ತುಮಕೂರು: ಜಿಲ್ಲೆಯಲ್ಲಿ ಈವರೆಗೆ 1268 ಕೊರೊನಾ ಶಂಕಿತ ಮಾದರಿಗಳು ನೆಗೆಟಿವ್ ಬಂದಿದ್ದು, ಇನ್ನೂ 261 ಮಂದಿಯ ತಪಾಸಣಾ ವರದಿ ನಿರೀಕ್ಷೆಯಲ್ಲಿದ್ದೇವೆ ಎಂದು ಡಿಹೆಚ್ಓ ಡಾ. ಚಂದ್ರಿಕಾ ಸ್ಪಷ್ಟಪಡಿಸಿದ್ದಾರೆ.
261 ಜನರ ತಪಾಸಣಾ ವರದಿ ನಿರೀಕ್ಷೆಯಲ್ಲಿ ತುಮಕೂರು ಜಿಲ್ಲಾಡಳಿತ
ತುಮಕೂರಿನಲ್ಲಿ ಈವರೆಗೆ 1268 ಮಾದರಿಗಳು ನೆಗೆಟಿವ್ ಬಂದಿದ್ದು, ಇನ್ನೂ 261 ಮಂದಿಯ ತಪಾಸಣಾ ವರದಿ ನಿರೀಕ್ಷೆಯಲ್ಲಿದ್ದೇವೆ ಎಂದು ಡಿಹೆಚ್ಓ ಡಾ. ಚಂದ್ರಿಕಾ ತಿಳಿಸಿದ್ದಾರೆ.
261 ಜನರ ತಪಾಸಣಾ ವರದಿ ನಿರೀಕ್ಷೆಯಲ್ಲಿ ತುಮಕೂರು ಜಿಲ್ಲಾಡಳಿತ
ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಜಿಲ್ಲೆಗೆ ಹೊರದೇಶದಿಂದ ಬಂದಿರುವ 480 ಮಂದಿಯನ್ನು ತೀವ್ರ ನಿಗಾವಣೆಯಲ್ಲಿಡಲಾಗಿತ್ತು. ಈ ಪೈಕಿ ಹೋಂ ಕ್ವಾರಂಟೈನ್ನಲ್ಲಿ ಯಾರೂ ಇರುವುದಿಲ್ಲ. ಒಟ್ಟು 479 ಮಂದಿಯನ್ನು ಐಸೊಲೇಷನ್ನಲ್ಲಿಡಲಾಗಿದ್ದು, ಆಸ್ಪತ್ರೆಯ ಐಸೊಲೇಷನ್ನಲ್ಲಿರುವವರು 90 ಮಂದಿ. 370 ಜನರ 28 ದಿನಗಳ ಹೋಂ ಕ್ವಾರಂಟೈನ್ ಅವಧಿ ಪೂರ್ಣಗೊಂಡಿದೆ.
ಈವರೆಗೆ 1545 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ತಪಾಸಣೆಗೊಳಪಡಿಸಿದೆ. ಆ ಪೈಕಿ 1268 ಮಾದರಿಗಳು ನೆಗೆಟಿವ್ ಬಂದಿದ್ದು, 13 ಮಾದರಿಗಳು ತಿರಸ್ಕೃತಗೊಂಡಿವೆ ಎಂದು ಅವರು ತಿಳಿಸಿದ್ದಾರೆ.