ತುಮಕೂರು:ತುಮಕೂರು ನಗರದ ಕರಿಬಸವೇಶ್ವರ ಮಠದಲ್ಲಿ ಸಾಕಿರುವ ಲಕ್ಷ್ಮಿ ಹೆಸರಿನ ಆನೆಗೆ ಪ್ರತಿನಿತ್ಯ ಸ್ನಾನ ಮಾಡಿಸಲು ಮಠದಲ್ಲಿ ನೀರಿನ ಅಭಾವ ಎದುರಾಗಿದೆ. ಹೀಗಾಗಿ ಸಮೀಪದ ಗ್ಯಾರೇಜ್ಗೆ ಕರೆದುಕೊಂಡು ಹೋಗಿ ಸ್ನಾನ ಮಾಡಿಸಲಾಗುತ್ತಿದೆ.
ಮಠದಲ್ಲಿ ನೀರಿನ ಕೊರತೆ, ಆನೆಗೆ ಪ್ರತಿನಿತ್ಯ ಗ್ಯಾರೇಜ್ನಲ್ಲೇ ಸ್ನಾನ- ವಿಡಿಯೋ
ಪ್ರಸ್ತುತ ಮಠದಲ್ಲಿ ನೀರಿನ ಅಭಾವ ಎದುರಾಗಿರುವುದರಿಂದ ಕೆಲಸಗಾರರು ಗ್ಯಾರೇಜ್ನಲ್ಲಿ ಆನೆಗೆ ನಿತ್ಯ ಸ್ನಾನ ಮಾಡಿಸುತ್ತಿದ್ದಾರೆ.
ತುಮಕೂರಿನ ಮಠದ ಆನೆಗೆ ಗ್ಯಾರೇಜ್ನಲ್ಲಿ ನಿತ್ಯ ಸ್ನಾನ
ಸುಮಾರು 20 ವರ್ಷ ವಯಸ್ಸಿನ ಆನೆಯ ಲಾಲನೆ-ಪಾಲನೆ ಕಳೆದ ಹಲವು ವರ್ಷಗಳಿಂದ ಮಠದಲ್ಲಿ ನಡೆಯುತ್ತಿದೆ. ಪ್ರಸ್ತುತ ಮಠದಲ್ಲಿ ನೀರಿನ ಕೊರತೆ ಎದುರಾಗಿದ್ದು ವಿಧಿಯಿಲ್ಲದೆ ಕೆಲಸಗಾರರು ಗ್ಯಾರೇಜ್ನಲ್ಲಿ ನಿತ್ಯ ಸ್ನಾನ ಮಾಡಿಸುವಂತಾಗಿದೆ.
ಇದನ್ನೂ ಓದಿ:ಅಪಘಾತದಲ್ಲಿ ಯುವಕನ ಬ್ರೈನ್ ಡೆಡ್; ಅಂಗಾಂಗ ದಾನಕ್ಕೆ ಪೋಷಕರ ನಿರ್ಧಾರ