ಉಡುಪಿ: ಪ್ರಸ್ತುತ ದೇಶಿ ತಳಿಯ ಗೋವುಗಳು ತುಂಬಾ ವಿರಳ. ಹೀಗಾಗಿ, ಅಳಿವಿನಂಚಿನಲ್ಲಿರುವ ದೇಶಿ ಗೋವುಗಳ ಉಳಿವಿಗಾಗಿ ಪರಭಾರೆ ಆದ ಗೋಮಾಳ ಭೂಮಿಯ ರಕ್ಷಣೆಗಾಗಿ ಪೇಜಾವರ ಶ್ರೀಗಳ ನೇತೃತ್ವದಲ್ಲಿ ವಿಶೇಷ ಪ್ರಯತ್ನ ಕರಾವಳಿಯಲ್ಲಿ ಶುರುವಾಗಿದೆ.
ಇತ್ತೀಚಿನ ವರ್ಷಗಳಲ್ಲಿ ದೇಸಿ ಗೋವುಗಳ ಸಂಖ್ಯೆ ವಿರಳವಾಗಿದೆ. ದೊಡ್ಡ ಮಟ್ಟದಲ್ಲಿ ಉದ್ಯಮವಾಗಿ ವಿದೇಶಿ ಗೋವುಗಳನ್ನು ಸಾಕಾಣಿಕೆ ಮಾಡಲಾಗುತ್ತಿದೆ. ಇದಕ್ಕೆ ಕಾರಣ ಹಲವಾರು. ಹಿಂದೆ ಗ್ರಾಮಗಳಲ್ಲಿ ಗೋವುಗಳಿಗೆ ಗೋಮಾಳದ ಜಾಗದಲ್ಲಿ ಹುಲ್ಲು ಯಥೇಚ್ಛ ಸಿಗುತ್ತಿತ್ತು.
ಆದ್ರೆ, ಇತ್ತೀಚಿನ ವರ್ಷಗಳಲ್ಲಿ ಗೋಮಾಳ ಜಾಗ ಪರಭಾರೆ ಆಗುತ್ತಿವೆ. ಕೆಲ ಗ್ರಾಮದಲ್ಲಿ ಗೋಮಾಳದ ಜಾಗ ಬೇರೆ-ಬೇರೆ ಉದ್ದೇಶಕ್ಕೆ ಬಳಕೆಯಾಗುತ್ತಿದೆ. ಹೀಗಾಗಿ, ಗೋಮಾಳ ಜಾಗವನ್ನು ಊರಿನಲ್ಲಿ ಗೋ ಸಾಕಣೆ ಮಾಡುವವರಿಗೆ, ಗೋ ಶಾಲೆಗಳಿಗೆ ನೀಡಬೇಕು ಅಂತಾ ಪೇಜಾವರ ವಿಶ್ವಪ್ರಸನ್ನ ತೀರ್ಥರು ಆಗ್ರಹಿಸಿದ್ದಾರೆ.
ಬ್ರಿಟಿಷರ ಕಾಲದಲ್ಲೂ ಗೋಮಾಳ ಜಾಗ ಗೋಮಾಳ ಆಗಿಯೇ ಉಳಿದಿತ್ತು. ಆದ್ರೆ, ನಂತರದಲ್ಲಿ ಗೋಮಾಳ ಬೇರೆ-ಬೇರೆ ಉದ್ದೇಶಕ್ಕೆ ಯಾಕೆ ಬಳಸಲಾಗುತ್ತಿದೆ ಅಂತಾ ಪೇಜಾವರ ವಿಶ್ವ ಪ್ರಸನ್ನ ತೀರ್ಥರು ಸರ್ಕಾರವನ್ನು ಪ್ರಶ್ನಿಸಿದ್ದಾರೆ.