ಉಡುಪಿ:ಕರಾವಳಿ ಬೈಪಾಸ್ನಲ್ಲಿ ರಾಜಸ್ಥಾನಿ ಮೂಲದ ಕಾರ್ಮಿಕರು ಬೀಡು ಬಿಟ್ಟಿದ್ದಾರೆ. ಜಿಲ್ಲೆಯಾದ್ಯಂತ ಸದ್ಯ ಉತ್ಸವ, ಹಬ್ಬದ ಸೀಸನ್ ಇದ್ದು, ವ್ಯಾಪಾರಕ್ಕೆಂದು ಬಂದವರು ರಸ್ತೆ ಬದಿಯಲ್ಲೇ ಟೆಂಟ್ ಹಾಕಿಕೊಂಡಿದ್ದಾರೆ.
ಕರಾವಳಿ ಬೈಪಾಸ್ನಲ್ಲಿ ರಾಜಸ್ಥಾನಿ ಕಾರ್ಮಿಕರು : ತಲೆಮೇಲೆ ಸೂರಿಲ್ಲ.. ಮಕ್ಕಳಿಗೆ ಶಾಲೆ ಇಲ್ಲ. - Rajasthani workers in Udupi coastal bypass
ಕರಾವಳಿ ಬೈಪಾಸ್ನಲ್ಲಿ ರಾಜಸ್ಥಾನಿ ಮೂಲದ ಕಾರ್ಮಿಕರು ಬೀಡುಬಿಟ್ಟಿದ್ದಾರೆ. ಜಿಲ್ಲೆಯಾದ್ಯಂತ ಸದ್ಯ ಉತ್ಸವ ಹಾಗೂ ಹಬ್ಬದ ಸೀಸನ್ ಇದ್ದು, ವ್ಯಾಪಾರಕ್ಕೆಂದು ಬಂದವರು ರಸ್ತೆ ಬದಿಯಲ್ಲೇ ಟೆಂಟ್ ಹಾಕಿಕೊಂಡಿದ್ದಾರೆ.
ಇನ್ನು ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಕಾರ್ಮಿಕರು ಬೀಡುಬಿಟ್ಟ ಸ್ಥಳಕ್ಕೆ ತೆರಳಿ, ಅವರಿಗೆ ಮೂಲಭೂತ ಅಗತ್ಯವಿರುವ ವಸ್ತುಗಳನ್ನು ನೀಡಿದ್ದಾರೆ. ಹಾಗೂ ಅವರ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಇನ್ನು ಈ ಕಾರ್ಮಿಕರ ಮಕ್ಕಳು ಶಿಕ್ಷಣವಂಚಿತರಾಗಿದ್ದು, ರಸ್ತೆ ಬದಿಯಲ್ಲಿಯೇ ಬೇಕಾಬಿಟ್ಟಿಯಾಗಿ ಓಡಾಡುವುದರಿಂದ ಸಂಚರಿಸುವ ವಾಹನಗಳಿಗೆ ಅಡ್ಡಿಯಾಗುತ್ತಿದೆ. ಹಾಗಾಗಿ ಜಿಲ್ಲಾಡಳಿತ ಈ ಮಕ್ಕಳನ್ನು ಶಾಲೆಗೆ ಸೇರ್ಪಡೆ ಮಾಡಬೇಕು. ಇವರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ನಾಗರೀಕ ಸಮಿತಿಯ ಮುಖಂಡರು ಒತ್ತಾಯಿಸಿದ್ದಾರೆ.
TAGGED:
Udupi coastal bypass