ಕರ್ನಾಟಕ

karnataka

ETV Bharat / state

ಗಂಡು ಮಗು ಜನಿಸಲಿಲ್ಲ ಎಂದು ಆತ್ಮಹತ್ಯೆಗೆ ಶರಣಾದ ಮಹಿಳೆ

ಗಂಡು ಮಗು ಜನಿಸಲಿಲ್ಲಾ ಎಂದು ಕೊರಗಿ ಗೃಹಿಣಿಯೋರ್ವಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಮನೆಯ ಸ್ನಾನಗೃಹದಲ್ಲಿ ವೇಲಿನ ಮೂಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

A housewife who committed suicide for not having a baby boy
ಗಂಡು ಮಗು ಜನಿಸಲಿಲ್ಲ ಎಂದು ಆತ್ಮಹತ್ಯೆಗೆ ಶರಣಾದ ಮಹಿಳೆ

By

Published : Jul 10, 2020, 11:28 PM IST

ಶಿರಸಿ (ಉ.ಕ): ಎರಡೂ ಹೆಣ್ಣು ಮಕ್ಕಳಾಗಿದ್ದು ಒಂದೂ ಗಂಡು ಮಗುವಾಗಲಿಲ್ಲ ಎಂದು ಬೇಸರಗೊಂಡಿದ್ದ ಮಹಿಳೆಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿರಸಿ ತಾಲೂಕಿನ ಅಂದಳ್ಳಿಯಲ್ಲಿ ನಡೆದಿದೆ.

ಅಂದಳ್ಳಿ ಗ್ರಾಮದ ಮಧುರಾ ಸುಹಾಸ್ ಹೆಗಡೆ (29) ಇದೇ ಕಾರಣಕ್ಕೆ ಜೀವ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಗಂಡು ಮಗುವಾಗಲಿಲ್ಲ ಎಂದು ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮನೆಯಲ್ಲಿ ಸ್ನಾನಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವಳು ಬಾತ್​​​ ರೂಮಿನಲ್ಲಿಯೇ ವೇಲಿನಿಂದ ನೇಣು ಬಿಗಿದುಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details