ಉಡುಪಿ:ಖೋಟಾನೋಟು ಚಲಾವಣೆ ಹಿನ್ನೆಲೆ ಉಡುಪಿಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಖೋಟಾನೋಟು ಚಲಾವಣೆ: ಇಬ್ಬರು ಆರೋಪಿಗಳ ಬಂಧನ - ಕಾರ್ಕಳ ಗ್ರಾಮಾಂತರ ಠಾಣೆ
ಕಾರ್ಕಳ ತಾಲೂಕಿನ ಕದಿಂಜೆ, ಬೆಳ್ಮಣ್, ಸಾಂತೂರ್ ಕೊಪ್ಲ ಭಾಗದಲ್ಲಿ 200 ರೂಪಾಯಿ ಮುಖ ಬೆಲೆಯ ಖೋಟಾನೋಟು ನೀಡಿ ಮೋಸ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ನೋಟು ಹಾಗೂ ಕೃತ್ಯಕ್ಕೆ ಬಳಸಿದ 10 ಲಕ್ಷ ಮೌಲ್ಯದ ಕಾರನ್ನೂ ಕೂಡ ವಶಕ್ಕೆ ಪಡೆದುಕೊಳ್ಳಲಾಗಿದೆ.
ಖೋಟಾ ನೋಟು ಚಲಾವಣೆ: ಇಬ್ಬರು ಆರೋಪಿಗಳ ಬಂಧನ
ದಾವಣಗೆರೆ ಮೂಲದ ಚೇತನ್ ಗೌಡ, ಪಿ.ಅರ್ಪಿತಾ ನವಲೆ ಬಂಧಿತರು. ಈ ಇಬ್ಬರು ಕಾರ್ಕಳ ತಾಲೂಕಿನ ಕದಿಂಜೆ, ಬೆಳ್ಮಣ್, ಸಾಂತೂರ್ ಕೊಪ್ಲ ಭಾಗದಲ್ಲಿ 200 ರೂಪಾಯಿ ಮುಖ ಬೆಲೆಯ ಖೋಟಾನೋಟು ನೀಡಿ ಮೋಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಕಾಪು ತಾಲೂಕಿನ ಕೋತಲ್ ಕಟ್ಟೆಯಲ್ಲಿ ಆರೋಪಿಗಳನ್ನ ಬಂಧಿಸಿದ್ದು, ಆರೋಪಿಗಳಿಂದ 200 ಮುಖ ಬೆಲೆಯ 4 ಖೋಟಾನೋಟು ವಶಕ್ಕೆ ಪಡೆಯಲಾಗಿದೆ. ಇನ್ನು ಈ ಕೃತ್ಯಕ್ಕೆ ಬಳಸಿದ್ದ 10 ಲಕ್ಷ ಮೌಲ್ಯದ ಕಾರನ್ನೂ ಕೂಡ ವಶಕ್ಕೆ ಪಡೆದುಕೊಂಡಿದ್ದು, ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.