ಶಿರಸಿ: ತಾಲೂಕು ಪಂಚಾಯಿತಿ, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಜಗಜ್ಯೋತಿ ಬಸವೇಶ್ವರ ಜಯಂತಿ ಅಧಿಕಾರಿಗಳ ನಿಷ್ಕಾಳಜಿ ನಡುವೆ ಶಿರಸಿಯಲ್ಲಿ ಕಾಟಾಚಾರಕ್ಕೆಂಬಂತೆ ನಡೆಯಿತು.
ಅಧಿಕಾರಿಗಳ ಕಾಳಜಿ ಕೊರತೆ: ಶಿರಸಿಯಲ್ಲಿ ಸರಳ ಬಸವ ಜಯಂತಿ
ನೀತಿ ಸಂಹಿತೆ ಇರುವ ಕಾರಣ ಜಯಂತಿಯನ್ನು ಸರಳವಾಗಿ ಆಯೋಜನೆ ಮಾಡಲಾಗಿದ್ದರೂ ಕಾರ್ಯಕ್ರಮ ಅಧಿಕಾರಿಗಳ ನಿರ್ಲಕ್ಷಕ್ಕೂ ಒಳಗಾಯಿತು.
ಬಸವೇಶ್ವರ ಜಯಂತಿ ಆಚರಣೆ
ನೀತಿ ಸಂಹಿತೆ ಇರುವ ಕಾರಣ ಜಯಂತಿಯನ್ನು ಸರಳವಾಗಿ ಆಯೋಜನೆ ಮಾಡಲಾಗಿದ್ದರೂ ಕಾರ್ಯಕ್ರಮ ಅಧಿಕಾರಿಗಳ ನಿರ್ಲಕ್ಷಕ್ಕೂ ಒಳಗಾಯಿತು. ಇಲ್ಲಿನ ಮಿನಿ ವಿಧಾನಸೌಧದಲ್ಲಿ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ಖಾಲಿ ಖುರ್ಚಿಗಳೇ ಹೆಚ್ಚಾಗಿ ಕಂಡು ಬಂದವು. ಸಹಾಯುಕ ಆಯುಕ್ತರು ಸೇರಿ ವಿವಿಧ ಇಲಾಖೆಗಳ ಪ್ರಮುಖರು ಗೈರು ಹಾಜರಾಗಿದ್ದರು.
ಬಸವೇಶ್ವರ ಜಯಂತಿಯನ್ನು ಕಾಟಾಚಾರಕ್ಕೆ ಆಚರಿಸಿದ್ದಕ್ಕೆ ಬಸವಣ್ಣನವರ ಅನುಯಾಯಿಗಳು ಕಾರ್ಯಕ್ರಮದ ನಂತರ ಬೇಸರ ವ್ಯಕ್ತಪಡಿಸಿದರು.