ಕರ್ನಾಟಕ

karnataka

ETV Bharat / state

ಕಾರವಾರ ತಲುಪಿದ ಸಿಐಎಸ್‌ಎಫ್ ಯೋಧರ ಸೈಕಲ್ ಯಾತ್ರೆ - ಸರ್ದಾರ್ ವಲ್ಲಭಭಾಯಿ ಪಟೇಲ್

ಸಿಐಎಸ್​​ಎಫ್ ಸೈಕಲ್​ ಯಾತ್ರೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಗೋವಾಕ್ಕೆ ತೆರಳಿದ್ದು, ಅಲ್ಲಿಂದ ಗುಜರಾತ್​​ನತ್ತ ಸಾಗಲಿದೆ. ದಕ್ಷಿಣ ವಲಯದ ಸಿಐಎಸ್‌ಎಫ್ ಅಧಿಕಾರಿಗಳು ಸೇರಿದಂತೆ 15 ಸಿಬ್ಬಂದಿ ಈ ಯಾತ್ರೆಯಲ್ಲಿ ಭಾಗವಹಿಸಿದ್ದು, ಪ್ರತಿದಿನ 120 ಕಿ.ಮೀನಷ್ಟು ದೂರ ಪ್ರಯಾಣಿಸುತ್ತಿದೆ.

cisf-bicycle-rally-reached-karwar-and-left-for-goa
ಕಾರವಾರ ತಲುಪಿದ ಸಿಐಎಸ್‌ಎಫ್ ಯೋಧರ ಸೈಕಲ್ ಯಾತ್ರೆ

By

Published : Oct 12, 2021, 9:18 AM IST

ಕಾರವಾರ (ಉ.ಕ): 'ಏಕ ಭಾರತ ಶ್ರೇಷ್ಠ ಭಾರತ' ಧ್ಯೇಯವಾಕ್ಯದೊಂದಿಗೆ ಸೈಕಲ್ ಯಾತ್ರೆ ಕೈಗೊಂಡಿರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) ತಂಡವನ್ನು ಕಾರವಾರದಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಸ್ವಾಗತಿಸಲಾಯಿತು.

ಭಾರತ ಸ್ವಾತಂತ್ರ‍್ಯಗೊಂಡು 75 ವರ್ಷ ಪೂರ್ಣಗೊಂಡ ಸವಿನೆನಪಿಗಾಗಿ ಆಚರಿಸಲಾಗುತ್ತಿರುವ ‘ಆಜಾದಿ ಕಾ ಅಮೃತ್ ಮಹೋತ್ಸವ'ದ ಅಡಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯು ವಿವಿಧತೆಯಲ್ಲಿ ಏಕತೆಯ ಸಂದೇಶ ಸಾರಲು ಮತ್ತು ದೈಹಿಕ ಸಾಮರ್ಥ್ಯದ ಅಗತ್ಯವನ್ನು ಉತ್ತೇಜಿಸುವ ಗುರಿಯೊಂದಿಗೆ ತಿರುವನಂತಪುರಂನಿಂದ ಗುಜರಾತ್‌ನ ಕೆವಾಡಿಯಾದವರೆಗೆ ಸುಮಾರು 2,100 ಕಿ.ಮೀ. ಸೈಕಲ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ.

ಕಾರವಾರ ತಲುಪಿದ ಸಿಐಎಸ್‌ಎಫ್ ಯೋಧರ ಸೈಕಲ್ ಯಾತ್ರೆ

ಮಂಗಳೂರು ಮಾರ್ಗವಾಗಿ ಕಾರವಾರ ನಗರಕ್ಕೆ ಆಗಮಿಸಿದ ತಂಡವನ್ನು ಜಿಲ್ಲಾ ಪೊಲೀಸ್ ಇಲಾಖೆಯಿಂದ ಬರಮಾಡಿಕೊಳ್ಳಲಾಯಿತು. ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಹಾಗೂ ಕ್ರೀಡಾಪಟು ನಿವೇದಿತಾ ಸಾವಂತ್ ಅವರು ರ್ಯಾಲಿಗೆ ಹಸಿರು ನಿಶಾನೆ ತೋರಿ ಮುಂದಿನ ಪ್ರಯಾಣಕ್ಕೆ ಚಾಲನೆ ನೀಡಿದರು.

ಸಿಐಎಸ್​​ಎಫ್​ ಯಾತ್ರೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಗೋವಾಕ್ಕೆ ತೆರಳಿದ್ದು, ಅಲ್ಲಿಂದ ಗುಜರಾತ್​​ನತ್ತ ಸಾಗಲಿದೆ. ದಕ್ಷಿಣ ವಲಯದ ಸಿಐಎಸ್‌ಎಫ್ ಅಧಿಕಾರಿಗಳು ಸೇರಿದಂತೆ 15 ಸಿಬ್ಬಂದಿ ಈ ರ್ಯಾಲಿಯಲ್ಲಿ ಭಾಗವಹಿಸಿದ್ದು, ಪ್ರತಿದಿನ 120 ಕಿ.ಮೀನಷ್ಟು ದೂರ ಪ್ರಯಾಣಿಸುತ್ತಿದೆ. ಈ ರ್ಯಾಲಿಯು ಅ. 26ರಂದು ಗುಜರಾತ್‌ನ ಕೆವಾಡಿಯಾದಲ್ಲಿ ಸರ್ದಾರ್ ವಲ್ಲಭ್​​ಭಾಯಿ ಪಟೇಲರ ಏಕತಾ ಪ್ರತಿಮೆಯ ಬಳಿ ಸಮಾರೋಪಗೊಳ್ಳಲಿದೆ.

ಇದನ್ನೂ ಓದಿ:ಕಲ್ಲಿದ್ದಲು ಕೊರತೆ: ಆರ್​ಟಿಪಿಎಸ್​ನ ಐದು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತ

ABOUT THE AUTHOR

...view details