ಕರ್ನಾಟಕ

karnataka

ETV Bharat / state

ಲೋಕಲ್ ಎಲೆಕ್ಷನ್​ ಗೆಲುವಿಗೆ ನಡೆಯಿತಾ ವಾಮಾಚಾರ.. ಗಲ್ಲಿ ಗಲ್ಲಿಗಳಲ್ಲಿ ಸದ್ದು ಮಾಡ್ತಿದೆ ನಿಂಬೆ ಹಣ್ಣು! - kannada news

ಈಗಷ್ಟೇ ಲೋಕ ಮಹಾ ಸಮರ ಮುಗಿದಿದೆ. ಈ ನಡುವೆ ಸಿದ್ದಾಪುರದ 5 ಕಡೆ ನಿಂಬೆಹಣ್ಣು ಹಾಗೂ ಕುಂಕುಮ ಚೆಲ್ಲಿದ್ದು, ಯಾವುದೋ ಅಭ್ಯರ್ಥಿಯ ಸೋಲಿಗಾಗಿ ವಾಮಾಚಾರ ಮಾಡಿಸಲಾಗಿದೆ ಎಂಬ ಶಂಕೆ ಜನರಲ್ಲಿ ಮೂಡಿದೆ.

ಅಭ್ಯರ್ಥಿಯ ಸೋಲಿಗಾಗಿ ವಾಮಾಚಾರ

By

Published : May 28, 2019, 9:13 PM IST

ಶಿರಸಿ : ರಾಜ್ಯದ ಹಲವಾರು ಸ್ಥಳೀಯ ಸಂಸ್ಥೆಗಳಿಗೆ ನಾಳೆ ಚುನಾವಣೆ ನಡೆಯಲಿದೆ. ಜಿಲ್ಲೆಯ ಸಿದ್ದಾಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿವ ನೀರಿನ ಹಂಚಿಕೆ ಹಾಗೂ ನಿಂಬೆಹಣ್ಣು ಸದ್ದು ಮಾಡಿವೆ.

ಕೆಲ ದಿನಗಳ ಹಿಂದೆ ಎಲ್.ಬಿ.ನಗರ ವಾರ್ಡ್​​ ನಲ್ಲಿ ಬಿಜೆಪಿ ಅಭ್ಯರ್ಥಿ ನೀರು ಹಂಚುತ್ತಿದ್ದಾರೆ ಎಂಬ ಆರೋಪವನ್ನು ಮೈತ್ರಿ ಅಭ್ಯರ್ಥಿ ಮಾಡಿದ್ರು. ಅದರ ಕುರಿತಾಗಿ ಚುನಾವಣಾಧಿಕಾರಿಗಳಿಗೆ ದೂರನ್ನೂ ಕೂಡ ನೀಡಲಾಗಿತ್ತು

ಆದ್ರೆ ಚುನಾವಣೆಗೆ ಇನ್ನೊಂದು ದಿನ ಬಾಕಿ ಇರುವಾಗ್ಲೇ ನಿನ್ನೆ ರಾತ್ರಿ ವಾರ್ಡ್ ನಂ 11 ರಲ್ಲಿ 5 ಕಡೆ ನಿಂಬೆಹಣ್ಣು ಹಾಗೂ ಕುಂಕುಮ ಚೆಲ್ಲಿದ್ದು, ಯಾವುದೋ ಅಭ್ಯರ್ಥಿಯ ಸೋಲಿಗಾಗಿ ವಾಮಾಚಾರ ಮಾಡಿಸಲಾಗಿದೆ ಎಂಬ ಶಂಕೆ ಸಾರ್ವಜನಿಕರದ್ದು, ಇದನ್ನ ನಂಬೋದು ಕಷ್ಟ. ಅದೆಲ್ಲಾ ವರ್ಕೌಟ್​ ಆಗುತ್ತೇ ಅನ್ನೋದು ಸೆಕೆಂಡರಿ. ಆದರೆ ಇದೇ ವಿಷಯ ಈಗ ಆ ಭಾಗದಲ್ಲಿ ಸಖತ್​ ಸಂಚಲನವನ್ನುಂಟು ಮಾಡಿದೆ.

ABOUT THE AUTHOR

...view details