ಕಾರವಾರ: ಈ ದೃಶ್ಯ ನೋಡಿದ್ರೆ ಎಂತವರಿಗಾದರೂ ಮನ ಕಲಕುತ್ತೆ. ಅಪಘಾತದಲ್ಲಿ ಕಾಲು ಕಳೆದುಕೊಂಡು ನರಳಾಡುತ್ತಿದ್ದ ಕರುವಿಗಾಗಿ ಹಸುವೊಂದು ಅರ್ಧಗಂಟೆಗೂ ಹೆಚ್ಚು ಹೊತ್ತು ಮೌನ ಭಾಷೆಯಲ್ಲಿಯೇ ರೋಧಿಸಿದ ಘಟನೆ ಕಾರವಾರದಲ್ಲಿ ಇಂದು ನಡೆದಿದೆ.
ಹಸು-ಕರುವಿನ ಕರುಳ ಸಂಬಂಧಕ್ಕೆ, ಮಾತೇ ಬೇಡ, ಮೌನ ರೋಧನೆ ಮನ ಕಲುಕಿತು.. ತಾಯಿ ಅಲ್ವೇ.. - calf
ಅಪಘಾತದಲ್ಲಿ ಕಾಲು ಕಳೆದುಕೊಂಡು ನರಳಾಡುತ್ತಿದ್ದ ಕರುವಿಗಾಗಿ ಹಸುವೊಂದು ಅರ್ಧಗಂಟೆಗೂ ಹೆಚ್ಚು ಹೊತ್ತು ಮೌನ ಭಾಷೆಯಲ್ಲಿಯೇ ರೋಧಿಸಿದ ಮನಕಲುಕುವ ಘಟನೆ ಕಾರವಾರದಲ್ಲಿ ಇಂದು ನಡೆದಿದೆ.
ನಗರದ ಜಿಲ್ಲಾಧಿಕಾರಿ ಕಚೇರಿ ಹಿಂಭಾಗದ ಮಹಾತ್ಮ ಗಾಂಧಿ ರಸ್ತೆಯಲ್ಲಿ ಕರುವೊಂದು ಹಸುವಿನ ಜತೆ ತೆರಳುತಿತ್ತು. ಇದೇ ವೇಳೆ ಎದುರಿನಿಂದ ಬಂದ ಬೈಕ್ ಸವಾರ ಕರುವಿಗೆ ಗುದ್ದಿದ್ದು, ಕರುವಿನ ಕಾಲು ಮುರಿದು ರಕ್ತ ಸೋರಲಾರಂಭಿಸಿತ್ತು. ಅದೇ ರಸ್ತೆಯಲ್ಲಿ ಸಂತೆ ಮಾರುಕಟ್ಟೆ ನಡೆಯುತ್ತಿದ್ದ ಕಾರಣ ತಕ್ಷಣ ಹಲವರು ಕರುವಿನ ರಕ್ಷಣೆಗೆ ಓಡಿ ಬಂದಿದ್ದರು. ಆದರೆ, ಕರವನ್ನು ಮುಟ್ಟಲು ಬಿಡದ ಹಸು ಕರುವಿನ ಕಾಲನ್ನು ನೆಕ್ಕುತ್ತ ಮೂಕ ರೋಧನೆ ವ್ಯಕ್ತಪಡಿಸುತ್ತಿತ್ತು.
ಮೂಕಪ್ರಾಣಿಗಳ ಸಂಕಟವನ್ನು ಕಣ್ಣಾರೆ ಕಂಡ ಜನರು ಮರುಕ ವ್ಯಕ್ಯಪಡಿಸಿ ಕಷ್ಟಪಟ್ಟು ಕರುವಿನ ಕಾಲಿಗೆ ಅರಿಶಿಣ ಹಚ್ಚಿ ಚಿಕಿತ್ಸೆ ನೀಡಲು ಮುಂದಾದರಾದರೂ ಪ್ರಯೋಜನವಾಗಿಲ್ಲ. ಮುರಿದ ಕಾಲಿನಲ್ಲಿಯೇ ಕುಂಟುತ್ತಾ ಓಡಾಡತೊಡಗಿತ್ತು. ಕರುವಿನ ನೋವನ್ನು ಕಂಡು ಹಸು ಕಣ್ಣೀರಿಡುತ್ತಲೇ ತನ್ನ ಕರುಳ ಬಳ್ಳಿಯ ಬಳಿ ನಿಂತಿದ್ದನ್ನೂ ಕಂಡು ಕೆಲವರ ಕಣ್ಣಾಲಿಗೆ ಒದ್ದೆಯಾಗುವಂತೆ ಮಾಡಿತ್ತು.