ಕಾರವಾರ :ಸರ್ಕಾರಕ್ಕೆ ಜನರು ಇಚ್ಛಾಮರಣದ ವರ ಕೊಟ್ಟಿದ್ದಾರೆ. ಯಾವಾಗ ಕಲಹ, ಭಿನ್ನಾಭಿಪ್ರಾಯ ಜಾಸ್ತಿ ಆಗುತ್ತದೆಯೋ ಆಗ ಮೈತ್ರಿ ಸರ್ಕಾರ ಬೀಳಲಿದೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ವ್ಯಂಗ್ಯವಾಡಿದ್ದಾರೆ.
ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ಬೀಳಿಸಲು ಯಾವ ಪ್ರಯತ್ನವೂ ಬೇಡ. ಅವರೊಳಗಿನ ಕಲಹ, ಭಿನ್ನಾಭಿಪ್ರಾಯ ಹಾಗೂ ಅಸಮಾಧಾನಕ್ಕೆ ಯಾವ ದಿನಾಂಕವೂ ನಿಗದಿ ಮಾಡುವುದು ಬೇಡ. ಅವರ ನಿರ್ಧಾರ ತೆಗೆದುಕೊಂಡ ದಿನ ಸರ್ಕಾರ ಬೀಳಲಿದೆ ಎಂದರು.
ಸಮ್ಮಿಶ್ರ ಸರ್ಕಾರ ಇಚ್ಛಾಮರಣ ಪಡೆದುಕೊಂಡೇ ಹುಟ್ಟಿದೆ.. ಅನಂತಕುಮಾರ್ ಹೆಗಡೆ ವ್ಯಂಗ್ಯೋಕ್ತಿ
ಸಮ್ಮಿಶ್ರ ಸರ್ಕಾರಕ್ಕೆ ಇಚ್ಛಾಮರಣವಿದೆ. ಅವರ ನಡುವಿನ ಭಿನ್ನತೆಯಿಂದಲೇ ಸರ್ಕಾರ ಪತನವಾಗಲಿದೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿದ್ದಾರೆ.
ರಾಜ್ಯದಲ್ಲಿ ಬಿಜೆಪಿ 22 ಸ್ಥಾನಗಳನ್ನು ಗೆಲ್ಲಲಿದೆ. ದೇಶದಲ್ಲಿ 230ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಮತ್ತೊಮ್ಮೆ ಮೋದಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.
ಶಿರಸಿಯಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ಅನಿಶ್ ಮೇಲೆ ಎಸ್ಡಿಪಿಐ ಕಾರ್ಯಕರ್ತರು ಮಾರಣಾಂತಿಕ ಹಲ್ಲೆ ನಡೆಸಿ ವಿಕೃತಿ ಮೆರೆದಿದ್ದಾರೆ. ಎಲ್ಲೆಲ್ಲಿ ಎಸ್ಡಿಪಿಐ ಬೆಳೆದಿದೆ ಅಲ್ಲಿ ಗೊಂದಲ, ಕೋಮು ದ್ವೇಷ ಬೆಳೆಯುತ್ತದೆ. ಕೇರಳ, ಮಂಗಳೂರು ಸೇರಿದಂತೆ ಇನ್ನಿತರ ಭಾಗಗಳಲ್ಲಿ ತಲೆ ಎತ್ತಿದ್ದ ಎಸ್ಡಿಪಿಐ ಈಗ ಉತ್ತರಕನ್ನಡ ಜಿಲ್ಲೆಗೂ ಕಾಲಿಟ್ಟಿದೆ. ಈ ಬಗ್ಗೆ ಸಾರ್ವಜನಿಕರು ಜಾಗೃತರಾಗಿರಬೇಕು. ಪ್ರಕರಣದ ಬಗ್ಗೆ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸುತ್ತಿದ್ದು. ಮುಂದಿನ ದಿನಗಳಲ್ಲಿ ಸಂಘಟನೆ ಮೇಲೆ ತೀವ್ರ ನಿಗಾ ಇಡಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
TAGGED:
ANANTKUMAR HEGADE STATMENT