ಉಡುಪಿ:ಸಾಕು ನಾಯಿಯನ್ನು ಗುಂಡಿಟ್ಟು ಕೊಂದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಸಾಕು ನಾಯಿಯನ್ನು ಗುಂಡಿಟ್ಟು ಕೊಂದ ಆರೋಪ: ವ್ಯಕ್ತಿಯ ಬಂಧನ - ವ್ಯಕ್ತಿಯ ಬಂಧನ
ಸಾಕು ನಾಯಿಯನ್ನು ಗುಂಡಿಟ್ಟು ಕೊಂದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ನಿಡಂಬಳ್ಳಿ ನಿವಾಸಿ ಬ್ರಾನ್ ಡಿಸೋಜಾ ಬಂಧಿತ ಆರೋಪಿ.
ನಿಡಂಬಳ್ಳಿ ನಿವಾಸಿ ಬ್ರಾನ್ ಡಿಸೋಜಾ ಬಂಧಿತ ಆರೋಪಿ. ಕೆಮ್ಮಣ್ಣು ಮೂಡು ತೋನ್ಸೆ ನಿವಾಸಿ ಗುಂಡಪ್ಪ ಪೂಜಾರಿಯವರು ಬೆಳಗ್ಗೆ ಕೆಮ್ಮಣ್ಣುವಿನ ಹಾಲು ಡೈರಿಯಿಂದ ವಾಪಸ್ಸು ಮನೆಗೆ ನಡೆದುಕೊಂಡು ಹೋಗುವಾಗ ಮನೆಯ ಸಾಕು ನಾಯಿ ಹಿಂಬಾಲಿಸಿಕೊಂಡು ಬರುತ್ತಿತ್ತು. ಕೆಮ್ಮಣ್ಣು ನಿಡಂಬಳ್ಳಿ ಕಲ್ಯಾಣಪುರ ರಸ್ತೆಯಲ್ಲಿ ಬರುವಾಗ ನಿಡಂಬಳ್ಳಿ ನಿವಾಸಿ ಬ್ರಾನ್ ಡಿಸೋಜಾ ತನ್ನ ಮನೆಯ ಎದುರು ರಸ್ತೆಯ ಬದಿಯಲ್ಲಿ ನಿಂತುಕೊಂಡು ಕೈಯಲ್ಲಿದ್ದ ಏರ್ ಗನ್ನಿಂದ ಗುಂಡಪ್ಪ ಪೂಜಾರಿಯವರನ್ನು ಹಿಂಬಾಲಿಸಿಕೊಂಡು ಬರುತ್ತಿದ್ದ ಸಾಕು ನಾಯಿಗೆ ಶೂಟ್ ಮಾಡಿದ್ದು, ನಾಯಿ ಸಾವನ್ನಪ್ಪಿದೆ.
ಈ ಬಗ್ಗೆ ಗುಂಡಪ್ಪ ಪೂಜಾರಿ ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಬ್ರಾನ್ ಡಿಸೋಜಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.