ಕರ್ನಾಟಕ

karnataka

ETV Bharat / state

ಉಡುಪಿಯಲ್ಲಿ ಶುರುವಾಗಿದೆ ಕಾರ್​ವಾರ್​... ಸದ್ದು ಮಾಡ್ತಿದೆ ಚೌಕಿದಾರ್ ಸ್ಟಿಕ್ಸರ್ಸ್..!​​ - Udupi

ದೇಶಾದ್ಯಂತ ‘ಮೇ ಭೀ ಚೌಕಿದಾರ್ ’ಹೆಸರಲ್ಲೇ ಅಭಿಯಾನ ನಡೆಯುತ್ತಿದೆ. ಈ ನಡುವೆ ಉಡುಪಿಯಲ್ಲಿ ಬಿಜೆಪಿ ನಾಯಕರು ‘ನಾನೂ ಚೌಕೀದಾರ’ ಎಂಬ ಸ್ಟಿಕ್ಕರನ್ನು ಕಾರಿಗೆ ಅಂಟಿಸಿ ಪ್ರಚಾರ ಮಾಡುತ್ತಿದ್ದಾರೆ

ಕಾರ್​ವಾರ್

By

Published : Apr 1, 2019, 7:42 PM IST

ಉಡುಪಿ:ಲೋಕಸಭಾ ಚುನಾವಣೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಕಣ ರಂಗೇರುತ್ತಿದೆ. ಪ್ರಚಾರದ ಅಬ್ಬರ ಜಾಸ್ತಿಯಾಗುತ್ತಿದ್ದಂತೆ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾರ್ಯಕರ್ತರ ನಡುವೆ ‘ಕಾರ್ ವಾರ್’ ಶುರುವಾಗಿದೆ.

ಸಂಸಸ್​ನಲ್ಲಿ ಪ್ರಧಾನಿ ಮೋದಿ ನಾನು ದೇಶದ ಚೌಕಿದಾರ. ಭ್ರಷ್ಟಾಚಾರ ನಡೆಯದಂತೆ, ಶತ್ರುರಾಷ್ಟ್ರಗಳಿಂದ ದೇಶವನ್ನು ಕಾವಲುಗಾರನಂತೆ ರಕ್ಷಣೆ ಮಾಡುತ್ತೇನೆ ಎಂದಿದ್ದರು. ನಂತರದ ದಿನಗಳಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಚೌಕಿದಾರ್ ಶಬ್ದವನ್ನು ಫೋಕಸ್ ಮಾಡಿ ಮೋದಿ ವಿರುದ್ಧದ ಪ್ರಚಾರಕ್ಕೆ ಈ ಶಬ್ದ ಬಳಸಿದರು.

ಪ್ರತಿಯೊಂದು ಭಾಷಣದಲ್ಲೂ ‘ಚೌಕಿದಾರ್ ಚೋರ್ ಹೇ’ ಎಂದಿದ್ದರು. ರಫೇಲ್, ನೀರವ್ ಮೋದಿ ಗೋಲ್​​ಮಾಲ್​​, ಅದಾನಿ,ಅಂಬಾನಿ ವಿಚಾರದ ಪ್ರತಿಭಟನೆಗಳಲ್ಲಿ ಚೌಕಿದಾರ್ ಚೋರ್ ಎಂಬ ಘೋಷವಾಕ್ಯ ಬಳಸಲಾಗಿತ್ತು.

ನಾಮಾ ಚೌಕಿದಾರ್ ಹಾಗೂ ಚೌಕಿದಾರ್ ಚೋರ್​ ಹೇ ಎನ್ನುವ ಕಾರ್​ ಸ್ಟಿಕರ್ಸ್​​

ಲೋಕಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಬಿಜೆಪಿ ಇದನ್ನೇ ಅಸ್ತ್ರವಾಗಿ ಬಳಸಿ ರಾಹುಲ್ ಗಾಂಧಿಗೆ ತಿರುಗೇಟು ನೀಡಲು ಮುಂದಾಗಿದೆ. ದೇಶಾದ್ಯಂತ ‘ಮೇ ಭೀ ಚೌಕಿದಾರ್ ’ಹೆಸರಲ್ಲೇ ಅಭಿಯಾನ ನಡೆಯುತ್ತಿದೆ. ಈ ನಡುವೆ ಉಡುಪಿಯಲ್ಲಿ ಬಿಜೆಪಿ ನಾಯಕರು ‘ನಾನೂ ಚೌಕೀದಾರ’ ಎಂಬ ಸ್ಟಿಕ್ಕರ್​ ಅನ್ನು ಕಾರುಗಳಿಗೆ ಅಂಟಿಸಿ ಪ್ರಚಾರ ಮಾಡುತ್ತಿದ್ದರು.

ಸ್ಟಿಕ್ಕರ್ ಕ್ಯಾಂಪೇನ್​​​​​ಗೆ ಟಾಂಗ್ ನೀಡಲು ಮುಂದಾಗಿರುವ ಕಾಂಗ್ರೆಸ್ ಕಾರ್ಯಕರ್ತರು ‘ಚೌಕಿದಾರ್ ಚೋರ್ ಹೇ’ ಸ್ಟಿಕ್ಕರ್​​​​​ಗಳನ್ನು ಕಾರಿಗೆ ಅಂಟಿಸಿ ಓಡಾಡುತ್ತಿದ್ದಾರೆ. ಎರಡೂ ಪಕ್ಷಗಳ ನಾಯಕರು ಸ್ಟಿಕ್ಕರ್ ಮೂಲಕ ಪ್ರಚಾರದ ಕಾವು ಹೆಚ್ಚಿಸಿದ್ದಾರೆ. ಒಟ್ಟಾರೆ ಉಡುಪಿಯಲ್ಲಿ ಈ ಕಾರ್ ವಾರ್ ಜೋರಾಗಿದೆ.

ABOUT THE AUTHOR

...view details