ಉಡುಪಿ:ವಿದ್ಯಾರ್ಥಿನಿಯರನ್ನು ದಾರಿ ತಪ್ಪಿಸುವವರು ಇನ್ನಾದರೂ ನಿಮ್ಮ ಕೆಲಸ ನಿಲ್ಲಿಸಿ ಎಂದು ಉಡುಪಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರುದ್ರೇಗೌಡ ಮನವಿ ಮಾಡಿದ್ದಾರೆ.
ಕಾಲೇಜಿನ ಶಿಸ್ತಿನ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವಿದೆ. ಈ ಕುರಿತಂತೆ ಅವರಿಗೆ, ಪೋಷಕರಿಗೆ ತಿಳಿ ಹೇಳಿದ್ದೇವೆ. ಆದರೆ, ಅವರ ಅಶಿಸ್ತಿನ ವರ್ತನೆಯನ್ನು ತಾಳ್ಮೆಯಿಂದ ಕಾಲೇಜಿನ ಆಡಳಿತ ಮಂಡಳಿ ಸಹಿಸಿಕೊಂಡು ಬಂದಿದೆ. ಸಾವಿರಾರು ಸಂಖ್ಯೆಯ ವಿದ್ಯಾರ್ಥಿನಿಯರು ನಮ್ಮ ಕಾಲೇಜಿನಲ್ಲಿದ್ದಾರೆ. ಅದರಲ್ಲಿ 100 ಮುಸ್ಲಿಂ ವಿದ್ಯಾರ್ಥಿನಿಯರಿದ್ದಾರೆ. ಈ ನಾಲ್ಕು ವಿದ್ಯಾರ್ಥಿನಿಯರಿಂದ ಬೇರೆ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ನಾವು ತರಗತಿಯಲ್ಲಿ ಹಿಜಾಬ್- ಬುರ್ಕಾಗೆ ಅನುಮತಿ ನೀಡಿದ್ದೆವು ಎಂದರು.
ನಮ್ಮ ಕಾಲೇಜ್ ಕ್ಯಾಂಪಸ್ನೊಳಗೆ ಎಬಿವಿಪಿ, ಸಿಎಫ್ಐಗೆ ಪ್ರವೇಶ ಇಲ್ಲ. ನಾವು ಯಾವುದೇ ಸಂಘಟನೆಯನ್ನು ಎಂಟರ್ಟೈನ್ ಮಾಡೋದಿಲ್ಲ. ಶಿಸ್ತಿನಲ್ಲಿ ಇದ್ದ ಕಾಲೇಜಿನಲ್ಲಿ ಅಶಿಸ್ತು ನಡೆದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಕಾಲೇಜು ಚರ್ಚೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.