ಕರ್ನಾಟಕ

karnataka

By

Published : Mar 5, 2021, 11:07 AM IST

Updated : Mar 5, 2021, 11:57 AM IST

ETV Bharat / state

ಮುಂಡಾಸು ಬಿಗಿದು ಕಂಬಳ ಗದ್ದೆಗಿಳಿದ ‘ತುಳುನಾಡ ಪೊಣ್ಣು’.. ಹೊಸ ಅಧ್ಯಾಯ ಬರೆದ ‘ಕುಂದಾಪುರದ ಬಾಲೆ’

ಈ ವರ್ಷದ ಕಂಬಳದಲ್ಲಿ ಬಾಲಕಿಯೊಬ್ಬಳು ಭಾಗಿಯಾಗಿದ್ದು, ಎಲ್ಲರ ಗಮನ ಸೆಳೆದಿದ್ದಾಳೆ. ತಲೆಗೊಂದು ಮುಂಡಾಸು ಬಿಗಿದು ತನ್ನ ಮನೆಯ ಕೋಣಗಳ ಜೊತೆಗೆ ಕಂಬಳ ಗದ್ದೆಗೆ ಇಳಿದು ಹೊಸ ಅಧ್ಯಾಯ ‌ಬರೆದಿದ್ದಾಳೆ ತುಳುನಾಡ ಪೊಣ್ಣು.

Kambala in Udupi
ಹೊಸ ಅಧ್ಯಾಯ ಬರೆದ ಕುಂದಾಪುರದ ಬಾಲೆ

ಉಡುಪಿ:ಕೆಸರು ಗದ್ದೆಯಲ್ಲಿ ಕೊಬ್ಬಿದ ಕೋಣಗಳ ಓಟ, ತುಳುನಾಡಿನ ಅಪ್ಪಟ ಜನಪದ ಆಟ ಅಂದರೆ ಅದು ಕರಾವಳಿಯ ಕಂಬಳ. ಪ್ರತಿಬಾರಿ ಕಂಬಳದಲ್ಲಿ ಒಂದಲ್ಲೊಂದು ವಿಶೇಷತೆ ಇದ್ದೇ ಇರುತ್ತದೆ. ಈ ಬಾರಿ ಪುಟ್ಟ ಪೋರಿಯೊಬ್ಬಳು ಕಂಬಳ ಗದ್ದೆಗೆ ಇಳಿದು ಎಲ್ಲರ ಗಮನಸೆಳೆದಿದ್ದಾಳೆ.

ಕೆಸರು ಗದ್ದೆಯ ಆಟ ಕಂಬಳ, ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರವೆರೆಗೂ ಎಲ್ಲ ವಯೋಮಾನದವರನ್ನೂ ತನ್ನತ್ತ ಆಕರ್ಷಿಸುತ್ತದೆ. ಈ ವರ್ಷದ ಕಂಬಳದಲ್ಲಿ ಬಾಲಕಿಯೊಬ್ಬಳು ಭಾಗಿಯಾಗಿದ್ದು, ಎಲ್ಲರ ಗಮನ ಸೆಳೆದಿದ್ದಾಳೆ. ತಲೆಗೊಂದು ಮುಂಡಾಸು ಬಿಗಿದು ತನ್ನ ಮನೆಯ ಕೋಣಗಳ ಜೊತೆಗೆ ಕಂಬಳ ಗದ್ದೆಗೆ ಇಳಿದು ಹೊಸ ಅಧ್ಯಾಯ ‌ಬರೆದಿದ್ದಾಳೆ ತುಳುನಾಡ ಪೊಣ್ಣು. ಈ ಬಾಲೆಯ ಹೆಸರು ಚೈತ್ರಾ. ಕುಂದಾಪುರದ ಬೋಳಂಬಳ್ಳಿ ಗ್ರಾಮದ ಪರಮೇಶ್ವರ ಭಟ್ ಮತ್ತು ರಮ್ಯಾ ದಂಪತಿಯ ಹಿರಿಯ ಪುತ್ರಿ. 11 ವರ್ಷದ ಚೈತ್ರಾ ಆರನೇ ತರಗತಿ ಓದುತ್ತಿದ್ದಾಳೆ. ತಾನು ಕೂಡ ಕಂಬಳದಲ್ಲಿ ಕೋಣಗಳನ್ನು ಓಡಿಸಬೇಕು, ಕಂಬಳ ಕ್ಷೇತ್ರದ ಹುಸೇನ್ ಬೋಲ್ಟ್ ಶ್ರೀನಿವಾಸ ಗೌಡರಂತೆ ಮಿಂಚಬೇಕು ಅಂತ ಕನಸು ಕಾಣುತ್ತಿದ್ದಾಳೆ. ಇದಕ್ಕಾಗಿ ಮನೆಯ ಗದ್ದೆಯಲ್ಲಿ ಪ್ರಾಕ್ಟೀಸ್ ಕೂಡ ನಡೆಸುತ್ತಿದ್ದಾಳಂತೆ.

ಹೊಸ ಅಧ್ಯಾಯ ಬರೆದ ‘ಕುಂದಾಪುರದ ಬಾಲೆ’

ಕೋಣಗಳಿಗೆ ಸ್ನಾನ ಮಾಡಿಸುವ, ಹುರುಳಿ ತಿನ್ನಿಸುವ ಚೈತ್ರಾಗೆ ಪುಟ್ಟ ವಯಸ್ಸಿನಿಂದಲೂ ಕಂಬಳ ಎಂದರೆ ಅಚ್ಚುಮೆಚ್ಚು. ಮಗಳ ಈ ಆಸೆಗೆ ನೀರೆರೆದು ಪೋಷಿಸುವ ತಂದೆ ಪರಮೇಶ್ವರ ಭಟ್, ಪುತ್ರಿಯನ್ನು ಕಂಬಳದ ಜೂನಿಯರ್​ ವಿಭಾಗದಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸುತ್ತಿದ್ದಾರೆ. ಪರಮೇಶ್ವರ ಭಟ್ ಸುಮಾರು 25 ವರ್ಷಗಳಿಂದಲೂ ಕಂಬಳದ ಕೋಣಗಳನ್ನು ಸಾಕುತ್ತಿದ್ದಾರೆ.

ಇದನ್ನೂ ಓದಿ:ಸಿದ್ದರಾಮಯ್ಯ ಭೇಟಿ ಮಾಡಿದ ಇಬ್ರಾಹಿಂ: ಹಲವು ಮಹತ್ವದ ವಿಚಾರಗಳ ಚರ್ಚೆ

ಈ ಹಿಂದೆಂದು ಮಹಿಳೆಯರು ಕಂಬಳದಲ್ಲಿ ಭಾಗಿಯಾಗಿರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಪ್ರೇಕ್ಷಕರಾಗಿ ಬಂದು ಬೆಳಗಿನವರೆಗೂ ಕಂಬಳ ವೀಕ್ಷಿಸುತ್ತಾರೆ. ಚೈತ್ರಾ ಕಂಬಳ ಗದ್ದೆಗೆ ಇಳಿಯುವ ಮೂಲಕ ಹೊಸ ಅಧ್ಯಾಯ ಶುರು ಮಾಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಹಿಳೆಯರು ಭಾಗವಹಿಸಿ ಬೇಕೆಂಬುದೇ ಕಂಬಳಾಭಿಮಾನಿಗಳ ಆಶಯ.

Last Updated : Mar 5, 2021, 11:57 AM IST

ABOUT THE AUTHOR

...view details