ಕರ್ನಾಟಕ

karnataka

ETV Bharat / state

Big Ghol Fish: ಉಡುಪಿ ಮೀನುಗಾರರ ಬಲೆಗೆ ಬಿದ್ದ ಅಪರೂಪದ ಬೃಹತ್​ ಆಕಾರದ ಗೋಳಿ ಮೀನು!

Big Ghol Fish: ರಾಜ್ಯದ ಕರಾವಳಿ ತೀರವಾದ ಉಡುಪಿಯಿಂದ ಹೊರಟ ಮೀನುಗಾರರಿಗೆ ಬಂಪರ್ ಹೊಡೆದಿದೆ. ಮೀನುಗಾರರ ತಂಡಕ್ಕೆ ಅಪರೂಪದ ಮೀನು ಬಲೆಗೆ ಬಿದ್ದಿದ್ದು, ಆ ಬೃಹತ್​ ಆಕಾರದ ಮೀನು ಸರಿ ಸುಮಾರು ಎರಡು ಲಕ್ಷ ರೂ ಸನಿಹಕ್ಕೆ ಮಾರಾಟವಾಗಿದೆ.

Udupi fisherman catch big Ghol fish, Ghol fish sell, Ghol fish rate, Malpe port, ಬೃಹತ್​ ಆಕಾರಕದ ಗೋಳಿ ಮೀನು ಹಿಡಿದ ಉಡುಪಿ ಮೀನುಗಾರರು, ಗೋಳಿ ಮೀನು ಮಾರಾಟ, ಗೋಳಿ ಮೀನು ಬೆಲೆ, ಮಲ್ಪೆ ಬಂದರು,
ಉಡುಪಿ ಮೀನುಗಾರರ ಬಲೆಗೆ ಬಿದ್ದ ಅಪರೂಪದ ಬೃಹತ್​ ಆಕಾರದ ಗೋಳಿ ಮೀನು

By

Published : Nov 24, 2021, 9:30 AM IST

ಉಡುಪಿ:ಸಮುದ್ರದಲ್ಲಿ ಸಾವಿರಾರು ಬಗೆಯ ಮತ್ಸ್ಯ ಸಂತತಿ ಇದೆ. ಸಣ್ಣಪುಟ್ಟ ಮೀನುಗಳಿಂದ ಹಿಡಿದು ಗಜಗಾತ್ರದ ಮೀನುಗಳೂ ಇವೆ. ಈ ಮತ್ಸ್ಯಗಳ ಬೇಟೆಗೆ ನಿತ್ಯ ಸಾವಿರಾರು ಜನ ಮೀನುಗಾರರು ಕಡಲಿನತ್ತ ಮುಖ ಮಾಡುತ್ತಾರೆ.

ಉಡುಪಿಯ ಮಲ್ಪೆ ಬಂದರಿನಿಂದ ಹೊರಟ ಮೀನುಗಾರರ ತಂಡಕ್ಕೆ ಅಪರೂಪದ ಮೀನು ಬಲೆಗೆ ಬಿದ್ದಿದೆ. ಮೀನುಗಾರರಿಗೆ ಸಾಕ್ಷ್ಯಾತ್ ಮತ್ಸ್ಯ ಕನ್ಯೆಯೇ ಒಲಿದಿದ್ದು, ಮೀನುಗಾರರು ಹಿಡಿದ ಆ ಒಂದು ಮೀನು ಒಂದು ಲಕ್ಷದ ಎಂಬತ್ತೊಂದು ಸಾವಿರದ ಇನ್ನೂರು ರೂಪಾಯಿಗೆ ಮಾರಾಟವಾಗಿದೆ.

ಉಡುಪಿ ಮೀನುಗಾರರ ಬಲೆಗೆ ಬಿದ್ದ ಅಪರೂಪದ ಬೃಹತ್​ ಆಕಾರದ ಗೋಳಿ ಮೀನು

ಮೀನುಗಾರರು ಬೀಸಿದ ಬಲೆಗೆ 18 ಕೆಜಿ ತೂಕದ ಅಪರೂಪದ ಗೋಳಿ ಎಂಬ ಮೀನು ಬಲೆಗೆ ಬಿದ್ದಿದೆ. ಈ ಮೀನು ಔಷಧೀಯ ಗುಣವನ್ನು ಹೊಂದಿದೆ. ಈ ಮೀನಿನ ಬೆಲೆ ಕೆ.ಜಿ. 9000 ರಿಂದ 10 ಸಾವಿರ ರೂಪಾಯಿವರೆಗೂ ಮಾರಾಟವಾಗುತ್ತದೆ. ಮಲ್ಪೆ ಬಂದರಿನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ 1,81,200 ರೂ.ಗೆ ಮಾರಾಟವಾಗಿದೆ.

ಉಡುಪಿ ಮೀನುಗಾರರ ಬಲೆಗೆ ಬಿದ್ದ ಅಪರೂಪದ ಬೃಹತ್​ ಆಕಾರದ ಗೋಳಿ ಮೀನು

ಔಷಧೀಯ ಗುಣವನ್ನು ಹೊಂದಿರುವ ಈ ಮೀನಿಗೆ ವಿದೇಶದಲ್ಲಿ ಭಾರೀ ಬೇಡಿಕೆ ಇದೆ. 30 ಕೆಜಿ ಮೀನಿಗೆ 5 ಲಕ್ಷ ತನಕವೂ ಬೆಲೆ ಬಾಳುತ್ತದೆ. ಈ ಮೀನಿನ ಮಾಂಸ ಅತ್ಯಂತ ರುಚಿಕರವಾಗಿರುತ್ತೆ ಎನ್ನುತ್ತಾರೆ.ಈ ಬೃಹತ್​ ಆಕಾರದ ಮೀನು ನೋಡಲು ಜನ ಮುಗಿಬಿದ್ದಿದ್ದರು.

ABOUT THE AUTHOR

...view details