ಕಾರವಾರ :ಎಂಬಿಬಿಎಸ್ ವ್ಯಾಸಂಗಕ್ಕಾಗಿ ಉಕ್ರೇನ್ಗೆ ಬನವಾಸಿ ಮೂಲದ ವಿದ್ಯಾರ್ಥಿ ತೆರಳಿದ್ದು, ಸಂಕಷ್ಟಕ್ಕೆ ಸುಲಿಕಿದ್ದಾರೆ. ಮಗನನ್ನು ಭಾರತಕ್ಕೆ ಕರೆತರುವಂತೆ ಯುವಕನ ಪೋಷಕರು ಮನವಿ ಮಾಡಿದ್ದಾರೆ.
ಶಿರಸಿ ತಾಲೂಕಿನ ಬನವಾಸಿಯ ಮೂಲದ ಇಮ್ರಾನ್ ನಜೀರ್ ಚೌದರಿ(21) ಉಕ್ರೇನ್ನಲ್ಲಿ ಸಿಲುಕಿಕೊಂಡಿದ್ದು, ಕಳೆದ ಮೂರು ವರ್ಷದಿಂದ ಉಕ್ರೇನ್‌ನ ಪಶ್ಚಿಮ ಮಧ್ಯ ಪ್ರಾಂತ್ಯದ ಮಿನಿಶಿಯಾ ನಗರದಲ್ಲಿ ವಾಸವಾಗಿದ್ದಾರೆ. ಮಿನಿಶಿಯಾ ನ್ಯಾಶನಲ್ ಮೆಮೋರಿಯಲ್ ಪ್ರಿಗೀವ್ ಮೆಡಿಕಲ್ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ.