ಕರ್ನಾಟಕ

karnataka

ETV Bharat / state

ಹೊನ್ನಾವರದ 22 ಗ್ರಾಮಗಳು ಕಾರವಾರ ಅರಣ್ಯ ವಿಭಾಗಕ್ಕೆ ಸೇರ್ಪಡೆ - ಶಾಸಕಿ ರೂಪಾಲಿ ಎಸ್.ನಾಯ್ಕ

ಆಡಳಿತಾತ್ಮಕ ತೊಡಕುಗಳ ಹಿನ್ನೆಲೆಯಲ್ಲಿ ಹೊನ್ನಾವರ ಅರಣ್ಯ ವಿಭಾಗದ 22 ಗ್ರಾಮಗಳನ್ನು ಕಾರವಾರ ವಿಭಾಗದ ಅಂಕೋಲಾ ಉಪವಿಭಾಗಕ್ಕೆ ಸೇರ್ಪಡೆ ಮಾಡಲಾಗಿದೆ.

division
22 ಗ್ರಾಮಗಳು ಕಾರವಾರ ಅರಣ್ಯ ವಿಭಾಗಕ್ಕೆ ಸೇರ್ಪಡೆ

By

Published : Jul 8, 2021, 7:14 PM IST

ಕಾರವಾರ:ಹೊನ್ನಾವರ ಅರಣ್ಯ ವಿಭಾಗದ 22 ಗ್ರಾಮಗಳನ್ನು ಕಾರವಾರ ವಿಭಾಗದ ಅಂಕೋಲಾ ಉಪ ವಿಭಾಗಕ್ಕೆ ಸೇರ್ಪಡೆ ಮಾಡಿ ಆದೇಶ ಹೊರಡಿಸಲಾಗಿದೆ.

ಹಿರೇಗುತ್ತಿ ವಲಯದ ಅಗ್ರಗೋಣ, ಜುಗಾ, ಹೆಗ್ರೆ, ಅಡಿಗೋಣ, ಕಾಮಗೆ, ಸಗಡಗೇರಿ, ದೇವಿಗದ್ದೆ, ಉಳುವರೆ, ಬಳಲೆ, ತಕಟಗೇರಿ, ಅಂದ್ಲೆ, ಕಾರೇಬೈಲ, ಕ್ಯಾಕಣಿ, ಶಿವಪುರ, ಮೊಗಟಾ, ಮೊರಳ್ಳಿ, ಗುಂಡಬಾಳಾ, ಹಿಲ್ಲೂರ, ಅಚವೆ, ಮಾಣಿಗದ್ದೆ, ಕುಂಟಗಣಿ, ಕತಗಾಲ ವಲಯದ ಕಬಗಾಲ, ಬ್ರಹ್ಮೂರ ಈ ಗ್ರಾಮಗಳು ಕಾರವಾರ ಅರಣ್ಯ ವಿಭಾಗಕ್ಕೆ ಸೇರಿಸಲಾಗಿದೆ. ಹೀಗೆ ಸೇರ್ಪಡೆಯಾದ ಒಟ್ಟು ಅರಣ್ಯದ ವಿಸ್ತೀರ್ಣ 18430.18 ಹೆಕ್ಟೇರ್ ಆಗಿದೆ.


25-2-2021ರಂದು ಅರಣ್ಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಶಾಸಕರುಗಳ ಸಭೆಯಲ್ಲಿ ಶಾಸಕಿ ರೂಪಾಲಿ ಎಸ್.ನಾಯ್ಕ ಮಾತನಾಡಿ, ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಹಾಗೂ ಅಂಕೋಲಾ ತಾಲೂಕುಗಳನ್ನು ಒಳಗೊಂಡಿದೆ. ಅಂಕೋಲಾ ತಾಲೂಕಿನ ಬಹುತೇಕ ಗ್ರಾಮಗಳು ಕಾರವಾರ ಅರಣ್ಯ ವಿಭಾಗದ ಅಂಕೋಲಾ ಉಪ ವಿಭಾಗಕ್ಕೆ ಒಳಪಟ್ಟಿದೆ. 22 ಗ್ರಾಮಗಳು ಹೊನ್ನಾವರ ಅರಣ್ಯ ವಿಭಾಗದ ಕುಮಟಾ ಉಪ ವಿಭಾಗಕ್ಕೆ ಒಳಪಟ್ಟಿದೆ.

ಆದರೆ ಕುಮಟಾ ಉಪ ವಿಭಾಗ ಹಾಗೂ ಹೊನ್ನಾವರ ಅರಣ್ಯ ವಿಭಾಗೀಯ ಕಚೇರಿ ತಮ್ಮ ಮತಕ್ಷೇತ್ರಕ್ಕೆ ಒಳಪಟ್ಟಿಲ್ಲ. ಇದರಿಂದ ಆಡಳಿತ ನಿರ್ವಹಣೆ ಕಷ್ಟಕರವಾಗಿದೆ. ಆಡಳಿತ ಹಿತದೃಷ್ಟಿಯಿಂದ 22 ಗ್ರಾಮಗಳನ್ನು ಕಾರವಾರ ಅರಣ್ಯ ವಿಭಾಗದ ಅಂಕೋಲಾ ಉಪ ವಿಭಾಗಕ್ಕೆ ಸೇರ್ಪಡೆ ಮಾಡುವುದು ಸೂಕ್ತ ಎಂದಿದ್ದರು.

ಅಂಕೋಲಾ ತಾಲೂಕಿನ ಜನತೆ ಕುಂದುಕೊರತೆಗಳ ನಿವಾರಣೆ ಹಾಗೂ ಕಾಗದಪತ್ರಗಳಿಗಾಗಿ ದೂರದ ಹೊನ್ನಾವರ ವಿಭಾಗದ ಕಚೇರಿಗೆ ಹೋಗಬೇಕಾಗಿದೆ. ಕಾರವಾರ ವಿಭಾಗ ಕಚೇರಿ ಸಮೀಪವಾಗಿರುವುದರಿಂದಲೂ ಈ ಗ್ರಾಮಗಳನ್ನು ಅಂಕೋಲಾ ಉಪ ವಿಭಾಗಕ್ಕೆ ಸೇರ್ಪಡೆ ಮಾಡುವಂತೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಸಚಿವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಉನ್ನತ ಅಧಿಕಾರಿಗಳಿಗೆ ಆದೇಶಿಸಿದ್ದರು. ಕಾರವಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಸ್ತಾವನೆಯನ್ನೂ ಸಲ್ಲಿಸಿದ್ದರು.

ABOUT THE AUTHOR

...view details