ಕರ್ನಾಟಕ

karnataka

ETV Bharat / state

ಬಿಜೆಪಿಯವರೇನು ಕತ್ತೆ ಕಾಯ್ತಿದ್ದಾರಾ ?.. ನಳಿನ್ ಹೇಳಿಕೆಗೆ ಸೊರಕೆ ಕೆಂಡಾಮಂಡಲ - ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ

ಸಿದ್ದರಾಮಯ್ಯ ಸರ್ಕಾರ ಡ್ರಗ್ಸ್ ಮಾಫಿಯಾ ಜೊತೆ ನಂಟು ಹೊಂದಿತ್ತು ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ವಿನಯ್ ಕುಮಾರ್ ಸೊರಕೆ, ಬಿಜೆಪಿಯವರೇನು ಕತ್ತೆ ಕಾಯುತ್ತಿದ್ದರೇ ಎಂದು ಪ್ರಶ್ನಿಸಿದ್ದಾರೆ.

Vinay Kumar Sorak
ಕೆಂಡಾಮಂಡಲ

By

Published : Nov 28, 2020, 7:48 PM IST

ಉಡುಪಿ: ಸಿದ್ದರಾಮಯ್ಯ ಸರ್ಕಾರ ಡ್ರಗ್ಸ್ ಮಾಫಿಯಾ ಜೊತೆ ನಂಟು ಹೊಂದಿತ್ತು ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ವಿನಯ್ ಕುಮಾರ್ ಸೊರಕೆ, ಬಿಜೆಪಿಯವರೇನು ಕತ್ತೆ ಕಾಯುತ್ತಿದ್ದರೇ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿಯವರೇನು ಕತ್ತೆ ಕಾಯ್ತಿದ್ದಾರಾ ?.. ನಳಿನ್ ಹೇಳಿಕೆಗೆ ಸೊರಕೆ ಕೆಂಡಾಮಂಡಲ
ನಗರದಲ್ಲಿ ಮಾತನಾಡಿದ ಅವರು, ಒಂದು ವರ್ಷದಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಇವರೇನು ಮಾಡುತ್ತಿದ್ದಾರೆ? ಹಿಂದಿನ ಮೈತ್ರಿ ಸರ್ಕಾರ ಡ್ರಗ್ಸ್ ಮಾಫಿಯಾ ಜೊತೆ ನಂಟು ಹೊಂದಿದ್ದರೆ ಇವರು ವಿಧಾನಸಭೆಯಲ್ಲಿ ಯಾಕೆ ಮೌನ ವಹಿಸಿದ್ದರು? ಇವರು ಆಗ ಮಾತನಾಡಬಹುದಿತ್ತಲ್ವಾ ಎಂದು ಪ್ರಶ್ನಿಸಿದ್ದಾರೆ. ಗ್ರಾಮ ಪಂಚಾಯ್ತಿ ಚುನಾವಣೆ ಬಂದಿರೋದ್ರಿಂದ ಇವರು ಎಲ್ಲವನ್ನೂ ಸಿದ್ದರಾಮಯ್ಯನವರ ಮೇಲೆ ಹಾಕಲು ಪ್ರಯತ್ನ ಮಾಡುತ್ತಿದ್ದಾರೆ. ಇದು ಫಲ ಕೊಡುವುದಿಲ್ಲ ಎಂದು ಬಿಜೆಪಿಗರಿಗೆ ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details