ಕರ್ನಾಟಕ

karnataka

ETV Bharat / state

ಶಿರೂರು ಶ್ರೀ ನಿಗೂಢ ಸಾವಿಗೆ ವರ್ಷ:  ಎಲ್ಲಿ ಮರೆಯಾಯ್ತು ವಿಷಪ್ರಾಶನದ ವಿಷಯ?

2018 ಜು.19ರಂದು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ಸಾವು ಇದೀಗ ಮತ್ತೆ ಚರ್ಚೆಯ ಮುನ್ನೆಗೆ ಬಂದಿದೆ. ಸ್ವಾಮೀಜಿಗಳು ನಿಧನರಾಗಿ ಒಂದು ವರ್ಷ ಗತಿಸಿದ ಮೇಲೆ ಅವರ ಸಾವು ಇದೀಗ ಮತ್ತೆ ಸದ್ದು ಮಾಡುತ್ತಿದೆ.

ಶಿರೂರು ಶ್ರೀ ನಿಗೂಢ ಸಾವು

By

Published : Jul 20, 2019, 8:47 AM IST

Updated : Jul 20, 2019, 12:15 PM IST

ಉಡುಪಿ:ಸಾಕಷ್ಟು ವಿವಾದಗಳಿಗೆ ಕಾರಣವಾಗಿದ್ದ ಶಿರೂರು ಶ್ರೀಗಳ ಸಾವು ಇದೀಗ ಮತ್ತೆ ಸದ್ದು ಮಾಡುತ್ತಿದೆ. ಶಿರೂರು ಶ್ರೀಗಳು ಗತಿಸಿ ಇಂದಿಗೆ ಒಂದು ವರ್ಷ.

ಈ ಹಿನ್ನೆಲೆಯಲ್ಲಿ ಶಿರೂರು ಅಭಿಮಾನಿಗಳು ಸಂಸ್ಮರಣ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ವೇಳೆ ಸ್ವಾಮೀಜಿಗಳ ಸಾವು ಸಹಜ ಸಾವಲ್ಲ, ಈ ಬಗ್ಗೆ ಸರಿಯಾಗಿ ತನಿಖೆ ಅಗಿಲ್ಲ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ತನಿಖಾದಿಕಾರಿಗಳು ಇದೊಂದು ಸಹಜ ಸಾವು ಅಂತ ವರದಿ ಕೊಟ್ಟು ಪ್ರಕರಣ ಮುಗಿಸಿದ್ದಾರೆ. ಸ್ಮರಣಾ ಕಾರ್ಯಕ್ರಮದಲ್ಲಿ ತನಿಖೆ‌ ಬಗ್ಗೆ ಮತ್ತು ಈ ಬಗ್ಗೆ ನಿರಾಸಕ್ತಿ ತೋರುವ ಇತರ ಮಠಾಧಿಪತಿಗಳ ಬಗ್ಗೆಯೂ ಆಕ್ರೋಶ ವ್ಯಕ್ತವಾಗಿದೆ.

ಶಿರೂರು ಸ್ವಾಮೀಜಿ ಇಹಲೋಕ ತೊರೆದು ಒಂದು ವರ್ಷ ಕಳೆದರೂ ಅವರ ಸಾವಿನ ನಿಗೂಢತೆಯ ಬಗ್ಗೆ ಇದ್ದ ಸಂಶಯಗಳು ಇನ್ನೂ ನಿವಾರಣೆಯಾಗಿಲ್ಲ. ಈ ದಿನದವರೆಗೂ ಸ್ವಾಮೀಜಿ ಸಾವಿನ ಬಗ್ಗೆ ಕನಿಷ್ಟ ಒಂದು ದೂರು ಕೂಡಾ ದಾಖಲಾಗಿಲ್ಲ. ಇನ್ನೂ ಕಾಲ ಮಿಂಚಿಲ್ಲ ಅಂತಾರೆ ಕಾನೂನು ತಜ್ಞರು. ಸ್ವಾಮೀಜಿಗಳು ಸತ್ತ ಮರುಕ್ಷಣದಲ್ಲೇ ಮಣಿಪಾಲದ ಕೆಎಂಸಿ ಆಸ್ಪತ್ರೆಯ ಅಧೀಕ್ಷಕರು ದೇಹದಲ್ಲಿ ವಿಷಕಾರಿ ಅಂಶ ಇದೆ ಎಂದಿದ್ದರು. ಮರಣೋತ್ತರ ವರದಿಯಲ್ಲಿಯೂ ವಿಷದ ಉಲ್ಲೇಖವಿತ್ತು.

ಶಿರೂರು ಶ್ರೀ ನಿಗೂಢ ಸಾವು

ಟಾಕ್ಸಿಕಾಲಜಿ ವರದಿ ಪ್ರಕಾರ ಸ್ವಾಮಿಗಳ ರಕ್ತ ಮತ್ತು ಉದರಾಂಗದಲ್ಲಿ organophosphorus (ಆರ್ಗನೋಫಾಸ್ಫರಸ್) ಮತ್ತು ಮೂತ್ರದಲ್ಲಿ benzodiazepines (ಬೆಂಜೊಡಿಯಜೆಪೈನೆಸ್​) ಎಂಬ ವಿಷವಿದೆ ಎಂದು ನಮೂದಿಸಲಾಗಿದೆ. ಆದ್ರೆ ಮಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲದಿಂದ ಬಂದ ಅಂತಿಮ ವರದಿಯಲ್ಲಿ ಯಾವುದೇ ವಿಷಕಾರಿ ಅಂಶ ಇಲ್ಲ ಎಂದು ಹೇಳಲಾಗಿತ್ತು.

ಎರಡನೇ ವರದಿಯ ಆಧಾರದಲ್ಲಿ ತನಿಖಾಧಿಕಾರಿಗಳು ಇದೊಂದು ಸ್ವಾಭಾವಿಕ ಸಾವು ಎಂಬ ನಿರ್ಣಯಕ್ಕೆ ಬಂದಿದ್ದರು. ವಿಷಕಾರಿ ಅಂಶಗಳಿರುವ ವರದಿಯನ್ನಿಟ್ಟುಕೊಂಡು ಪ್ರಕರಣ ರೀ ಓಪನ್ ಮಾಡಬಹುದು ಎನ್ನುತ್ತಾರೆ ಕಾನೂನು ತಜ್ಞರು ಹೇಳಿದ್ದಾರೆ.

ಶಿರೂರು ಸ್ವಾಮಿಗಳ ಸಾವಿಗೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆ ವಿಶೇಷ ಮಕ್ಕಳ ಸಮ್ಮುಖದಲ್ಲಿ ಸಂಸ್ಮರಣಾ ಕಾರ್ಯಕ್ರಮ ನಡೆಸಲಾಯಿತು. ಆದರೆ, ಈ ವಿಶೇಷ ಸಭೆಯಲ್ಲಿ ಸ್ವಾಮಿಗಳ ಅಭಿಮಾನಿಗಳಿಂದ ಸಾವಿನ ಮರು ತನಿಖೆಗೆ ವ್ಯಾಪಕ ಒತ್ತಾಯ ಕೇಳಿ ಬಂತು. ಭಯದಿಂದ ಸ್ವಾಮೀಜಿಗಳ ಸಂಬಂಧಿಕರು ಯಾರೂ ಮುಂದೆ ಬರದ ಕಾರಣ ಇನ್ನೂ ಕೂಡ ದೂರು ದಾಖಲಾಗಿಲ್ಲ. ಸ್ವಾಮೀಜಿಯ ಸಾವಿನ ನಂತರವೂ ಅವರ ಬಗ್ಗೆ ಅಪಪ್ರಚಾರ ನಡೆಸಲಾಗುತ್ತಿದೆ. ಅಷ್ಟಮಠಾಧೀಶರಾರೂ ಈ ಸಾವಿನ ತನಿಖೆಗೆ ಆಗ್ರಹಿಸಿಲ್ಲ.

ತನಿಖೆಯ ನೆಪದಲ್ಲಿ ಸ್ವಾಮೀಜಿಯ ಬಂಧುಗಳಿಗೆ ಕಿರುಕುಳ ಸಹ ನೀಡಲಾಗಿದೆ. ಸಾವಿಗೆ ಮುನ್ನ ಶಿರೂರು ಶ್ರೀಗಳು ಆತಂಕವ್ಯಕ್ತಪಡಿಸಿ ಪೊಲೀಸ್​​ ಇಲಾಖೆಗೆ ಪತ್ರ ಬರೆದಿದ್ದರು. ಈ ಪತ್ರದಲ್ಲಿ ಉಲ್ಲೇಖಿಸಿದ ಯಾವುದೇ ಮಠಾಧೀಶರನ್ನು, ವ್ಯಕ್ತಿಗಳನ್ನು ತನಿಖೆ ಮಾಡಿಲ್ಲ ಎಂದು ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Last Updated : Jul 20, 2019, 12:15 PM IST

ABOUT THE AUTHOR

...view details