ತುಮಕೂರು :ಮೇಕೆದಾಟು ವಿಚಾರದಲ್ಲಿ ನಾವು ಮುಖ್ಯಮಂತ್ರಿಗಳ ಜೊತೆಯಲ್ಲಿರುತ್ತೇವೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದ್ದಾರೆ. ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆ ದರ್ಶನ ಪಡೆದ ನಂತರ ಪತ್ರಕರ್ತರೊಂದಿಗೆ ಸಚಿವರು ಮಾತನಾಡಿದ್ರು. ಮುಖ್ಯಮಂತ್ರಿಗಳು ಈಗಾಗಲೇ ಎಲ್ಲ ಸ್ಪಷ್ಟನೆ ನೀಡಿದ್ದಾರೆ. ಮೇಕೆದಾಟು ಕರ್ನಾಟಕದ ಹಕ್ಕಾಗಿದೆ. ಮುಖ್ಯಮಂತ್ರಿಗಳ ಬೆನ್ನೆಲುಬಾಗಿ ನಾವು ಇರುತ್ತೇವೆ ಎಂದರು.
ಮೇಕೆದಾಟು ವಿಚಾರದಲ್ಲಿ ನಾವು ಮುಖ್ಯಮಂತ್ರಿಗಳ ಜೊತೆಯಲ್ಲಿರುತ್ತೇವೆ : ಕೇಂದ್ರ ಸಚಿವ ಭಗವಂತ ಖೂಬಾ
ರಾಜ್ಯದ ಪಾಲಿನ ಜಿಎಸ್‌ಟಿ ವಿಚಾರದಲ್ಲಿ ಕಾಂಗ್ರೆಸ್ಗೆ ರಾಜಕೀಯ ಮಾಡಲು ಬೇರೆ ವಿಚಾರ ಇಲ್ಲ, ಅದಕ್ಕೆ ಇದನ್ನ ಎತ್ತಿಕೊಂಡಿದ್ದಾರೆ ಎಂದರು. ಇದರಲ್ಲಿಯೂ ರಾಜಕೀಯ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಪೂರ್ಣ ಸ್ವಾತಂತ್ರ್ಯ ಕೊಟ್ಟಿದೆ. ಕಾಂಗ್ರೆಸ್ನವರಿಗೆ ಜಿಎಸ್‌ಟಿ ಮಾಡಲು ಆಗಿಲ್ಲ. ಯಾಕೆ ಆಗಿಲ್ಲ? ನಾವು ಮಾಡಿದಾಗ ಟೀಕೆ-ಟಿಪ್ಪಣಿ ಮಾಡ್ತಾರೆ..
ಕೇಂದ್ರ ಸಚಿವ ಭಗವಂತ ಖೂಬಾ ಹೇಳಿಕೆ
ರಾಜ್ಯದ ಪಾಲಿನ ಜಿಎಸ್‌ಟಿ ವಿಚಾರದಲ್ಲಿ ಕಾಂಗ್ರೆಸ್ಗೆ ರಾಜಕೀಯ ಮಾಡಲು ಬೇರೆ ವಿಚಾರ ಇಲ್ಲ, ಅದಕ್ಕೆ ಇದನ್ನ ಎತ್ತಿಕೊಂಡಿದ್ದಾರೆ ಎಂದರು. ಇದರಲ್ಲಿಯೂ ರಾಜಕೀಯ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಪೂರ್ಣ ಸ್ವಾತಂತ್ರ್ಯ ಕೊಟ್ಟಿದೆ. ಕಾಂಗ್ರೆಸ್ನವರಿಗೆ ಜಿಎಸ್‌ಟಿ ಮಾಡಲು ಆಗಿಲ್ಲ. ಯಾಕೆ ಆಗಿಲ್ಲ? ನಾವು ಮಾಡಿದಾಗ ಟೀಕೆ-ಟಿಪ್ಪಣಿ ಮಾಡ್ತಾರೆ ಎಂದರು.