ಕರ್ನಾಟಕ

karnataka

ETV Bharat / state

ಹಿಜಾಬ್ ಹಿಂದೆ ಐಸಿಸ್ ಕೈವಾಡ ಇದೆ : ಕಂದಾಯ ಸಚಿವ ಆರ್‌ ಅಶೋಕ್ ಗಂಭೀರ ಆರೋಪ - ಹಿಜಾಬ್​​ ವಿವಾದ ಬಗ್ಗೆ ಸಚಿವ ಅಶೋಕ್​ ಪ್ರತಿಕ್ರಿಯೆ

ಹಿಜಾಬ್ ಹೋರಾಟದ ಸಮಗ್ರ ತನಿಖೆ ಆಗಬೇಕು. ಈ ಬಗ್ಗೆ ನಾನು ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ. ಹೋರಾಟದ ಹಿಂದಿರುವ ಭಯೋತ್ಪಾದಕರನ್ನು ಹೊರಗೆ ಎಳೆಯಬೇಕಾಗಿದೆ..

Minister R Ashok reaction about hijab controversy
ಹಿಜಾಬ್​​ ವಿವಾದ ಬಗ್ಗೆ ಸಚಿವ ಅಶೋಕ್​ ಪ್ರತಿಕ್ರಿಯೆ

By

Published : Feb 19, 2022, 8:12 PM IST

Updated : Feb 19, 2022, 8:25 PM IST

ಉಡುಪಿ :ಹಿಜಾಬ್​​ ವಿವಾದದ ಹಿಂದೆ ವಿದ್ಯಾರ್ಥಿನಿಯರ ತಪ್ಪಿಲ್ಲ. ಇದರ ಹಿಂದೆ ವಿದೇಶಿ ಕೈವಾಡವಿದೆ. ಜಿಲ್ಲೆಯಲ್ಲಿ ಆರಂಭವಾದ ಗಲಾಟೆ ಇಡೀ ಪ್ರಚಂಚಕ್ಕೆ ಹರಡಿದ್ದು, ಇದರ ಹಿಂದೆ ಅನೇಕ ಜನರಿದ್ದಾರೆ ಎಂದು ಕಂದಾಯ ಸಚಿವ ಆರ್​.ಅಶೋಕ್​ ಆರೋಪಿಸಿದರು.

ಹಿಜಾಬ್​​ ವಿವಾದದ ಬಗ್ಗೆ ಸಚಿವ ಅಶೋಕ್​ ಪ್ರತಿಕ್ರಿಯೆ ನೀಡಿರುವುದು..

ಕಾರ್ಕಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಆರಂಭವಾದ ಘಟನೆ ದೇಶಾದ್ಯಂತ ಎಷ್ಟು ವೇಗವಾಗಿ ಹರಡಿದೆ. ಇದನ್ನು ವಿದ್ಯಾರ್ಥಿಗಳು ಮಾಡಲು ಸಾಧ್ಯವಿಲ್ಲ. ಇದರ ಹಿಂದೆ ಐಸಿಸ್, ಕೆಎಫ್​​​ಡಿ ಮತ್ತಿತರರ ಸಂಘಟನೆಗಳ ಕೈವಾಡ ಇದೆ ಎಂದು ಆರೋಪಿಸಿದರು.

ವಿದ್ಯಾಭ್ಯಾಸಕ್ಕಾಗಿ ಮಕ್ಕಳು ಶಾಲೆಗೆ ಹೋಗಬೇಕೇ ಹೊರತು ಧರ್ಮ ಪ್ರಚಾರಕ್ಕಾಗಿ ಶಾಲೆಗೆ ಹೋಗಬಾರದು ಎಂಬುದನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು. ನೀವು ನಿಮ್ಮ ಮನೆಯಲ್ಲಿ ಏನು ಬೇಕಾದರೂ ಮಾಡಿಕೊಳ್ಳಿ, ಶಾಲೆ-ಕಾಲೇಜುಗಳಿಗೆ ಕೇವಲ ವಿದ್ಯೆ ಕಲಿಯಲು ಮಾತ್ರ ಹೋಗಬೇಕು ಎಂದರು.

ಹಿಜಾಬ್​ ಹೋರಾಟ ಮಾಡಿ ಎಂದು ಐಸಿಸ್ ಹೇಳಿಕೊಟ್ಟಿದೆ. ಮಕ್ಕಳು ಇರುವುದರಿಂದ ನಾವು ಹೆಚ್ಚು ಹಸ್ತಕ್ಷೇಪ ಮಾಡಲು ಆಗುವುದಿಲ್ಲ. ನಾವು ಹಂತ-ಹಂತವಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ.

ಹಿಜಾಬ್ ಹೋರಾಟದ ಸಮಗ್ರ ತನಿಖೆ ಆಗಬೇಕು. ಈ ಬಗ್ಗೆ ನಾನು ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ. ಹೋರಾಟದ ಹಿಂದಿರುವ ಭಯೋತ್ಪಾದಕರನ್ನು ಹೊರಗೆ ಎಳೆಯಬೇಕಾಗಿದೆ ಎಂದರು.

ಇದನ್ನೂ ಓದಿ: ಈಶ್ವರಪ್ಪನವರ ತಪ್ಪೇನು, ರಾಜೀನಾಮೆ ಏಕೆ​ ಕೊಡಬೇಕು : ಸಚಿವ ನಾರಾಯಣ ಗೌಡ ಪ್ರಶ್ನೆ

Last Updated : Feb 19, 2022, 8:25 PM IST

ABOUT THE AUTHOR

...view details