ಉಡುಪಿ:ನಾಡಿನಾದ್ಯಂತ ನವರಾತ್ರಿ ಉತ್ಸವ ನಡೆಯುತ್ತಿದೆ. ದುರ್ಗೆಯ ಆರಾಧನೆ ಭಕ್ತಿಭಾವದಿಂದ ನಡೆಯುತ್ತಿದೆ. ಈ ನಡುವೆ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ನವರಾತ್ರಿ ವಿಶೇಷ ಚಂಡಿಕಾ ಹೋಮದ ಸಂದರ್ಭ ಫಲವೊಂದು ಪ್ರಸಾದ ರೂಪದಲ್ಲಿ ತಟ್ಟೆಗೆ ಬಿದ್ದು ಎಲ್ಲರಲ್ಲೂ ರೋಮಾಂಚನ ಸೃಷ್ಟಿಸಿದೆ.
ಚಂಡಿಕಾ ಯಾಗದ ಸಂದರ್ಭ ಪ್ರಸಾದ ರೂಪದಲ್ಲಿ ತಟ್ಟೆಗೆ ಬಿದ್ದ ಸೇಬುಹಣ್ಣು! - ಕೊಲ್ಲೂರು ಮೂಕಾಂಬಿಕಾ ಕ್ಷೇತ್ರ
ವಿಶೇಷ ಚಂಡಿಕಾ ಯಾಗದ ಸಂದರ್ಭ ಫಲಗಳನ್ನು ದೇವರಿಗೆ ಅರ್ಪಿಸಲಾಗಿತ್ತು. ಈ ಸಂದರ್ಭ ಹಣ್ಣುಗಳ ರಾಶಿಯಿಂದ ಸೇಬು ಹಣ್ಣು ಎದುರಿದ್ದ ತಟ್ಟೆಗೆ ಜಾರಿ ಬಿದ್ದಿದೆ.
special-chandika-yaga-in-kollur
ಉಡುಪಿ ಜಿಲ್ಲೆ ಬೈಂದೂರು ತಾಲೂಕು ಕೊಲ್ಲೂರು ಶ್ರೀ ಮೂಕಾಂಬಿಕ ದೇವಿಯ ಸನ್ನಿಧಾನದ ದೃಶ್ಯ ಇದು. ನವರಾತ್ರಿ ಧಾರ್ಮಿಕ ಕೈಂಕರ್ಯಗಳು ಕೊಲ್ಲೂರಲ್ಲಿ ಹತ್ತು ದಿನಗಳ ಹಿಂದೆಯೇ ಆರಂಭವಾಗಿದೆ.
ನವಮಿಯ ಈ ಶುಭ ದಿನದಂದು ವಿಶೇಷ ಚಂಡಿಕಾ ಯಾಗದ ಸಂದರ್ಭ ಫಲಗಳನ್ನು ದೇವರಿಗೆ ಅರ್ಪಿಸಲಾಗಿತ್ತು. ಈ ಸಂದರ್ಭ ಹಣ್ಣುಗಳ ರಾಶಿಯಿಂದ ಸೇಬು ಹಣ್ಣು ಎದುರಿದ್ದ ತಟ್ಟೆಗೆ ಜಾರಿ ಬಿದ್ದಿದೆ. ಭಕ್ತರು ಇದನ್ನು ದೇವಿಯ ಪ್ರಸಾದ ಎಂದು ಬಣ್ಣಿಸಿದ್ದಾರೆ. ದೇವಿ ಮೂಕಾಂಬಿಕೆ ಸೇವೆಯನ್ನು ಸ್ವೀಕರಿಸಿ ಸಂತುಷ್ಟಳಾಗಿದ್ದಾಳೆ ಎಂದು ಭಕ್ತರು ಜೈಕಾರ ಹಾಕಿದ್ದಾರೆ.