾರು ಫಲಿತಾಂಶದಲ್ಲಿ ವ್ಯತ್ಯಾಸವಾಗುತ್ತಿದೆ. ಆದ್ದರಿಂದ ಇದೀಗ ಮತದಾರರ ಪಟ್ಟಿ ಪರಿಷ್ಕರಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಡಿಸೆಂಬರ್ 7ರವರೆಗೆ ಸೇರ್ಪಡೆಗೊಂಡ ಮತದಾರರ ಪಟ್ಟಿಯಲ್ಲಿ ಒಟ್ಟು 9092 ಮತದಾರರಿದ್ದು, 5006 ಪುರುಷರು ಹಾಗೂ 4085 ಮಹಿಳಾ ಮತದಾರರು ಇದ್ದಾರೆ. ಇದರ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ, ಸಹಕಾರಿ ಸಂಘಗಳು, ಜಿಲ್ಲಾ ಕೈಗಾರಿಕಾ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗಳ ಮುಖ್ಯಸ್ಥರಿಗೆ ಅರ್ಹ ಮತದಾರರು ಅರ್ಜಿ ಸಲ್ಲಿಸಬಹುದು ಎಂದರು.
ಜಿಲ್ಲಾಧಿಕಾರಿ ಡಾ. ಹರೀಶ್ಕುಮಾ ಸುದ್ದಿಗೋಷ್ಠಿ.. ಅರ್ಹ ಪದವೀಧರರಿದ್ದಲ್ಲಿ ಪಾಸಿಂಗ್ ಸರ್ಟಿಫಿಕೇಟ್ ಹಾಗೂ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ತಹಶೀಲ್ದಾರರು, ಜಿಲ್ಲಾಧಿಕಾರಿಗಳು ಅಥವಾ ಸಹಾಯಕ ಮತದಾರ ನೋಂದಣಾಧಿಕಾರಿಗಳಿಗೆ ಸಲ್ಲಿಸಬಹುದು ಎಂದು ಹೇಳಿದರು.