ಉಡುಪಿ: ರಾಷ್ಟ್ರೀಯ ಹೆದ್ದಾರಿ-66ರ ಕರಾವಳಿ ಬೈಪಾಸ್ ಮೇಲ್ಸೇತುವೆ ಮೇಲೆ ಪೇಜಾವರ ವಿಶ್ವೇಶ್ವತೀರ್ಥ ಮೇಲ್ಸೇತುವೆ ಎಂಬ ಬೋರ್ಡು ದಿಢೀರ್ ಕಾಣಿಸಿಕೊಂಡಿದೆ.
ಉಡುಪಿ ಕರಾವಳಿ ಬೈಪಾಸ್ ಫ್ಲೈಓವರ್ನಲ್ಲಿ 'ಪೇಜಾವರಶ್ರೀ ಮೇಲ್ಸೇತುವೆ' ಬೋರ್ಡ್ ಪ್ರತ್ಯಕ್ಷ - Udupi News
ಉಡುಪಿಯ ಕರಾವಳಿ ಬೈಪಾಸ್ ಮೇಲ್ಸೇತುವೆ ಮೇಲೆ 'ಪೇಜಾವರಶ್ರೀ ಮೇಲ್ಸೇತುವೆ' ಎಂಬ ಬೋರ್ಡು ಪ್ರತ್ಯಕ್ಷವಾಗಿದೆ.
"ಪೇಜಾವರಶ್ರೀ ಮೇಲ್ಸೇತುವೆ" ಬೋರ್ಡು ಪ್ರತ್ಯಕ್ಷ
ಈ ಮೂಲಕ ಬೈಪಾಸ್ ಮೇಲ್ಸೇತುವೆಗೆ ಪೇಜಾವರ ಶ್ರೀಗಳ ಹೆಸರು ನಾಮಕರಣವಾಗಿದೆ ಎಂಬ ಊಹೆ ಸಾರ್ವಜನಿಕರಲ್ಲಿ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಮುಖಂಡರು ಸೇತುವೆಗಳಿಗೆ ಸ್ಥಳೀಯರ ಹೆಸರನ್ನಿಡಬೇಕು ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ನಡೆದಿರುವ ಬೆಳವಣಿಗೆ ಇದಾಗಿದೆ.
ಮಂಗಳೂರಿನಲ್ಲಿ ರಾಣಿ ಅಬ್ಬಕ್ಕ, ಕೋಟಿ-ಚೆನ್ನಯ ಮೊದಲಾದ ಹೆಸರುಗಳನ್ನು ಸೇತುವೆಗಳಿಗೆ ಇಡುವ ವಿಚಾರ ಚರ್ಚೆಗೆ ಗ್ರಾಸವಾಗಿತ್ತು. ಬೆಂಗಳೂರಿನ ಯಲಹಂಕ ಸೇತುವೆಗೆ ವೀರ ಸಾವರ್ಕರ್ ಹೆಸರಿಡುವ ವಿವಾದದ ಬಳಿಕ ಅಲ್ಲಲ್ಲಿ ಈ ವಿದ್ಯಮಾನ ಕಂಡು ಬರುತ್ತಿದೆ.
Last Updated : Jun 7, 2020, 1:56 PM IST