ಉಡುಪಿ: ಮೈಸೂರು ಜಿಲ್ಲೆಯಲ್ಲಿ ದೇವಸ್ಥಾನ ಧ್ವಂಸ ಮಾಡಿರುವ ಕ್ರಮವನ್ನು ಕೇಮಾರು ಸಾಂದೀಪನಿ ಮಠದ ಈಶ ವಿಠಲದಾಸ ಸ್ವಾಮೀಜಿ ಖಂಡಿಸಿದ್ದಾರೆ.
ಮೈಸೂರಲ್ಲಿ ದೇವಸ್ಥಾನ ತೆರವು ಪ್ರಕರಣ: ಈಶ ವಿಠಲದಾಸ ಸ್ವಾಮೀಜಿ ಖಂಡನೆ - ಮೈಸೂರು ದೇವಸ್ಥಾನ ಧ್ವಂಸ
ಪಾಸಿಟಿವ್ ವೈಬ್ರೆಷನ್ ಇರುವ ಸ್ಥಳ ನೋಡಿ ನಮ್ಮ ಹಿರಿಯರು ದೇವಾಲಯ ನಿರ್ಮಾಣ ಮಾಡುತ್ತಿದ್ದರು. ಆದ್ರೆ ಈಗ ಅಂತಹ ದೇಗುಲಗಳನ್ನು ಕೆಡವುತ್ತಿರುವುದು ಬಹಳ ಬೇಸರದ ಸಂಗತಿ ಎಂದು ಮೈಸೂರು ದೇವಸ್ಥಾನ ತೆರವು ಪ್ರಕರಣಕ್ಕೆ ಈಶ ವಿಠಲದಾಸ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ.
ದೇವಸ್ಥಾನ ಧ್ವಂಸ ಪ್ರಕರಣಕ್ಕೆ ಖಂಡನೆ ವ್ಯಕ್ತಪಡಿಸಿದ ಈಶ ವಿಠಲದಾಸ ಸ್ವಾಮೀಜಿ
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಗಳು, ದೇಗುಲ ಕೆಡುವುತ್ತಿರುವುದು ದುರಂತ. ನಮ್ಮ ಹಿರಿಯರು ಸಾನಿಧ್ಯ, ಪಾಸಿಟಿವ್ ವೈಬ್ರೆಷನ್ ಇರುವ ಸ್ಥಳ ನೋಡಿ ದೇವಾಲಯ ನಿರ್ಮಾಣ ಮಾಡುತ್ತಿದ್ದರು. ಆದ್ರೆ ಈಗ ಅಂತಹ ದೇಗುಲಗಳ ತೆರವಿಗೆ ಮುಂದಾಗಿರುವುದು ಬಹಳ ಬೇಸರದ ಸಂಗತಿ ಎಂದರು.
ತಾಲಿಬಾನ್, ಪಾಕಿಸ್ತಾನದಲ್ಲಿ ದೇವಸ್ಥಾನ ಧ್ವಂಸ ಮಾಡಿರುವುದನ್ನು ಮಾಧ್ಯಮಗಳಲ್ಲಿ ನೋಡಿದ್ದೇವೆ. ಆದ್ರೆ ಈಗ ಹಿಂದೂ ರಾಷ್ಟ್ರದಲ್ಲೇ ಈ ರೀತಿ ದೇವಾಲಯಗಳನ್ನು ಕೆಡವುತ್ತಿರುವುದು ಖಂಡನೀಯ. ಸರ್ಕಾರ ಕೂಡಲೇ ಇದನ್ನು ನಿಲ್ಲಿಸಬೇಕು ಎಂದು ಈಶ ವಿಠಲದಾಸ ಸ್ವಾಮೀಜಿ ಆಗ್ರಹಿಸಿದರು.