ಭಟ್ಕಳ: ರಾತ್ರಿ ವೇಳೆ ಮನೆಗೆ ನುಗ್ಗಿದ ಚಿರತೆಯೊಂದು ಸಿಟೌಟ್‌ನಲ್ಲಿದ್ದ ನಾಯಿಯನ್ನು ಹೊತ್ತುಕೊಂಡು ಹೋಗಿರುವ ಘಟನೆ ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವೆಂಕಟಾಪುರ ಗ್ರಾಮದ ಕಂಡೆಕೊಡ್ಲುವಿನಲ್ಲಿ ರಾತ್ರಿ 2:30ರ ಸುಮಾರಿಗೆ ನಡೆದಿದೆ.
ಭಟ್ಕಳ: ಮನೆಯ ಸಿಟೌಟ್‌ನಲ್ಲಿದ್ದ ನಾಯಿ ಹೊತ್ತೊಯ್ದ ಚಿರತೆ - ಭಟ್ಕಳ ಲೇಟೆಸ್ಟ್ ಅಪ್ಡೇಟ್ ನ್ಯೂಸ್
ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನಿವಾಸಿ ಅನಂತ ದುರ್ಗಪ್ಪ ನಾಯ್ಕ ಎನ್ನುವವರ ಮನೆಯ ಸಿಟೌಟ್‌ಗೆ ಬಂದ ಚಿರತೆ ನಾಯಿಯನ್ನು ಹೊತ್ತೊಯ್ದಿದೆ.
ರಾತ್ರಿ ವೇಳೆ ಮನೆಗೆ ನುಗ್ಗಿ ನಾಯಿಯನ್ನು ಹೊತ್ತೊಯ್ದ ಚಿರತೆ
ಇಲ್ಲಿನ ನಿವಾಸಿ ಅನಂತ ದುರ್ಗಪ್ಪ ನಾಯ್ಕ ಎನ್ನುವವರ ಮನೆಯಲ್ಲಿ ಘಟನೆ ನಡೆದಿದೆ. ನಾಯಿ ಕಿರುಚಿದಾಗ ಮನೆಯವರು ಎಚ್ಚರಗೊಂಡರು. ಅಷ್ಟರಲ್ಲೇ ಚಿರತೆ, ನಾಯಿಯನ್ನು ಮನೆಯ ಅಂಗಳಕ್ಕೆ ಎಳೆದು ತಂದಿತ್ತು. ಮನೆಯ ಮಾಲೀಕರು ನೋಡು ನೋಡುತ್ತಿದಂತೆಯೇ ನಾಯಿಯನ್ನು ಹೊತ್ತೊಯ್ದಿದೆ. ಚಿರತೆಯ ಆವೇಶ ಕಂಡ ಮನೆಯವರು ಬೆಚ್ಚಿಬಿದ್ದಿದ್ದಾರೆ.
ವೆಂಕಟಾಪುರ ಗ್ರಾಮ ಕಾಡಿನ ಪ್ರದೇಶವಲ್ಲ. ನಗರಕ್ಕೆ ಹೊಂದಿಕೊಂಡಿದ್ದು, ಇಲ್ಲಿಯೂ ಚಿರತೆ ದಾಳಿ ನಡೆಸುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ಅರಣ್ಯ ಇಲಾಖೆಗೆ ದೂರು ನೀಡಲಾಗಿದೆ.