ಉಡುಪಿ: ಹಿಜಾಬ್ ವಿವಾದ ಸಂಬಂಧ ಹೈಕೋರ್ಟ್ ತೀರ್ಪು ಪ್ರಕಟಿಸಿದ ಬೆನ್ನಲ್ಲೇ, ಪಾಳು ಬಿದ್ದ ಕಟ್ಟಡದ ಗೋಡೆ ಮೇಲೆ ಹಿಜಾಬ್ ಪರವಾಗಿ ಬರಹಗಳನ್ನು ಬರೆದ ಘಟನೆ ಮಲ್ಪೆಯ ಬೈಲಕೆರೆ ಬಳಿ ನಡೆದಿದೆ.
ನ್ಯಾಯಾಲಯ ಹಿಜಾಬ್ ವಿವಾದದ ಕುರಿತು ತೀರ್ಪು ನೀಡಿದ ಬೆನ್ನಲ್ಲೇ ಈ ಗೋಡೆ ಬರಹ ಪತ್ತೆಯಾಗಿದೆ. ಬೈಲಕೆರೆಯಲ್ಲಿರುವ ಅನಧಿಕೃತ ಕಟ್ಟಡವೊಂದರ ಗೋಡೆಯಲ್ಲಿ ಕಂಡು ಬಂದಿರುವ ಬರಹ ಇದಾಗಿದ್ದು, ಸ್ಥಳದಲ್ಲಿ ನೂರಾರು ಸಂಖ್ಯೆಯ ಹಿಂದೂ ಕಾರ್ಯಕರ್ತರು ಜಮಾಯಿಸಿದ್ದರು. ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿರುವವರನ್ನು ಬಂಧಿಸುವಂತೆ ಆಗ್ರಹಿಸಿದರು.