ಕರ್ನಾಟಕ

karnataka

By

Published : Nov 15, 2019, 5:11 PM IST

ETV Bharat / state

ಯಲ್ಲಾಪುರದಲ್ಲಿ ಕಣಕ್ಕಿಳಿದ ಭೀಮಣ್ಣ ನಾಯ್ಕ: ಕೈ ಪಕ್ಷದಲ್ಲಿ ಶುರುವಾಯ್ತು ಭಿನ್ನರಾಗ

ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್‌, ಭೀಮಣ್ಣ ನಾಯ್ಕ ಅವರನ್ನು ಕಣಕ್ಕಿಳಿಸಿದೆ. ಪಕ್ಷದ ಈ ನಿರ್ಧಾರ ಇದೀಗ ಭಿನ್ನಮತಕ್ಕೆ ಕಾರಣವಾಗಿದೆ.

ಯಲ್ಲಾಪುರ ಉಪಚುನಾವಣೆ: ಕಾಂಗ್ರೆಸ್​ನಲ್ಲಿ ಮೂಡಿದ ಭಿನ್ನಮತ

ಶಿರಸಿ: ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ಜೋರಾಗುತ್ತಾ ಸಾಗುತ್ತಿದೆ. ನಿನ್ನೆಯಷ್ಟೇ ಕಾಂಗ್ರೆಸ್​ನ ಅಧಿಕೃತ ಅಭ್ಯರ್ಥಿಯಾಗಿ ಪಕ್ಷದ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಉಮೇದುವಾರಿಕೆ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಯಾದ ಬೆನ್ನಲ್ಲೇ ಕಾಂಗ್ರೆಸ್​ನಲ್ಲಿ ಭಿನ್ನಮತ ಸ್ಪೋಟವಾಗಿದೆ.

ಯಲ್ಲಾಪುರ ಉಪಚುನಾವಣೆ: ಕಾಂಗ್ರೆಸ್​ನಲ್ಲಿ ಮೂಡಿದ ಭಿನ್ನಮತ

ಕ್ಷೇತ್ರದವರಿಗೆ ಟಿಕೆಟ್ ನೀಡದಿರುವ ಬಗ್ಗೆ ಪಕ್ಷದೊಳಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಸ್ಥಳೀಯ ಯುವ ಮುಖಂಡ ಲಕ್ಷ್ಮಣ ಬನ್ಸೋಡ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾಗಿದ್ದು ಸೋಮವಾರ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ.

50 ವರ್ಷಗಳಲ್ಲಿ ಮುಂಡಗೋಡ ತಾಲೂಕಿನ ಯಾವ ವ್ಯಕ್ತಿಗೂ ಕಾಂಗ್ರೆಸ್ ಬಿ ಫಾರ್ಮ್​ ನೀಡಿಲ್ಲ. ಇನ್ನೂ ಸಮಯವಿದೆ. ಪಕ್ಷ ಸೂಕ್ತ ನಿರ್ಧಾರ ತೆಗೆದುಕೊಳ್ಳದೇ ಹೋದಲ್ಲಿ 18 ಕ್ಕೆ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಬನ್ಸೋಡ್ ಎಚ್ಚರಿಕೆ ನೀಡಿದ್ದಾರೆ.

For All Latest Updates

ABOUT THE AUTHOR

...view details