ಕರ್ನಾಟಕ

karnataka

By

Published : Apr 9, 2020, 7:06 PM IST

ETV Bharat / state

ಭಟ್ಕಳದಲ್ಲಿ ಕೊರೊನಾ ಸೋಂಕಿತ ಗರ್ಭಿಣಿ ಮಹಿಳೆ ಮನೆಗೆ ಔಷಧಿ ಸಿಂಪಡಣೆ

ಭಟ್ಕಳ ಪಟ್ಟಣದ ಚೌಕ್ ಬಜಾರ್ ಸಮೀಪದ 26 ವರ್ಷದ ಐದು ತಿಂಗಳ ಗರ್ಭಿಣಿ ಮಹಿಳೆಯಲ್ಲಿ ನಿನ್ನೆ ಕೊರೊನಾ ಸೋಂಕು ಇರುವುದು ದೃಢವಾಗಿರುವ ಹಿನ್ನೆಲೆ ಇಂದು ಜಾಲಿ ಪಟ್ಟಣ ಪಂಚಾಯತ್ ಸಿಬ್ಬಂದಿ ಔಷಧಿ ಸಿಂಪಡಣೆ ಮಾಡಿದ್ದಾರೆ.

Drug spray on Corona infected pregnant woman's home
ಕೊರೊನಾ ಸೋಂಕಿತ ಗರ್ಭಿಣಿ ಮಹಿಳೆಯ ಮನೆಗೆ ಔಷಧಿ ಸಿಂಪಡಣೆ

ಭಟ್ಕಳ: ಕೊರೊನಾ ಸೋಂಕು ಕಂಡು ಬಂದಿದ್ದ ಪಟ್ಟಣದ ಗರ್ಭಿಣಿ ಮಹಿಳೆಯ ಮನೆಗೆ ಇಂದು ಜಾಲಿ ಪಟ್ಟಣ ಪಂಚಾಯತ್ ಸಿಬ್ಬಂದಿ ಔಷಧಿ ಸಿಂಪಡಣೆ ಮಾಡಿದ್ದಾರೆ.

ಪಟ್ಟಣದ ಚೌಕ್ ಬಜಾರ್ ಸಮೀಪದ 26 ವರ್ಷದ ಐದು ತಿಂಗಳ ಗರ್ಭಿಣಿ ಮಹಿಳೆಯಲ್ಲಿ ನಿನ್ನೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಮಹಿಳೆಯ ಪತಿ ದುಬೈನಿಂದ ವಾಪಾಸ್ ಆಗಿದ್ದು, ಆತನಿಂದಲೇ ಕೊರೊನಾ ತಗುಲಿರಬಹುದು ಎನ್ನುವ ಅನುಮಾನ ವ್ಯಕ್ತಪಡಿಸಲಾಗಿತ್ತು.

ಮಹಿಳೆಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆ ಇಡೀ ಮನೆಗೆ ಸೋಡಿಯಂ ಹೈಪೋಕ್ಲೋರೈಡ್ ರಾಸಾಯನಿಕವನ್ನ ಪಟ್ಟಣ ಪಂಚಾಯತ್​ನ ಹೆಲ್ತ್ ಇನ್ಸ್​​ಪೆಕ್ಟರ್​​​ಗಳಾದ ಅಜಯ್ ಭಂಡಾರಕರ್ ಹಾಗೂ ವಿನಾಯಕ ನಾಯ್ಕ ಅಂಕೋಲಾ ನೇತೃತ್ವದಲ್ಲಿ ಪೌರಕಾರ್ಮಿಕರು ಸಿಂಪಡಣೆ ಮಾಡಿದ್ದಾರೆ.

ಗರ್ಭಿಣಿ ಮಹಿಳೆಗೆ ಇಬ್ಬರು ಮಕ್ಕಳಿದ್ದು, ಮಕ್ಕಳ ಜೊತೆ ಆಕೆ ಸಮಯ ಕಳೆದ ಹಿನ್ನೆಲೆ ಮಕ್ಕಳು ಹಾಗೂ ಪತಿ ಮೇಲೆ ಮತ್ತೆ ನಿಗಾ ಇಡಲಾಗಿದೆ. ಮಹಿಳೆಯ ಮನೆಯಲ್ಲಿ 35 ವರ್ಷದ ಸಂಬಂಧಿ ಮಹಿಳೆ ಇದ್ದರು ಎನ್ನಲಾಗಿದ್ದು, ಆಕೆಯ ಒಡನಾಟದಲ್ಲಿದ್ದ ಎಲ್ಲರ ಮೇಲೂ ಆರೋಗ್ಯ ಇಲಾಖೆಯಿಂದ ನಿಗಾ ಇಡಲಾಗಿದೆ.

ABOUT THE AUTHOR

...view details