ಉಡುಪಿ :ಬ್ಲಾಕ್ ಫಂಗಸ್‌ಗೆ ಪರಿಣಾಮಕಾರಿ ಔಷಧಿಯಾದ ಲಿಪೊಸೊನಮ್ ಆ್ಯಂಪೊಟೆರಿಸಿನ್ ಕಂಡು ಹಿಡಿದವರು ಉಡುಪಿ ಮೂಲದವರಾಗಿದ್ದಾರೆ.
ಕುಂದಾಪುರ ಮೂಲದ ಗಂಗೊಳ್ಳಿಯವರಾದ ಬಾಂಡ್ಯ ಶ್ರೀಕಾಂತ್ ಪೈ ಈ ಔಷಧಿ ಕಂಡು ಹಿಡಿದವರು. ಗಂಗೊಳ್ಳಿ ಹಾಗೂ ಕುಂದಾಪುರದಲ್ಲಿ ಪ್ರಾಥಮಿಕ ಪಿಯುಸಿ ಶಿಕ್ಷಣ ಪೂರೈಸಿದ್ದ ಇವರು, ಬೆಂಗಳೂರಿನಲ್ಲಿ B ಫಾರ್ಮ, ಮಣಿಪಾಲದಲ್ಲಿ M ಫಾರ್ಮ್ ಶಿಕ್ಷಣ ಪಡೆದಿದ್ದರು.
ಬಳಿಕ ಉದ್ಯೋಗಕ್ಕಾಗಿ ಮುಂಬೈನ ಭಾರತ್ ಸೀರಮ್ಸ್ ಅಂಡ್ ವ್ಯಾಕ್ಸಿನ್ ಲಿಮಿಟೆಡ್ ಕಂಪನಿ ಸೇರಿದರು. ಸದ್ಯ ಮಾರಕ ಕಾಯಿಲೆ ಬ್ಲಾಕ್ ಫಂಗಸ್‌ಗೆ ಔಷಧಿ ಸಂಶೋಧಿಸಿರುವುದು ಶ್ರೀಕಾಂತ್ ಪೈ ಮತ್ತು ಅವರ ತಂಡ ಅನ್ನೋದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.
ಔಷಧಿ ಕುರಿತು ಮಾತನಾಡಿದ ಬಾಂಡ್ಯ ಶ್ರೀಕಾಂತ್ ಪೈ ಲಿಪೊಸೊನಮ್ ಆ್ಯಂಪೊಟೆರಿಸಿನ್ ಬ್ಲಾಕ್ ಫಂಗಸ್‌ಗೆ ಚಿಕಿತ್ಸೆ ನೀಡಲು ವೈದ್ಯರು ಸೂಚಿಸುವ ಪ್ರಮುಖ ಉತ್ಪನ್ನವಾಗಿದ್ದು, ಇದಕ್ಕೆ ₹3,000 ದಿಂದ ₹3,500 ದರದಲ್ಲಿ ಔಷಧಿ ಲಭ್ಯವಿದೆ.
ಇದಕ್ಕಾಗಿ ಪೇಟೆಂಟ್ ಕೂಡ ಪಡೆಯಲಾಗಿದೆ. ಶ್ರೀಕಾಂತ್ ಪೈ ಸದ್ಯ ಮುಂಬೈನಲ್ಲಿ ವಿಶ್ರಾಂತ ಜೀವನ ಸಾಗಿಸುತ್ತಿದ್ದು, ಫ್ರೀಲ್ಯಾನ್ಸ್ ಕನ್ಸಲ್ಟೆಂಟ್ ಆಗಿ ದುಡಿಯುತ್ತಿದ್ದಾರೆ.