ತುಮಕೂರು: ವಸಂತ ಮಾಸದ ಮೊದಲನೇ ಹಬ್ಬವಾದ ಯುಗಾದಿ ದಿನದಂದು ನಗರದ ಎಲ್ಲಾ ದೇವಾಲಯಗಳಲ್ಲೂ ವಿಶೇಷ ಪೂಜಾ ಕೈಂಕರ್ಯಗಳು ವಿಜೃಂಭಣೆಯಿಂದ ಜರುಗಿದವು.
ತುಮಕೂರಿನಲ್ಲಿ ಹೀಗಿತ್ತು ನವ ವಸಂತದ ಸಂಭ್ರಮ - undefined
ವಸಂತ ಮಾಸದ ಮೊದಲನೇ ಹಬ್ಬ ಯುಗಾದಿ ಹಿನ್ನೆಲೆ ಎಲ್ಲಾ ದೇವಾಲಯಗಳಲ್ಲೂ ವಿಶೇಷ ಪೂಜಾ ಕೈಂಕರ್ಯ ನಡೆಯಿತು.
ಯುಗಾದಿ ಹಬ್ಬದ ಪ್ರಯುಕ್ತ ಎಲ್ಲಾ ದೇವಾಲಯಗಳಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಿ, ಪೂಜೆ ಸಲ್ಲಿಸಲಾಯಿತು. ಬಟವಾಡಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ನರಹರಿ ಮಾತನಾಡಿ, ಹೊಸ ವರ್ಷದ ಆಗಮನವನ್ನು ಯುಗಾದಿ ಎಂದು ಕರೆಯುತ್ತೇವೆ. ಪುರಾಣಗಳ ಪ್ರಕಾರ ವಿಷ್ಣುವಿನ ಉದರದಿಂದ ಬ್ರಹ್ಮ ಕಮಲ ಉದ್ಭವಿಸಿದ ದಿನವೇ ಯುಗಾದಿ ಎನ್ನಲಾಗುತ್ತದೆ. ಪ್ರತಿ ವರ್ಷವೂ ಈ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡಲಾಗುವುದು. ಯುಗಾದಿ ಹಬ್ಬವನ್ನು ಸೃಷ್ಟಿಯ ಆರಂಭದ ದಿನ ಎಂದು ಸಹ ಕರೆಯಲಾಗುತ್ತದೆ. ಬೇವು-ಬೆಲ್ಲ ಹಂಚುವ ಮೂಲಕ ಸಿಹಿ-ಕಹಿ ಎಲ್ಲವೂ ಸಮಾನವಾಗಿ ದೊರೆಯಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಗುತ್ತದೆ ಎಂದು ತಿಳಿಸಿದರು.